Breaking News

ನಿಜವಾದ ಕಟ್ಟಡ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯ ಸಿಗಲಿ…! 

Full information and defect screening workshop for pregnant women.
Dr|| Veena Satish

ಜಾಹೀರಾತು

ಅಸಲಿ ಮತ್ತು ನಕಲಿ ಕಾರ್ಮಿಕರ ಕಾರ್ಡುಗಳ ತನಿಖೆ ನಡೆಸಲು ಮನವಿ:

ಗಂಗಾವತಿ: 19:ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕರ ಸಂಘ(ರಿ) ವಿರುಪಾಪುರ ತಾಂಡ ಗಂಗಾವತಿ ಇವರಿಂದ ಕಾರ್ಮಿಕ ನೀರೀಕ್ಷಕರಾದ ಅಶೋಕ ಎಂ ಇವರಿಗೆ  ಮನವಿ ಸಲಿಸಿದರು.

ನಂತರ ಮಾತನಾಡಿದ  ಸಂಘದ ಅಧ್ಯಕ್ಷ  ಪಾಂಡು ನಾಯ್ಕ ಮೆಸ್ತ್ರಿ  ಕಟ್ಟಡ ಕಾರ್ಮಿಕ ಮಂಡಳಿಯಲ್ಲಿನ ಅನುದಾನ ದುರ್ಬಳಕೆ ನಿಯಂತ್ರಣಕ್ಕೆ ತಡೆಹಾಕಬೇಕು, ಮಂಡಳಿಯಲ್ಲಿ ಬೋಗಸ್ ಕಾರ್ಡ್‌ಗಳು ಹೆಚ್ಚಾಗಿದ್ದು, ಸರ್ಕಾರಿ, ಖಾಸಗಿ ನೌಕರರು, ವಿದ್ಯಾರ್ಥಿಗಳು, ಗೃಹಿಣಿಯರ ಹೆಸರಿನಲ್ಲಿ ಆಕ್ರಮ ಕಟ್ಟಡ ಕಾರ್ಮಿಕರ ಕಾರ್ಡ್‌ಗಳು ಸಾಕಷ್ಟು ನೋಂದಣಿಯಾಗಿವೆ. ನಿಜವಾದ ಕಾರ್ಮಿಕರಿಗೆ ಸೌಲಭ್ಯ ದೊರೆಯದೆ ನಕಲಿ ಕಾರ್ಮಿಕರಿಗೆ ಕಾರ್ಮಿಕರ ಇಲಾಖೆಯಿಂದ ಸಾಕಷ್ಟು ಅನುಕೂಲಗಳು ನಮ್ಮ ಕಣ್ಣೆದುರಿಗೆ ನಡೆಯುತ್ತಿದ್ದು, ಸರ್ಕಾರ ಈ ಕೂಡಲೇ ತನಿಖೆ ನಡೆಸಿ, ಬೋಗಸ್ ಕಾರ್ಡ್ ಗಳನ್ನು ರದ್ದುಪಡಿಸಿ, ಅರ್ಹ ಕಾರ್ಮಿಕರಿಗೆ ನ್ಯಾಯ ದೊರಕಿಸಿ ಕೊಡಬೇಕು ಮತ್ತು ಅಕ್ರಮ ಕಟ್ಟಡ ಕಾರ್ಮಿಕ ಕಾರ್ಡುಗಳನ್ನು ತಡೆಗಟ್ಟಲು ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ನಿರಂತರ ಶ್ರಮವಿಸುತ್ತಿರುವ, ಸಂಘಗಳ ಸಲಹೆ ಹಾಗೂ ಗುಲ್ಬರ್ಗ ವಿಭಾಗದಲ್ಲಿ ನೊಂದಣಿಗೊಂಡಿರುವ ಸಂಘಗಳು ನೀಡುವ ಉದ್ಯೋಗ ಪ್ರಮಾಣ ಪತ್ರಗಳನ್ನು ಮಾತ್ರ ಪರಿಗಣಿಸಿಬೇಕು, 

