ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಇಟಗಿ ಮಸಬಹಂಚಿನಾಳ ರಸ್ತೆ ಅಪಘಾತದಲ್ಲಿ ಮೃತರಾದ ಯರೇಹಂಚಿನಾಳ ಪಿಡಿಒ ಅಡಿವೆಪ್ಪ ಯಡಿಯಾಪೂರ ಇವರ ನಿವಾಸಕ್ಕೆ ಬೆಣಕಲ್ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮವ್ವ ಇವರ ಪತಿ ಜಂಬಣ್ಣ ರುದ್ರಾಕ್ಷಿ ಹಾಗೂ ಗ್ರಾಮ ಪಂಚಾಯತಿ ಕಾರ್ಯದರ್ಶಿ ಮಾರುತಿಗೊಂಡಬಾಳ ಇವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ನಂತರದಲ್ಲಿ ಮುಖಂಡ ಜಂಬಣ್ಣ ರುದ್ರಾಕ್ಷಿ ಮಾತನಾಡಿ ಪಿಡಿಒ ಅಡಿವೆಪ್ಪ ಇವರು ನಮ್ಮ ಗ್ರಾಮವಾದ ಬೆಣಕಲ್ ನವರೇ ಆಗಿದ್ದು ಸೇವೆಗೆ ಸೇರಿ 6ವರ್ಷಗಳಾಗಿದ್ದು, ಈ ಮೊದಲು ನಾಲ್ಕು ವರ್ಷಗಳ ಕಾಲ ಅಫ್ಜಲ್ ಪೂರ ತಾಲೂಕಿನಲ್ಲಿ, ನಂತರ ಕುಕನೂರು ತಾಲೂಕಿನ ಭಾನಾಪೂರ ಗ್ರಾಮ ಪಂಚಾಯತಿಯಲ್ಲಿ ಆರು ತಿಂಗಳು ಸೇವೆ ಸಲ್ಲಿಸಿದ್ದರು, ನಂತರ ಈ ಒಂದು ವರ್ಷದ ಹಿಂದೆ ಯರೇಹಂಚಿನಾಳ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಸೆ. 17ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ತ ದ್ವಜಾರೋಹಣಕ್ಕಾಗಿ ಮಂಗಳವಾರ ಬೆಳಗ್ಗೆ 8 ಗಂಟೆಗೆ ಬೆಣಕಲ್ ನಿಂದ ಮಸಬ ಹಂಚಿನಾಳ ಮಾರ್ಗವಾಗಿ ಯರೇಹಂಚಿನಾಳಗೆ ತೆರಳುತ್ತಿದ್ದ ವೇಳೆ ಮಸಬಹಂಚಿನಾಳ ಇಟಗಿ ಮಾರ್ಗ ಮಧ್ಯೆ ಹಾಲಿನ ವಾಹನ ಹಾಗೂ ಇವರ ಬೈಕ್ ಮಧ್ಯೆ ಮುಖಾ ಮುಖಿ ಡಿಕ್ಕಿಯಾಗಿ ಈ ದುರ್ಘಟನೆ ಸಂಬವಿಸಿತು, ಈ ಘಟನೆಯೊಂದು ನಡೆಯದಿದ್ದಲ್ಲಿ ಪಾರಾಗಬಹುದಾಗಿತ್ತು ಎಂದರು.
ಈ ವ್ಯಕ್ತಿಯು ಎಲ್ಲರೊಂದಿಗೆ ಸೌಹಾರ್ದತೆಯಿಂದ ಇರುತ್ತಿದ್ದವರು, ಇವರು ಎಲ್ಲೇ ಕೆಲಸ ಮಾಡಿದರು ಸ್ನೇಹ ಜೀವಿಯಾಗಿ ಎಲ್ಲರೊಂದಿಗೆ ಬೆರೆತು ನಡೆಯುತ್ತಿದ್ದರು.
ಇವರ ಈ ಘಟನೆಯಿಂದಾಗಿ ನಮ್ಮ ಗ್ರಾಮಸ್ಥರಿಗೆ ತುಂಬಾ ನೋವುಂಟಾಗಿದ್ದು, ಮನೆಗೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ಆ ಭಗವಂತ ದುಖಃ ಭರಿಸುವ ಶಕ್ತಿಯನ್ನು ನೀಡಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿ ಉಮೇಶಗೌಡ್ರ ಯಡಿಯಾಪೂರಗೌಡ್ರ, ಚಂದ್ರಪ್ಪ ವಜ್ರಬಂಡಿ, ಚಂದ್ರಶೇಖರ್ ಮೈನಳ್ಳಿ ,ರವಿಚಂದ್ರ ಕುಂಬಾರ, ನಿಂಗಪ್ಪ ಕಾಳಿ ಇತರರು ಇದ್ದರು.