(ನೇರ ಹೊಣೆಗಾರರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಕಾರ್ಯಲಯ ಬಂಡಿಹರ್ಲಾಪುರ)
ಕಲ್ಯಾಣ ಸಿರಿ ಸುದ್ದಿ: ಕೊಪ್ಪಳ, 14:ಜಿಲ್ಲೆಯ ಹಳೆಬಂಡಿ ಹರ್ಲಾಪುರ ಗ್ರಾಮದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಸೌಲಭ್ಯದ ವಂಚಿತರಾದ ಗೋಳು.
ಸರ್ಕಾರಿ ಶಾಲೆ ಎಂದರೆ ದೇವರ ಶಾಲೆ ಎಂದು ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಆದರೆ ಈ ಶಾಲೆಗೆ ಬಗೆ ಬಗೆಯಾದ ಕೊರತೆಗಳನ್ನು ಅನುಭವಿಸುತ್ತಿದ್ದಾರೆ,
ವಿದ್ಯಾರ್ಥಿಗಳು ಶಾಲೆಗೆ ಹೋಗಲು ಅತಿಯಾದ ರಸ್ತೆ ತೊಂದರೆಯನ್ನು ಅನುಭವಿಸುತ್ತಾ ಹೋಗುತ್ತಿರುವುದನ್ನು ಈ ಮೇಲೆ ಇರುವ ಚಿತ್ರವನ್ನು ಗಮನಿಸಿದರೆ ಗೊತ್ತಾಗುವುದು,
ಇದಕ್ಕೆ ನೇರವಾಗಿ ಬಂಡಿ ಹರ್ಲಾಪುರ ಗ್ರಾಮ ಪಂಚಾಯತಿ ಕಾರ್ಯಾಲಯ ಪದಾಧಿಕಾರಿಗಳು ನಿರ್ಲಕ್ಷತನ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಒಂದು ಕಡೆ ಶಾಲೆಯಲ್ಲಿ ವಿದ್ಯುತ್ ಸರಿಯಾಗಿಲ್ಲದೆ ಮತ್ತು ಕುಡಿಯಲು ನೀರು ಅನುಕೂಲ ಇಲ್ಲದೆ ದಿನೇ ದಿನೇ ವಿದ್ಯಾರ್ಥಿಗಳಿಗೆ ತುಂಬಾನೇ ಕಾಡುತ್ತಿದ್ದು, ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸತತ ಒಂದು ವಾರದಿಂದ ಮಳೆಯಾಗಿ ವಿದ್ಯಾರ್ಥಿಗಳು ಓಡಾಡಲು ಮಾರ್ಗವೇ ಇಲ್ಲದಂತಾಗಿದೆ,
ಇತ್ತ ವಿದ್ಯಾರ್ಥಿಗಳಿಗೆ ಓದುವ ಚಿಂತೆ ಒಂದಾದರೆ ಇನ್ನೊಂದು ಕಡೆ ಸೌಲಭ್ಯ ದೊರಕದೇ ಇರುವ ಕೊರತೆ,
ಕ್ಷೇತ್ರದ ಶಿಕ್ಷಣಾಧಿಕಾರಿಗಳು ಸರ್ಕಾರಿ ಉರ್ದು ಶಾಲೆಗೆ ಇಲ್ಲಿಯವರೆಗೆ ಒಮ್ಮೆಯೂ ಭೇಟಿ ನೀಡುವುದಿಲ್ಲ, ಇರುವ ಅಲ್ಪ ವಿದ್ಯಾರ್ಥಿಗಳನ್ನು ಗಮನಕ್ಕೆ ತೆಗೆದುಕೊಳ್ಳುವಂತಿಲ್ಲ ಎಂದರೆ ಇನ್ನೂ ವಾರ್ಷಿಕ ಫಲಿತಾಂಶ ಕಡೆ ಹೇಗೆ ಗಮನಹರಿಸುತ್ತಾರೆ, ಇಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವಿರಾ ಎಂದು ಕಾದು ನೋಡಲೇ ಬೇಕಾಗಿದೆ.