
Caste abuse: Gangavathi community of Hadapada demands strict actionಜಾತಿ ನಿಂದನೆ: ಕಠಿಣ ಕ್ರಮಕ್ಕೆ ಗಂಗಾವತಿ ಹಡಪದ ಸಮಾಜ ಒತ್ತಾಯ


ಗಂಗಾವತಿ: ತಹಶಿಲ್ದಾರರ ಮೂಲಕ ಜಾತಿ ನಿಂದನೆ (ನಿಷೇಧಿತ ) ಹಡಪದ ಸಮುದಾಯದ ಪದ ಬಳಕೆಯ ವಿರುದ್ಧ ಕಠಿಣ ಕ್ರಮ ಜಾರಿ ಮಾಡಬೇಕೆಂದು ಒತ್ತಾಯಿಸಿ ಹಾಗೂ ಯಾದಗಿರಿ ಜಿಲ್ಲೆಯ ಕೊಡೆಕಲ್ ಗ್ರಾಮದ ವಿದ್ಯಾರ್ಥಿನಿ ಯಾದ ಸೌಜನ್ಯ ಹಡಪದ ಸಾವಿನ ಬಗ್ಗೆ ನ್ಯಾಯ ಒದಗಿಸುವ ಕುರಿತು, ಹಾಗೂ ಕುಟುಂಬಕ್ಕೆ ಸರ್ಕಾರದ ಆರ್ಥಿಕ ನರವು ನೀಡಬೇಕೆಂದು ಮುಖ್ಯ ಮಂತ್ರಿಗಳ ಗಮನಕ್ಕೆ ತರುವ ಮೂಲಕ ಮನವಿಯನ್ನು ಸಲ್ಲಿಸಲಾಯಿತು. ನಂತರ ಮಾತನಾಡಿದ ಹಡಪದ ಅಪ್ಪಣ್ಣ ಸಮಾಜದ ತಾಲೂಕು ಅಧ್ಯಕ್ಷ ನಿರುಪಾದಿ ಕೇಸರಹಟ್ಟಿ ಇತ್ತೀಚಿನ ದಿನಗಳಲ್ಲಿ ಜವಾಬ್ದಾರಿ ಯುತ ಸ್ಥಾನಗಳಲ್ಲಿರುವ ರಾಜಕಾರಣಿಗಳಾದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹಾಗೂ ವಿಜಯಪುರದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ಇವರುಗಳು ಸಾರ್ವಜನಿಕರ ಸಭೆಗಳಲ್ಲಿ ಹಿಂದುಳಿದ ವರ್ಗದ ಹಡಪದ ಸಮಾಜದ ನಿಷೇಧಿತ ಪದವಾದವನ್ನು ಬಳಕೆ ಮಾಡಿ ನಮ್ಮ ಸಮುದಾಯದಗಳಿಗೆ ತುಂಬಾ ನೋವನ್ನು ಉಂಟು ಮಾಡಿರುತ್ತಾರೆ. ಹಾಗಾಗಿ ಬಹಿರಂಗವಾಗಿ ಕ್ಷಮೆ ಯಾಚಿಸಿದ ತಕ್ಷಣ ನಮ್ಮ ಸಮಾಜಕ್ಕಾಗಿರುವ ಅವಮಾನವನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಮಾತನಾಡಿ ದರು. ಹಾಗೂ ಗೌರವ ಸಲಹೆಗಾರರಾದ ಹನುಮಂತಪ್ಪ ಸರಿಗಮ ಇತ್ತೀಚಿನ ದಿನಗಳಲ್ಲಿ ಮಾತನಾಡುವ ಭರದಲ್ಲಿ ಪ್ರತಿನಿತ್ಯ ಪ್ರಭಾವಿ ವ್ಯಕ್ತಿಗಳು ಪದಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ. ನಾವು ಈ ಸಮಾಜದಲ್ಲಿ ಗೌರವಯುತವಾಗಿ ದಿನನಿತ್ಯ ಬದುಕಬೇಕಾದರೆ ಈ ನಿಷೇದಿತ ಪದವನ್ನು ಬಳಸಿದವರಿಗೆ ಕಠಿಣ ಕಾನೂನು ವ್ಯಾಪ್ತಿಯಲ್ಲಿ ಶಿಕ್ಷೆಯಾಗ ಬೇಕೆಂದು ಹೇಳಿದರು ಹಾಗೂ ಸಂಬಂಧಪಟ್ಟ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಸರ್ಕಾರದ ಆದೇಶವನ್ನು ಜಾರಿ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು. ಯಾದಗಿರಿ ಜಿಲ್ಲೆಯ ಕೊಡೆಕಲ್ಗ್ರಾಮದ ವಿದ್ಯಾರ್ಥಿನಿಯಾದ ಸೌಜನ್ಯ ಹಡಪದ ಸಾವಿನ ಕುರಿತು ಸೂಕ್ತ ತನಿಖೆ ಮಾಡಿ ಕಾನೂನು ಕ್ರಮ ಜರುಗಿಸಿ ಈಗಾಗಲೇ ಅನುಮಾನಸ್ಪದ ಸಾವೆಂದು ಪರಿಗಣಿಸಿರುವುದರಿಂದ ತಪ್ಪಿತಸ್ಥರನ್ನು ಆದಷ್ಟು ಬೇಗ ಪತ್ತೆಹಚ್ಚಿ ಶಿಕ್ಷೆಗೆ ಒಳಪಡಿಸಬೇಕು, ಹಾಗೂ ನೊಂದ ಕುಟುಂಬಕ್ಕೆ ಸರ್ಕಾರದಿಂದ ಆರ್ಥಿಕ ನೆರವು ಒದಗಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ ಈ ನಮ್ಮಮನವಿಯನ್ನು ಪರಿಗಣಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಾಂತ ಪ್ರತಿಭಟನೆ, ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜ ಮುಖಂಡರಾದ ಮಂಜುನಾಥ ಕನಕಗಿರಿ, ಹಡಪದ ಅಪ್ಪಣ್ಣ ಸಮಾಜದ ಯುವ ಘಟಕ ಅಧ್ಯಕ್ಷ ವಿಕ್ರಮ ಪಾಟೀಲ, ಪದಾಧಿಕಾರಿಗಳಾದ ಮಹಾಂತೇಶ ಹಣವಾಳ,ವಿರೂಪಣ್ಣ ಹೇರೂರು, ಶಿಶಿಕುಮಾರ,ವೀರೇಶ ಹಣವಾಳ, ಭರತ, ಮಂಜುನಾಥ ಬೇಣಕಲ್, ಮಾರುತಿ ಸರಿಗಮ, ಅಂಬ್ರೇಶ, ವೀರಭದ್ರಪ್ಪ ಹೇರೂರು, ಸಿದ್ದೇಶ ಹಿರೇಜಂತಕಲ್, ಸೇರಿದಂತೆ ಇತರರು ಇದ್ದರು.




