Breaking News

ಖಾಸಗಿ ಶಾಲೆಯ ಆಡಳಿತ ಬಸ್ ಗಳು ನಿಯಮ ಪಾಲನೆ ಮಾಡಿ :ಮೇಹಬೂಬ್ ಬೀ

Private school management buses should follow the rules: Mehboob Bee

ಜಾಹೀರಾತು


ಮಾನ್ವಿ: ಪಟ್ಟಣದ ಕಾಕತೀಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಶಾಲಾ ವಾಹನ ಸುರಕ್ಷತೆ ಅಂಗವಾಗಿ ನಡೆದ ಮಾನ್ವಿ,ಸಿರವಾರ,ದೇವದುರ್ಗ ತಾಲೂಕುಗಳ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರ ಸಭೆಯಲ್ಲಿ ರಾಯಚೂರು ಜಿಲ್ಲಾ ಸಹಾಯಕ ಆಯುಕ್ತರಾದ ಮೇಹಬೂಬ್ ಬೀ ಮಾತನಾಡಿ ಸೇ.5 ರಂದು ಮಾನ್ವಿ ತಾಲೂಕಿನಲ್ಲಿ ಶಾಲಾ ವಾಹನ ಹಾಗೂ ಸಾರಿಗೆ ಸಂಸ್ಥೆಯ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು ಅನೇಕ ವಿದ್ಯಾರ್ಥಿಗಳು ಗಂಭೀರವಾಗಿ

ಗಾಯಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದೆ ಇರುವುದಕ್ಕಾಗಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಮಾನ್ವಿ ಮತ್ತು ಸಿರವಾರ ತಾಲೂಕಿನ 120 , ದೇವದುರ್ಗ ತಾಲೂಕಿನ 20 ಶಾಸಗಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ ಸಭೆ ಕರೆಯಲಾಗಿದ್ದು ಜಿಲ್ಲೆಯಲ್ಲಿನ ಶಾಲಾ ವಾಹನ ಹೊಂದಿರುವ ಎಲ್ಲಾ ಖಾಸಗಿ ಶಾಲೆಗಳು ಮಾನ್ಯ ಸುಪ್ರೀಂ ಕೋರ್ಟ ನೀಡಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು.15 ದಿನಗಳೊಳಗಾಗಿ ಜಿಲ್ಲೇಯಲ್ಲಿನ ಎಲ್ಲಾ ಖಾಸಗಿ ಶಾಲೆಗಳಲ್ಲಿ ಬಸ್ ಕ್ಯಾಬ್ ಸುರಕ್ಷತ ಕಮಿಟಿಯನ್ನು ಶಾಲೆಯ ಅಧ್ಯಕ್ಷರು, ಮುಖ್ಯಗುರುಗಳು, ವಾಹನ ಚಾಲಕರು, ಪಾಲಕರನ್ನು ಒಳಗೊಂಡಂತೆ ರಚಿಸಿ ಪ್ರತಿ ತಿಂಗಳು ನಿಯಮಿತವಾಗಿ ಸಭೆಯನ್ನು ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವರದಿಯನ್ನು ನೀಡಬೇಕು. ತಹಸೀಲ್ದಾರಾರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಖಾಸಗಿ ಶಾಲೆಗಳಲ್ಲಿನ ಶಾಲಾ ವಾಹನಗಳನ್ನು ಪರಿಶೀಲಿಸಿ ವರದಿ ನೀಡಬೇಕು ವಾಹನದ ಸಾಮಾರ್ಥ್ಯಕ್ಕೆ ಅನುಸಾರವೇ ಮಕ್ಕಳನ್ನು ತುಂಬಬೇಕು ಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವಂತೆ ಸೂಚಿಸಿದರು.
ರಾಯಚೂರು ಜಿಲ್ಲಾ ರಸ್ತೆ ಸಾರಿಗೆ ಇಲಾಖೆಯ ಅಧಿಕಾರಿ ವಿನಯ ಕಟೋಕರ್ ಮಾತನಾಡಿ 2019ರಲ್ಲಿ ಮಾನ್ಯ
ಸುಪ್ರೀಂ ಕೋರ್ಟ ಹೊರಡಿಸಿರುವ ಮಾರ್ಗಸೂಚಿಯಂತೆ
ಹೆಚ್ಚಿನ ವಿದ್ಯಾರ್ಥಿಗಳನ್ನು ತುಂಬಿರುವ ಶಾಲಾ ವಾಹನ ಹಾಗೂ ಅಟೋಗಳು ಕಂಡುಬಂದಲ್ಲಿ ಇಲಾಖೆಯಿಂದ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಿಯಮಗಳು
=] ಆರ್.ಟಿ.ಈ .ಇಲಾಖೆಯಿಂದ ಶಾಲಾ ವಾಹನ ಫಿಟನೇಸ್ ಪ್ರಮಾಣ ಪತ್ರವನ್ನು ಪಡೆಯಬೇಕು.
=] ಶಾಲಾ ಮಕ್ಕಳನ್ನು ಕರೆದೊಯ್ಯುವ ಬಸ್ ಹಳದಿ ಬಣ್ಣದಿಂದ ಕೂಡಿದ್ದು, ಬಸ್ ನ ಎರಡು ಬದಿಯಲ್ಲಿ ಶಾಲೆಯ ಹೆಸರನ್ನು ಸ್ಪಷ್ಟವಾಗಿ ಬರೆದಿರಬೇಕು.
=] ವಾಹನದ ಮುಂಭಾಗ ಮತ್ತು ಹಿಂಭಾಗದಲ್ಲಿ ಶಾಲಾ ವಾಹನ ಎಂದು ಬರೆದಿರಬೇಕು. ಶಾಲಾ ದೂರವಾಣಿ ಸಂಖ್ಯೆ ಅಥವಾ ಆಡಳಿತ ಮಂಡಳಿಗೆ ಸೇರಿದ ಯಾವುದಾದರೊಂದು ಮೊಬೈಲ್ ಸಂಖ್ಯೆಯನ್ನು ಬಸ್ ಹೊರ ಭಾಗದಲ್ಲಿ ಸ್ಪಷ್ಟವಾಗಿ ಬರೆದಿರಬೇಕು.
=] ವಾಹನಕ್ಕೆ ವೇಗ ನಿಯಂತ್ರಕವನ್ನು ಅಳವಡಿಸಬೇಕು,40 ಕೀ ಮೀ ವೇಗಕ್ಕಿಂತ ಜಾಸ್ತಿ ಹೋಗಬಾರದು ಎಂದು ಸೂಚನೆಯನ್ನು ಚಾಲಕರಿಗೆ ಆಡಳಿತ ಮಂಡಳಿಯಿಂದ ನೀಡಿರಬೇಕು.
=] ತಮ್ಮಲಿರುವ ಶಾಲಾ ವಾಹನ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಿ.15 ವರ್ಷ ಮೇಲ್ಪಟ್ಟಿರುವ ವಾಹನವನ್ನು ಬಳಸುವುದನ್ನು ನಿಷೇಧಿಸಲಾಗಿದೆ.
=] ವಾಹನ ಚಾಲಕನಿಗೆ ಕಡ್ಡಾಯವಾಗಿ 5 ವರ್ಷಗಳ ಚಾಲನ ಅನುಭವದೊಂದಿಗೆ ಚಾಲನ ಪರವಾನಿಗೆ ಇರಬೇಕು, ಹಾಗೂ ಚಾಲಕನ ಅಪರಾಧ ಹಾಗೂ ಅಪಘಾತ ಹಿನ್ನೇಲೆಯ ಬಗ್ಗೆ ಪೊಲೀಸ್ ಇಲಾಖೆಯಿಂದ ವರದಿಯನ್ನು ಪಡೆಯಬೇಕು.
=] ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವುದು ನಂತರ ಮನೆಗಳಿಗೆ ತಲುಪಿಸುವವರೆಗೂ ದಾಖಲಾತಿಯನ್ನು ಇಡಬೇಕು ಶಾಲಾವಾಹನದಲ್ಲಿ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಶಿಕ್ಷಕರನ್ನು ನೇಮಿಸಬೇಕು.
=] ಶಾಲಾ ವಾಹನದಲ್ಲಿ ಪ್ರಥಮ ಚಿಕಿತ್ಸೆ ಕಿಟ್, ಆಗ್ನಿ ನಂದಿಸುವ ಸುರಕ್ಷ ಉಪಕಾರಣಗಳು, ವಾಹನದಲ್ಲಿ ಸಂಚರಿಸುವ ಮಕ್ಕಳ ಸಂಪೂರ್ಣ ಮಾಹಿತಿ, ವಿಮೆ,ವಾಹನ ಪರವಾನಿಗೆ ದಾಖಲೆಯನ್ನು ಹೊಂದಿರ

