Bhagwat welcomes Bhagwat’s statement, “Irori’s desire to become Lord does not know what is next.”
ಗಂಗಾವತಿ: ಪ್ರಧಾನಮಂತ್ರಿ ಮೋದಿ ಮತ್ತು ಆರ್.ಎಸ್.ಎಸ್‌ಗಳ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಶೀಘ್ರದಲ್ಲಿಯೇ ಕೇಂದ್ರ ಸರ್ಕಾರ ಬೀಳುವ ನಿರೀಕ್ಷೆ ಇದೆ ಎಂದು ಕ್ರಾಂತಿಚಕ್ರ ಬಳಗದ ರಾಜ್ಯ ಅಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ-೧೯ರ ದಿನಪತ್ರಿಕೆಗಳಲ್ಲಿ ಭಗವಂತನಾಗುವ ಆಸೆ ಇರೋರಿಗೆ ಮುಂದೇನು ಅಂತ ಗೊತ್ತಿಲ್ಲ. ವಿಶ್ವರೂಪಕ್ಕೆ ಆಸೆ ಪಟ್ಟರೂ ಭವಿಷ್ಯ ಗೊತ್ತಾಗಲ್ಲ ಇದು ಮೋದಿ ಬಗ್ಗೆ ಆರೆಸ್ಸೆಸ್‌ನ ಟೀಕೆ: ಕಾಂಗ್ರೆಸ್‌ನ ಭಾಗ್ವತ್ ಹೇಳಿಕೆ ನೀಡಿದ್ದು, ಅವರ ಹೇಳಿಕೆ ಸ್ವಾಗತಾರ್ಹವಾಗಿದೆ.
‘ಸ್ವಯಂ ಅಭಿವೃದ್ಧಿಯ ಹಾದಿಯಲ್ಲಿ ಒಬ್ಬ ವ್ಯಕ್ತಿಯು ‘ಸೂಪರ್‌ಮ್ಯಾನ್’ ಆಗಲು ಬಯಸಬಹುದು, ನಂತರ ‘ದೇವತೆ’ ಮತ್ತು ‘ಭಗವಾನ್’ ಮತ್ತು ‘ವಿಶ್ವರೂಪ’ ಆಗಲು ಹಾತೊರೆಯಬಹುದು, ಆದರೆ ಮುಂದೆ ಏನಾಗುತ್ತದೆ ಎಂಬ ಅರಿವು ಇರುವುದಿಲ್ಲ. ಹೀಗಾಗಿ ಮಹತ್ವಾಕಾಂಕ್ಷೆಗೆ ಅಂತ್ಯವಿಲ್ಲದ ಕಾರಣ ಜನರು ಮನುಕುಲದ ಕಲ್ಯಾಣಕ್ಕಾಗಿ ಪಟ್ಟುಬಿಡದೆ ಶ್ರಮಿಸಬೇಕು’ ಎಂದು ರಾಷ್ಟಿçÃಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ವೇಳೆ ‘ನಾನು ಜೈವಿಕವಾಗಿ ಜನಿಸಿದಂತೆ ಭಾಸವಾಗುತ್ತಿಲ್ಲ. ನನ್ನನ್ನು ಭಗವಂತನೇ ಕಳಿಸಿದ್ದಾನೆ ಎಂಬAತೆ ಭಾಸವಾಗುತ್ತಿದೆ’ ಎಂಬ ಹೇಳಿಕೆ ನೀಡಿದ್ದರು. ಈಗ ಭಾಗವತ್ ಆಡಿದ ಮಾತು ಮೋದಿಗೆ ಟಾಂಗ್ ಎಂದು ಕಾಂಗ್ರೆಸ್ ಹೇಳಿದೆ. ಇದಕ್ಕೂ ಮುನ್ನ ಭಾಗವತ್ ಅವರು, ‘ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ. ಹಿನ್ನಡೆಗೆ ಬಿಜೆಪಿ ನಾಯಕರ ಅಹಂಕಾರವೇ ಕಾರಣ ಎಂದು ಕಿಡಿಕಾರಿದ್ದರು’ ಎಂಬುದು ಇಲ್ಲಿ ಗಮನಾರ್ಹ.
ಗುರುವಾರ ಗ್ರಾಮಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಭಾಗ್ವತ್‌ರವರು, ‘ಕೆಲವರು ಮನುಷ್ಯರಾಗಿದ್ದರೂ ಮಾನವೀಯ ಗುಣಗಳ ಕೊರತೆ ಕೆಲವರಿಗೆ ಇರುತ್ತದೆ. ಅದನ್ನು ಮೊದಲು ಮೈಗೂಡಿಸಿಕೊಳ್ಳಬೇಕು. ಮಾನವ ಗುಣಗಳನ್ನು ಸಾಧಿಸಿದ ನಂತರ, ಮನುಷ್ಯನು ಅಲೌಕಿಕ ಶಕ್ತಿಗಳೊಂದಿಗೆ ಸೂಪರ್‌ಮ್ಯಾನ್ ಆಗಲು ಮತ್ತು ನಂತರ ದೇವತಾ ಮತ್ತು ಭಗವಾನ್ ಸ್ಥಾನಮಾನವನ್ನು ಪಡೆಯಲು ಹಾತೊರೆಯುತ್ತಾನೆ. ನಂತರ ಅವನು ವಿಶ್ವರೂಪ ಆಗಲು ಹಂಬಲಿಸುತ್ತಾನೆ. ಆದರೆ ಅದಾದ ನಂತರ ಮುಂದಿನ ಹಾದಿ ಗೊತ್ತಿರುವುದಿಲ್ಲ’ ಎಂದಿದ್ದಾರೆ ಎಂದು ತಿಳಿಸಿದರು.
ಇದನ್ನು ನೋಡಿದರೆ, ಇನ್ನೂ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಬೀಳುವುದು ಖಚಿತವಾಗಿದೆ ಎಂದು ಭಾರಧ್ವಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.