ಕಲ್ಯಾಣಸಿರಿ ವೆಬ್ ನ್ಯೂಸ್    ವರದಿಯ ಇಂಪ್ಯಾಕ್ಟ್: ಚಿಕ್ ಮಾದಿನಾಳ ಗ್ರಾಪಂ ಎಚ್ಚರ!ಮಾಹಿತಿ ಹಕ್ಕು ಬೋರ್ಡ್ ಅಳವಡಿಕೆ; ಮಾಧ್ಯಮದ ವರದಿಗೆ ತಕ್ಷಣ ಸ್ಪಂದನೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

 

Impact of Kalyanasiri Web News Report: Chik Madinal Gram Panchayat Takes Action!
RTI Information Board Installed; Immediate Response to Media Report
 

 

ಕಲ್ಯಾಣಸಿರಿ ವೆಬ್ ನ್ಯೂಸ್    ವರದಿಯ ಇಂಪ್ಯಾಕ್ಟ್: ಚಿಕ್ ಮಾದಿನಾಳ ಗ್ರಾಪಂ ಎಚ್ಚರ!
ಮಾಹಿತಿ ಹಕ್ಕು ಬೋರ್ಡ್ ಅಳವಡಿಕೆ; ಮಾಧ್ಯಮದ ವರದಿಗೆ ತಕ್ಷಣ ಸ್ಪಂದನೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ಚಿಕ್ ಮಾದಿನಾಳ (ಕನಕಗಿರಿ): ಕಲ್ಯಾಣಸಿರಿ ವೆಬ್ ನ್ಯೂಸ್ ವರದಿಗೆ ಕೊನೆಗೂ ಸ್ಪಂದನೆ ದೊರೆತಿದ್ದು, ಚಿಕ್ ಮಾದಿನಾಳ ಗ್ರಾಮ ಪಂಚಾಯತಿ ಆಡಳಿತ ಮಾಹಿತಿ ಹಕ್ಕು ಕಾಯ್ದೆ-2005ರ ನಾಮಫಲಕವನ್ನು ಕಚೇರಿ ಗೋಡೆಯ ಮೇಲೆ ಅಳವಡಿಸಿದೆ.
ಕೆಲವು ದಿನಗಳ ಹಿಂದೆ ಚಿಕ್ ಮಾದಿನಾಳ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಮಾಹಿತಿ ಹಕ್ಕು ಬೋರ್ಡ್ ಇಲ್ಲದಿರುವ ಕುರಿತು ಕಲ್ಯಾಣಸಿರಿ ವೆಬ್ ನ್ಯೂಸ್ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ಪಂಚಾಯತಿ ಆಡಳಿತ ಎಚ್ಚೆತ್ತುಕೊಂಡು ಇದೀಗ ಮಾಹಿತಿ ಹಕ್ಕು ಅಧಿನಿಯಮ-2005ರ ನಾಮಫಲಕ ಅಳವಡಿಸಿರುವುದು ಸಾರ್ವಜನಿಕರ ಗಮನ ಸೆಳೆದಿದೆ.
“ಮಹಾತ್ಮಗಾಂಧಿ ಚಿಕ್ ಮಾದಿನಾಳ ಗ್ರಾಮ ಪಂಚಾಯತ್ ಕಾರ್ಯಾಲಯ, ತಾ. ಕನಕಗಿರಿ, ಜಿ. ಕೊಪ್ಪಳ” ಎಂದು ನಮೂದಿಸಿರುವ ಫಲಕದಲ್ಲಿ, ಸಾರ್ವಜನಿಕ ಮಾಹಿತಿ ಅಧಿಕಾರಿ (PIO)ಯಾಗಿ ಪಂಚಾಯತಿ ಕಾರ್ಯದರ್ಶಿ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಿ (FAA)ಯಾಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ನಮೂದಿಸಲಾಗಿದೆ.
ಮಾಧ್ಯಮದ ವರದಿಗೆ ಸ್ಪಂದಿಸಿ ತಕ್ಷಣ ಕ್ರಮ ಕೈಗೊಂಡಿರುವ ಪಂಚಾಯತಿ PDO ಹಾಗೂ ಕಾರ್ಯದರ್ಶಿಗಳ ಕ್ರಮಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಸಮಸ್ಯೆಗಳನ್ನು ಬೆಳಕಿಗೆ ತರುವ ಮಾಧ್ಯಮದ ವರದಿಗಳು ಆಡಳಿತ ವ್ಯವಸ್ಥೆಯನ್ನು ಎಚ್ಚರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದಕ್ಕೆ ಈ ಬೆಳವಣಿಗೆಯೇ ಸಾಕ್ಷಿಯಾಗಿದೆ.
ಇದೇ ವೇಳೆ, ಪಂಚಾಯತಿ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಸೇರಿದಂತೆ ಮಹಾತ್ಮರ ಭಾವಚಿತ್ರಗಳನ್ನು ಅಳವಡಿಸಿ, ಕಚೇರಿಯಲ್ಲಿ ಅಗತ್ಯವಿರುವ ಎಲ್ಲ ಸಾರ್ವಜನಿಕ ಮಾಹಿತಿ ಫಲಕಗಳನ್ನು ಸಮರ್ಪಕವಾಗಿ ಪ್ರದರ್ಶಿಸುವ ಮೂಲಕ ಸಂಪೂರ್ಣ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.


ವರದಿ: ಶರಣಯ್ಯ ಹಿರೇಮಠ್

Total Views: 0
Share This Article