ಸಜೀವ ವಸ್ತುಗಳಿಗಿಂತ ನಿರ್ಜೀವ ವಸ್ತುಗಳಿಗೆ ಇಂದಿನ ಪೀಳಿಗೆ ಮರುಳಾಗಿದೆ: ವೇದಮೂರ್ತಿ ಶಿವಮೂರ್ತಿ ಸ್ವಾಮೀಜಿ ಕಳವಳ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Today's generation is captivated by inanimate objects rather than living beings: Vedamurthy Shivamurthy Swamiji expresses concern.

ಸಜೀವ ವಸ್ತುಗಳಿಗಿಂತ ನಿರ್ಜೀವ ವಸ್ತುಗಳಿಗೆ ಇಂದಿನ ಪೀಳಿಗೆ ಮರುಳಾಗಿದೆ: ವೇದಮೂರ್ತಿ ಶಿವಮೂರ್ತಿ ಸ್ವಾಮೀಜಿ ಕಳವಳ

ಜಾಹೀರಾತು

ಕನಕಗಿರಿ: ಇಂದಿನ ಯುವ ಪೀಳಿಗೆ ತಂದೆ-ತಾಯಿ, ಗುರು-ಹಿರಿಯರಂತಹ ಸಜೀವ ಸಂಬಂಧಗಳಿಗಿಂತ ಮೊಬೈಲ್, ಟಿವಿಯಂತಹ ನಿರ್ಜೀವ ವಸ್ತುಗಳಿಗೆ ಹೆಚ್ಚು ಮಹತ್ವ ಕೊಡುತ್ತಿರುವುದು ವಿಷಾದನೀಯ ಎಂದು ವೇದಮೂರ್ತಿ ಶಿವಮೂರ್ತಿ ಸ್ವಾಮಿಗಳು ಆತಂಕ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ 43ನೇ ವರ್ಷದ ದೇವಿ ಪುರಾಣ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿ ಅವರು ಮಾತನಾಡಿದರು.

“ಹಿಂದೆ ಮನೆಯಲ್ಲಿ ಹಿರಿಯರ ಮಾತಿಗೆ ಬೆಲೆ ಇತ್ತು. ಈಗ ಮನೆಯಲ್ಲಿ ಎಲ್ಲರೂ ಮೊಬೈಲ್ ನಲ್ಲೇ ಮುಳುಗಿದ್ದಾರೆ. ಸಜೀವ ವಸ್ತುಗಳ ಮೌಲ್ಯ ಅರಿಯದೆ ನಿರ್ಜೀವ ವಸ್ತುಗಳ ಹಿಂದೆ ಹೋಗುತ್ತಿದ್ದೇವೆ. ಇದರಿಂದ ಸಂಸ್ಕಾರ ಕಡಿಮೆಯಾಗುತ್ತಿದೆ” ಎಂದು ಸ್ವಾಮೀಜಿಗಳು ಬೇಸರ ವ್ಯಕ್ತಪಡಿಸಿದರು.

ದೇವಿ ಪುರಾಣ ಕೇಳುವುದರಿಂದ ಮನಸ್ಸಿಗೆ ಶಾಂತಿ, ಕುಟುಂಬದಲ್ಲಿ ಸಂಸ್ಕಾರ ಮೂಡುತ್ತದೆ. ಎಲ್ಲಾ ಭಕ್ತರು 9 ದಿನಗಳ ಕಾಲ ನಡೆಯುವ ಪುರಾಣಕ್ಕೆ ಬಂದು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಮಹಿಳಾ ಮಂಡಳಿ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ವರದಿ :ಶರಣಯ್ಯ ಹಿರೇಮಠ

Total Views: 0
ಜಾಹೀರಾತು
Share This Article