A request to the Minister to repair the deteriorated Jagirapannur road and start bus service
ಮಾನ್ವಿ : ತಾಲೂಕಿನ ಜಾಗೀರಪನ್ನೂರು ರಸ್ತೆ ತುಂಬಾ ಹದಗೆಟ್ಟಿದೆ, ದುರಸ್ತಿ ಹಾಗೂ ಸ್ಥಗಿತಗೊಂಡ ಬಸ್ ಸಂಚಾರ ಪುನ: ಆರಂಭಿಸಲು ಒತ್ತಾಯಿಸಿ ಜಾಗೀರ ಪನ್ನೂರು ಗ್ರಾಮದ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಗುರುವಾರ ಮಾನ್ವಿಯಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್. ಬೋಸರಾಜು ಅವರಿಗೆ ಮನವಿ ಸಲ್ಲಿಸಿದರು.
ಚೀಕಲಪರ್ವಿ ಗ್ರಾಮದಿಂದ ಯಡಿವಾಳ, ಜಾಗೀರ ಪನ್ನೂರು ಗ್ರಾಮಕ್ಕೆ ಹೋಗುವ ರಸ್ತೆ ಮಾರ್ಗ ಬಹಳಷ್ಟು ಹದಗೆಟ್ಟಿದ್ದರಿಂದ 20 ದಿನಗಳಿಂದ ಬಸ್ ಸಂಚಾರ ಸ್ಥಗಿತಗೊಂಡು ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪರದಾಡುತ್ತಿದ್ದಾರೆ.
ತಾತ್ಕಾಲಿಕವಾಗಿ ರಸ್ತೆ :
ಸಂಚಾರಕ್ಕೆ ತೊಂದರೆಯಾಗಿತ್ತು. ಈ ಕುರಿತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ದುರಸ್ತಿ ಮಾಡಲು ವಿನಂತಿ ಮಾಡಿಕೊಂಡ ಮೇರೆಗೆ ತಾತ್ಕಾಲಿಕವಾಗಿ ರಸ್ತೆಗೆ ಮರಮ್ ಹಾಕಿರುತ್ತಾರೆ. ಆದರೆ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿ ಪರಿಣಾಮ ಬಸ್ ಘಟಕ ವ್ಯವಸ್ಥಾಪಕರು ಈ ಮಾರ್ಗವಾಗಿ ಓಡಾಡುವ ಬಸ್ಸುಗಳ ಸಂಚಾರವನ್ನು ಸ್ಥಗಿತ ಮಾಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕಾರಣ ಯಡಿವಾಳ, ಚೀಕಲಪರ್ವಿ ಗ್ರಾಮದ ಜನರಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಸ್ತೆಯನ್ನು ಶೀಘ್ರವೇ ಶಾಶ್ವತ ದುರಸ್ತಿ ಮಾಡಿ ಬಸ್ ಸಂಚಾರ ಪುನರಾರಂಭಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದ ವಿದ್ಯಾರ್ಥಿಗಳು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಪ್ರಶಾಂತ, ವಿಜಯ ಕುಮಾರ, ಮರಿಸ್ವಾಮಿ, ವಿನೋದ, ಪ್ರಮೋದ, ಅಶೋಕ, ಈರಣ್ಣ ಹಾಜರಿದ್ದರು.