ಎಸ್‌ಡಿಎಂಸಿ ಸಮನ್ವಯ ಕೇಂದ್ರದ ರಾಜ್ಯ ನಿರ್ದೇಶಕರಾಗಿ ಶರಣಬಸಪ್ಪ ಧಾನಕೈ ಎರಡನೇ ಬಾರಿ ಆಯ್ಕೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು


Sharanabasappa Dhanakai selected for a second term as State Director of the SDMC Coordination Centre.




ಎಸ್‌ಡಿಎಂಸಿ ಸಮನ್ವಯ ಕೇಂದ್ರದ ರಾಜ್ಯ ನಿರ್ದೇಶಕರಾಗಿ ಶರಣಬಸಪ್ಪ ಧಾನಕೈ ಎರಡನೇ ಬಾರಿ ಆಯ್ಕೆ

ಜಾಹೀರಾತು


ಯಲಬುರ್ಗಾ: ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ಕೇಂದ್ರ (ರಿ.) ವೇದಿಕೆಯ ರಾಜ್ಯ ನಿರ್ದೇಶಕರಾಗಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಶರಣಬಸಪ್ಪ ಕೆ. ಧಾನಕೈ ಅವರು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.
ರಾಜ್ಯ ಮಟ್ಟದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಶರಣಬಸಪ್ಪ ಧಾನಕೈ ಅವರನ್ನು ಪುನರಾಯ್ಕೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ, ರಾಜ್ಯ ನಿರ್ದೇಶಕರ ಗುರುತಿನ ಚೀಟಿಯನ್ನು ವಿತರಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಜೈಬುನ್ನಿಸಾ, ಪೊಲೀಸ್ ಅಧೀಕ್ಷಕ ಸೈಮನ್ ಸಿಎ, ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ವೆಂಕಟೇಶ್, ಪುತ್ತೂರು ವಿಭಾಗದ ಡಿವೈಎಸ್ಪಿ ಪ್ರಮೋದ್ ಕುಮಾರ್ ಬಿ., ಹಿರಿಯ ಹೈಕೋರ್ಟ್ ವಕೀಲರಾದ ಕೆ.ಎನ್. ಪ್ರವೀಣ್ ಕುಮಾರ್, ರಾಜ್ಯ ಎಸ್‌ಡಿಎಂಸಿ ಅಧ್ಯಕ್ಷ ಮೊಯ್ದಿನ್ ಕುಟ್ಟಿ ಸೇರಿದಂತೆ ವಿವಿಧ ಜಿಲ್ಲೆಗಳ ನಿರ್ದೇಶಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಶರಣಬಸಪ್ಪ ಧಾನಕೈ ಅವರು ಎರಡನೇ ಬಾರಿಗೆ ರಾಜ್ಯ ನಿರ್ದೇಶಕರಾಗಿ ಆಯ್ಕೆಯಾಗಿರುವುದು ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ.

Total Views: 0
Share This Article
Leave a Comment