ಈ ಹಿಂದೆ ಮಕ್ಕಳಿಗೆ ನೀಡುವ ಶೈಕ್ಷಣಿಕ ಸಹಾಯಧನ ಕಡಿತಗೊಳಿಸಿದ್ದು, ಅದನ್ನು ಹಿಂದೆ ಹೇಗಿತ್ತು ಅದೆ ರೀತಿಯಾಗಿ  ಪ್ರೋತ್ಸಾಹಧನ ಯಥಾ ಪ್ರಕಾರ ಮುಂದುವರಿಸಿರಬೇಕು ಹಾಗೂ ಗಂಗಾವತಿ ನಗರಸಭೆ ವ್ಯಾಪ್ತಿಯ ವಾ.ನಂ.31 ವಿರುಪಾಪುರ ತಾಂಡದಲ್ಲಿ ಅತಿ ಹೆಚ್ಚು ಕಟ್ಟಡ ಕಾರ್ಮಿಕರಿದ್ದು, ಮೇಶನ್ ಕಿಟ್ ಹೆಚ್ಚಿನ ರೀತಿಯಲ್ಲಿ ವಿತರಣೆ ಮಾಡಬೇಕು, ಕಟ್ಟಡ ಕಾರ್ಮಿಕ ನಿರ್ಮಾಣದ ಸಂಬಂಧವಿಲ್ಲದ ಸಂಘ ಸಂಸ್ಥೆಗಳು ಇಲಾಖೆ ಯೋಜನೆ ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಇದರಿಂದ ಬಡ ಕಟ್ಟಡ ಕಾರ್ಮಿಕರಿಗೆ ಮೋಸವಾಗುತ್ತಿದೆ. ಇದನ್ನು ಕೂಡಲೆ ತಡೆಗಟ್ಟಬೇಕು, ಈ ಮೊದಲು ಮೂರು ವರ್ಷಕ್ಕೊಮ್ಮೆ ರಿನಿವಾಲ್ ಇದ್ದಿತು. ಆದರೆ ಈಗ ಸರ್ಕಾರವು ಒಂದೇ ವರ್ಷಕ್ಕೆ ಸೀಮಿತಗೊಳಿಸದ್ದರಿಂದ ರಿನಿವಾಲ್ ಮಾಡಿಸಲು ತೊಂದರೆ ಆಗುತ್ತದೆ. ಹಳೇಯ ಅನುಭವ ಉಳ್ಳ ಮೇಸ್ತ್ರಿ, ಮೇಶನ್‌ಗಳು ಕಾರ್ಮಿಕರ ಹವಾರು ಸೌಲಭ್ಯದಿಂದ ವಂಚಿತರಾಗಿದ್ದು, ಆದ್ದರಿಂದ ರಿನಿವಾಲ್ ಮುಗಿದ ತಕ್ಷಣ ರಿನಿವಾಲ್ ಮಾಡಲು ಅವರ ಮೊಬೈಲ್‌ಗಳಿಗೆ ಮೆಸೇಜ್/ಸಂದೇಶ ಕಳಹಿಸುವ ವ್ಯವಸ್ಥೆ ಮಾಡಬೇಕು. ಮತ್ತು ಇದರ ಬಗ್ಗೆ ಕಾರ್ಮಿಕ ನಿರೀಕ್ಷಕರು ಸಂಘ ಸಂಸ್ಥೆಗಳಿಗೆ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

   ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಬಾಲಾಜಿ ಮೇಸ್ತ್ರಿ, ಮುಖ್ಯ ಕಾರ್ಯದರ್ಶಿಗಳಾದ ಶಿವಪ್ಪ ಜಾಗೋ ಗೋರ್, ಸಹ ಕಾರ್ಯದರ್ಶಿ ಶಿವಪ್ಪ ಮೇಸ್ತ್ರಿ, ಸಂಘಟನೆ ಕಾರ್ಯದರ್ಶಿ

ಹನುಮಂತಪ್ಪ ಮೇಸ್ತ್ರಿ, ಖಜಾಂಚಿ ರವಿಚಂದ್ರ ಮೇಸ್ತ್ರಿ, ಸದಸ್ಯರಾದ. ಯಂಕಣ್ಣ ಮೇಸ್ತ್ರಿ,  ದಾವಲ್ ಸಾಬ್ ಮೇಸ್ತ್ರಿ, ಕೃಷ್ಣ ನಾಯ್ಕ್ ಮೇಸ್ತ್ರಿ, ಭೋಜನಾಯ್ಕ ಮೇಸ್ತ್ರಿ, ಮೌನೇಶ್ ಮೇಸ್ತ್ರಿ, ಲೋಕೇಶ್ ಮೇಸ್ತ್ರಿ ಸೇಟು ನಾಯ್ಕ್ ಮೇಸ್ತ್ರಿ,ಸೇರಿದಂತೆ ಇತ್ತರರು ಇದ್ದರು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.