Breaking News

ಸ್ವಚ್ಚತಾ ಕಾರ್ಯವು ಮೊದಲು ನಮ್ಮಿಂದಲೆ ಪ್ರಾರಂಭವಾಗಲಿ ಶಾಸಕ ಎಮ್ ಆರ್ ಮಂಜನಾಥ್

Let the cleanliness work start from us first MLA MR Manjanath

ಜಾಹೀರಾತು

ವರದಿ : ಬಂಗಾರಪ್ಪ .ಸಿ
ಹನೂರು :ಸ್ವಚ್ಚತಾ ಕಾರ್ಯಕ್ಕಾಗಿ ಮೊದಲು ನಾವು ನಾಲ್ಕೈದು ಗ್ರಾಮಗಳನ್ನು ಆಯ್ಕೆ ಮಾಡಿದ್ದು ನಂತರ ಎಲ್ಲಾ ಗ್ರಾಮಗಳಿಗೂ ವಿಸ್ತಾರಣೆ ಮಾಡಲಾಗುವುದು ಸರ್ಕಾರವು ಈಗಾಗಲೇ ಸ್ವಭಾವ ಸ್ವಚ್ಚತೆ,ಸಂಸ್ಕಾರ ಸ್ವಚ್ಚತೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕರಾದ ಎಂ.ಆರ್ ಮಂಜುನಾಥ್ ಗಿಡಕ್ಕೆ ನೀರೆರೇಯುವುದರ ಮೂಲಕ  ಚಾಲನೆ ನೀಡಿದದರು.