ತಾಲೂಕಿನ ಕಪಗಲ್ ಹತ್ತಿರ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಹಾಗೂ ಲೋಯೋಲ ಶಾಲೆಯ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ, ಇಬ್ಬರು ಮಕ್ಕಳು ಮೃತಪಟ್ಟ ಘಟನೆ ನಮಗೆ ಬಹಳ ನೋವನ್ನುಂಟು ಮಾಡಿದೆ. ನಾವು ಈಗಾಗಲೇ ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬ ಸಿ ಆರ್ ಪಿ ಅವರನ್ನು ಕರೆದು ಅವರವರ ವ್ಯಾಪ್ತಿಯಲ್ಲಿ ಬರುವ ಖಾಸಗಿ ಶಾಲಾ ವಾಹನಗಳ ದಾಖಲಾತಿಗಳು ಹಾಗೂ ಚಾಲಕರ ಮಾಹಿತಿ ಸಂಗ್ರಹಿಸಿಸಲು ತಿಳಿಸಿದ್ದೇವೆ. 15 ದಿನಗಳೊಳಗಾಗಿ ತಾಲೂಕಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಹನಗಳ ಹಾಗೂ ಚಾಲಕರ ಮಾಹಿತಿ ಪಡೆದುಕೊಂಡು ಯಾವುದೇ ರೀತಿಯಲ್ಲಿ ತಪ್ಪು ಮಾಹಿತಿ ನೀಡಿದಲ್ಲಿ ಅಂತ ಶಿಕ್ಷಣ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ.


ಕ್ಷೇತ್ರ ಶಿಕ್ಷಣಾಧಿಕಾರಿ ಮಾನ್ವಿ ಚಂದ್ರಶೇಖರ್ ದೊಡ್ಡಮನಿ.ಕಾರ್ಯಕ್ರಮದಲ್ಲಿ ಕಾಕತೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜೆ.ಸತ್ಯನಾರಾಯಣ, ಕ್ಷೇತ್ರ ಶಿಕ್ಷಣ ಸಂಯೋಜಕರಾದ ಕುಬೇರಪ್ಪ ,ಮಾನ್ವಿ ತಹಸೀಲ್ದಾರ್ ರಾಜು ಪಿರಂಗಿ, ಸಿರವಾರ ತಹಸೀಲ್ದಾರ್ ರವಿ ಅಂಗಡಿ, ರಸ್ತೆ ಸಾರಿಗೆ ಇಲಾಖೆಯ ಅಧಿಕ್ಷಕರಾದ ಸಾಜೀದ್ ಹುಸೇನ್, ಮಾನ್ವಿ ತಾಲೂಕು ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷರಾದ ಹೆಚ್.ಶಾರ್ಫೂದಿನ್ನ್ ಪೋತ್ನಾಳ್, ಸಿರವಾರ ತಾ.ಖಾ.ಶಾ.ಒ. ಕಾರ್ಯದರ್ಶಿ ಪ್ರಕಾಶ ಪಾಟೀಲ್, ದೇವದುರ್ಗ ತಾ.ಖಾ.ಶಾ.ಒ. ಅಧ್ಯಕ್ಷರಾದ ಶರಣು ಹುಣಸಿಗಿ, ಶಂಕರಲಿಂಗಯ್ಯಸ್ವಾಮಿ,ಶಿಕ್ಷಣ ಸಂಯೋಜಕರಾದ ಮಹಮ್ಮದ್ ಯೂನೂಸ್, ಸೇರಿದಂತೆ 3 ತಾಲೂಕುಗಳ ಸಿ.ಆರ್.ಪಿ, ಬಿ,ಆರ್.ಪಿ. ಅಧಿಕಾರಿಗಳು ಖಾಸಗಿ ಶಾಲೆಗಳ ಮುಖ್ಯಾ ಗುರುಗಳು ಇದ್ದರು.

About Mallikarjun

Check Also

ಕೃಷ್ಣಾಪೂರ ಡಗ್ಗಿ ಅಂಗನವಾಡಿಕೇಂದ್ರದಲ್ಲಿಪೋಷಣಾಭಿಯಾನ,ಉಡಿತುಂಬುವ ಕಾರ್ಯಕ್ಕೆ ಚಾಲನೆ

Krishnapura Daggi Anganwadi Center launched nutrition drive ಪೋಷಣಾಭಿಯಾನದ ಪರಿಣಾಮ ಅಪೌಷ್ಠಿಕತೆ ದೂರವಾಗುತ್ತಿದೆ:ಇಒ ಲಕ್ಷ್ಮಿದೇವಿ*ಕೃಷ್ಣಾಪೂರ ಡಗ್ಗಿ ಅಂಗನವಾಡಿ ಕೇಂದ್ರದಲ್ಲಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.