Breaking News

ನಾಲ್ಕು ಮನೆಗಳ, ನಾಲ್ಕು ಮನಸ್ಸುಒಂದುಗೂಡಿದಂತೆ ಈ ಗ್ರಾಮ ಮಾದರಿ:ಮಹೇಶಾನಂದ ಸ್ವಾಮಿಗಳು,

This village model is like four houses, four minds united: Maheshananda Swami

ಜಾಹೀರಾತು

ವರದಿ ಪಂಚಯ್ಯ ಹಿರೇಮಠ,,
ಕೊಪ್ಪಳ : ನಾಲ್ಕು ಗೋಡೆ ಸೇರಿ ಒಂದು ಮನೆಯಾಗುತ್ತೇ, ನಾಲ್ಕು ಮನಸ್ಸು ಒಂದುಗೂಡಿ ಒಂದು ಕುಟುಂಬವಾಗುತ್ತೆ ಎನ್ನುವದಕ್ಕೆ ಈ ಚಿಕೇನಕೊಪ್ಪ ಗ್ರಾಮದ ಸಮಸ್ತ ಜನರೇ ಸಾಕ್ಷಿ ಎಂದು ನಿಪ್ಪಾಣಿ ತಾಲೂಕ ಹಂಚಿನಾಳ ಯೋಗಾಶ್ರಮದ ಮಹೇಶಾನಂದ ಸ್ವಾಮಿಗಳು ಹೇಳಿದರು.

ಅವರು ಕುಕನೂರು ತಾಲೂಕಿನ ಚಿಕೇನಕೊಪ್ಪ ಗ್ರಾಮದಲ್ಲಿ ಶುಕ್ರವಾರದಂದು ಶ್ರಾವಣ ಮಾಸದ ನಿಮಿತ್ತ ಪ್ರಾರಂಭವಾದ ಶರಣ ಬಸವೇಶ್ವರ ಪುರಾಣ ಮಹಾ ಮಂಗಲ ಹಾಗೂ ಧರ್ಮ ಚಿಂತನಾ ಸಭೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೂರ್ಯ,ಚಂದ್ರ ಇರುವರೆಗೂ‌ ಈ ಗ್ರಾಮದಲ್ಲಿ ಮಹಾತ್ಮರ, ಶರಣರ ಪವಾಡಗಳು ಸದಾ ಸಾರ್ವಕಾಲಿಕವಾಗಿರುತ್ತವೆ ಎಂದರು.

ಮನೆಗಳು ಎಷ್ಟೇ ಕೋಟಿ ರೂಪಾಯಿಂದ ನಿರ್ಮಿಸಿದರು ಅದನ್ನು ಶುಚಿಯಾಗಿಡಲು 10 ರೂಪಾಯಿ ಚಿಕ್ಕ ಬಾರಿಗೆ ಸಾಕು, ಅದರಂತೆ ಮನೆ ಬೆಳಗಲು ಒಬ್ಬ ತಾಯಿ ಚಿಕ್ಕದೊಂದು ದೀಪ ಹಚ್ಚಬೇಕು, ಹಾಗೆಯೇ ಸಮಾಜದಲ್ಲಿ ಕೋಟಿ ಜನರ ಜ್ಞಾನ ದೀಪ ಹಚ್ಚಲು ಒಬ್ಬ ಸಾದು ಸಂತನಿರಬೇಕು ಎಂದು ಮಾರ್ಮಿಕವಾಗಿ ನುಡಿದರು.

ಶರಣರು ಕುಳಿತ ಈ ನಾಡಿನಲ್ಲಿ ಶ್ರಾವಣ ಮಾಸದಲ್ಲಿ ನಡೆಯುವ ಇಂತಹ ಸತ್ಸಂಗ ಕಾರ್ಯಗಳಲ್ಲಿ ಭಾಗಿಯಾಗಿ ಜ್ಞಾನದೆಡೆಗೆ ಸಾಗಿ ಬದುಕು ಪಾವನಗೊಳಿಸಬೇಕು ಎಂದು ಅವರು ಹೇಳಿದರು.

ನಾವು ಆಕಾಶದೆತ್ತರಕ್ಕೂ ಹಾರಿದರು ಜನಿಸಿದ ಗ್ರಾಮ ಜೀವ ಕೊಟ್ಟ ತಂದೆ, ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲಾ, ಆದ್ದರಿಂದ ಪ್ರತಿಯೊಬ್ಬರು ತಂದೆಯು ಸಮಾಜದ ಮುಂದೆ ತಲೆ ಬಾಗಿಸದಂತೆ, ತಾಯಿ ಕಣ್ಣೀರು ಹಾಕದಂತೆ ನೋಡಿಕೊಳ್ಳಬೇಕು.

ಇದು ಶ್ರವಣ ಕುಮಾರ, ಪುರುಷೋತ್ತಮ ರಾಮ ಜನಿಸಿದ ಭರತ ಭೂಮಿಯಾಗಿದ್ದು ತಂದೆ ತಾಯಿಯರನ್ನು ಪಾಲನೆ ಪೋಷಣೆ ಮಾಡಿ ಎಂದು ಕಿವಿ ಮಾತನ್ನು ಹೇಳಿದರು.

ಭಾರತ ದೇಶದಲ್ಲಿ ಧರ್ಮಗಳು ಉಳಿಯುತ್ತಿಲ್ಲ, ಭಕ್ತರಿಂದ ಸನ್ಯಾಸತ್ವ ಉಳಿದಿದೆ. ಮನುಷ್ಯ ಸಂಸಾರದಲ್ಲಿ ಚಿಕ್ಕು ಬೀಜದಂತಿರಬೇಕು, ಭಕ್ತಿಯಲಿ ಮಾವಿನ ಗೊಟ್ಟದಂತಿರಬೇಕು ಎಂದು ತಿಳಿಸಿದರು.

ನಂತರದಲ್ಲಿ ಚಿಕೇನಕೊಪ್ಪ ಚನ್ನವೀರ ಶರಣರು ಮಾತನಾಡಿ ಪ್ರತಿಯೊಬ್ಬರೂ ಧಾರ್ಮಿಕ ಮನೋಭಾವನೆ ಬೆಳಸಿಕೊಳ್ಳಬೇಕು, ಧಾರ್ಮಿಕ ಕಾರ್ಯಗಳಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಹಾಗೂ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಂಸ್ಕಾರವಂತರನ್ನಾಗಿಸಬೇಕು ಎಂದು ಹೇಳಿದರು.

ಈ ವೇಳೆ ತಳಕಲ್ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಫಕೀರಪ್ಪ ವಜ್ರಬಂಡಿ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಚಿಕೇನಕೋಪ್ಪದ ಶಂಭುಲಿಂಗಾಶ್ರಮದ ಅನ್ನದಾನ ಭಾರತಿ ಸ್ವಾಮಿಜಿ, ಶಿವಲಿಂಗಯ್ಯ ಶಾಸ್ತ್ರೀ ಹಿರೇಮಠ, ವೀರಪ್ಪ ಬಿಸ್ನಳ್ಳಿ, ಮಹೇಂದ್ರ ಕುಮಾರ ಗದಗ, ಅಶೋಕ ಕಾಡಪ್ಪನವರ, ಈಶಪ್ಪ ವಕ್ಕಳದ, ಲಕ್ಷ್ಮಣ ವಗ್ಗಾರ, ಮಲ್ಲು ಮಾಟ್ರಂಗಿ ಇನ್ನಿತರರು ಉಪಸ್ಥಿತರಿದ್ದರು.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.