ಹನೂರು ಪಟ್ಟಣದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಆವರಣದಲ್ಲಿ ಕರ್ನಾಟಕ ಸರ್ಕಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿ.ಪಂ.ಚಾಮರಾಜನಗರ, ತಾ.ಪಂ.ಹನೂರು ಇವರ ವತಿಯಿಂದ ಏರ್ಪಡಿಸಲಾಗಿದ್ದ ಸ್ವಚತೆಯೇ ಸೇವೆ 2024 ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಸ್ವಚ್ಛತೆ ಪ್ರತಿ ಮನೆಯಿಂದ ಪ್ರಾರಂಭವಾಗಬೇಕು ಶಾಲಾ ಕಾಲೇಜುಗಳಲ್ಲಿ ಇದು ಒಂದು ಧ್ಯೇಯ ವಾಕ್ಯವಾಗಬೇಕು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರ ಸೇವೆ ಅನನ್ಯ. ಸಾರ್ವಜನಿಕ ಆಯಾ ಗ್ರಾಮ ಪಟ್ಟಣ ನಗರಗಳಲ್ಲಿ ಹಸಿ ಕಸ, ಒಣ ಕಸ, ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಗೆ ಸಹಕರಿಸಬೇಕು. ಹನೂರು ಪ.ಪಂ.ಹಾಗೂ ಗ್ರಾ.ಪಂ.ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕ್ರಮವಹಿಸಲು ಸೂಚಿಸಿದ್ದೇನೆ. ಇತ್ತೀಚಿಗೆ ಜಿಲ್ಲೆಯಲ್ಲಿ ಪ್ರಥಮವಾಗಿ ಬೂದು ನಿರ್ವಹಣಾ ಯೋಜನೆಯ 9 ಕೋಟಿ ರೂ.ಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ಯೋಜನೆಯ ಉದ್ದೇಶ ಚರಂಡಿ ಮತ್ತು ಕಲುಷಿತ ನೀರನ್ನು ಶುದ್ದಿಗೊಳಿಸಿ ಕೆರೆ ಕಟ್ಟೆ ನದಿಗಳಿಗೆ ಬಿಡುವುದಾಗಿದೆ ಜೊತೆಗೆ ತ್ಯಾಜ್ಯಗಳ ನಿರ್ವಹಣೆ ಮಾಡುವುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಕಾರ್ಯ ನಿರ್ವಹಣೆ ಅಧಿಕಾರಿ
ಕೆ ಉಮೇಶ್ ಮಾತನಾಡಿ ಸ್ವಚ್ಚತಾ ಸ್ವಬಾಗಿ , ಸ್ವಬಾವ ಸ್ವಚ್ಚತಾ, ಸಂಸ್ಕಾರ ಸ್ವಚ್ಚತಾ , ದಿನಾಂಕ 17/9 2024 ರಿಂದ 10/ 2/2024ರವರೆಗೆ ಈ ಆಂದೋಲನ ಮಾಡಲಾಗುತ್ತದೆ ಗ್ರಾಮಸಭೆ,ಕೆರೆ ಸಂರಕ್ಷಣಾ ,ಬೀದಿ ನಾಟಕ,ಹೀಗೆ ಹಲವಾರು ರೀತಿಯಲ್ಲಿ ಭಾಗವಹಿಸಿ ಕಾರ್ಯ ಮಾಡಬೇಕು ,ನಾವು ಮೊದಲಿಗೆ ನಮ್ಮ ಮನೆಮುಂದೆ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡ ಬೇಕು ಎಂದರು .
ಇದೇ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ
ಹರೀಶ್ ಕುಮಾರ್ ಮಾತನಾಡಿ ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಮನೆಯಿಂದ ತ್ಯಾಜ್ಯ ನಿರ್ವಹಣೆ ಸರಿಯಾದ ರೀತಿಯಲ್ಲಿ ಮಾಡಬೇಕು ಅದನ್ನು ಮಾಡವಲ್ಲಿ ಎಲ್ಲಾರು ಎಡವಿದ್ದೆವೆ ,ಶುಚಿತ್ವಕ್ಕಾಗಿ ಸರ್ಕಾರವು ಕೋಟ್ಯಂತರ ಹಣವನ್ನು ವ್ಯಯಿಸುತ್ತದೆ ಇದರಿಂದ ನಮ್ಮ ಹಣವೆ ಪೋಲಾಗುತ್ತದೆ . ನಮ್ಮ ಮಕ್ಕಳು ಮೊದಲಿಗೆ ತಮ್ಮ ಮನೆ ಮತ್ತು ಬಿದಿಯನ್ನು ಸ್ವಚ್ಚತಾ ಕಾರ್ಯಮಾಡಬೇಕು . ಹನೂರು ಪಟ್ಟಣ ಪಂಚಾಯತಿಯಲ್ಲಿ ಪೌರಕಾರ್ಮಿಕರ ಕೊರತೆಯಿದೆ ಅದನ್ನು ಮೇಲಾಧಿಕಾರಿಗಳ ಗಮನ ಸೆಳೆಯುವ ಕೆಲಸ ಮಾಡಿದ್ದೇವೆ ,ಶುಚಿತ್ವ ಕಾಪಾಡುವುದರಿಂದ ನಮಗೆ ಶುದ್ದ ನೀರು ,ಗಾಳಿ ,ಆಹಾರ ದೊರೆಯುವಂತೆ ಮಾಡಿಕೊಳ್ಳಬೇಕು ಎಂದರು .

ಇದೇ ಸಂದರ್ಭದಲ್ಲಿ ಪ.ಪಂ.ಅಧ್ಯಕ್ಷೆ ಮುಮ್ತಾಜ್ ಬಾನು, ಉಪಾಧ್ಯಕ್ಷರಾದ ಆನಂದಕುಮಾರ್, ಸದಸ್ಯರಾದ , ಮಹೇಶ್ ನಾಯಕ, ಸಂಪತ್ ಕುಮಾರ್, ಸುದೇಶ್, ಸೋಮಶೇಖರ್, ಗಿರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ಪ.ಪಂ.ಮುಖ್ಯಾಧಿಕಾರಿ ಅಶೋಕ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಅಸಹಕಾರ ಚಳವಳಿ ಆರಂಭಿಸಿದ ನರೇಗಾ ನೌಕರರು

NREGA employees have started an indefinite non-cooperation movement by stopping work. 6 ತಿಂಗಳ ಬಾಕಿ ವೇತನ …

Leave a Reply

Your email address will not be published. Required fields are marked *