ಕುರುಹಿನ ಶೆಟ್ಟಿ ಸಮಾಜದ ಯುವ ಮುಖಂಡ ಪರಶುರಾಮ ತಟ್ಟಿ ನಿಧನ:

H.Mallikarjun
H.Mallikarjun - Kalyanasiri
1 Min Read

Parashurama Tatti, a youth leader of the Kuruhina Shetty community, passes away:

ಜಾಹೀರಾತು

ಕುರುಹಿನ ಶೆಟ್ಟಿ ಸಮಾಜದ ಯುವ ಮುಖಂಡ ಪರಶುರಾಮ ತಟ್ಟಿ ನಿಧನ:

ಗಂಗಾವತಿ ಸ್ವಾಮಿ ವಿವೇಕಾನಂದ ಟ್ರಸ್ಟ್ ಸಂತಾಪಗಂಗಾವತಿ: ನಗರದ ಪಂಪಾನಗರದ ನಿವಾಸಿಯೂ, ಕುರುಹಿನ ಶೆಟ್ಟಿ ಸಮಾಜದ ಯುವ ಮುಖಂಡರೂ ಆದ ಪರಶುರಾಮ ತಟ್ಟಿ (೪೮) ಅವರು ಅನಾರೋಗ್ಯದಿಂದಾಗಿ ಕೊಪ್ಪಳದಲ್ಲಿ ನಿಧನರಾಗಿದ್ದಾರೆ. ಮೃತರು ತಂದೆ ಪಂಪಣ್ಣ ತಟ್ಟಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆಯು ಭಾಗ್ಯನಗರದ ರುದ್ರಭೂಮಿಯಲ್ಲಿ ಗುರುವಾರ ಸಂಜೆ ೪ ಗಂಟೆಗೆ ನೆರವೇರಿತು. ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆಯಲ್ಲಿ ಸುಮಾರು ವರ್ಷಗಳಿಂದ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದ ಪರಶುರಾಮ ತಟ್ಟಿ ಅವರು ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದರು.ತೀವ್ರ ಸಂತಾಪ:ಪರಶುರಾಮ ತಟ್ಟಿ ಅವರ ಅಕಾಲಿಕ ನಿಧನಕ್ಕೆ ಗಂಗಾವತಿಯ ಸ್ವಾಮಿ ವಿವೇಕಾನಂದ ಟ್ರಸ್ಟ್ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಟ್ರಸ್ಟ್‌ನ ಅಧ್ಯಕ್ಷರಾದ ಸಂತೋಷ ಮೇದಾರ, ಪ್ರಧಾನ ಕಾರ್ಯದರ್ಶಿ ಸಿದ್ದರಾಮ ಗೌಳಿ ಹಾಗೂ ಸರ್ವ ಸದಸ್ಯರು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಕಂಬನಿ ಮಿಡಿದಿದ್ದಾರೆ.

Total Views: 0
ಜಾಹೀರಾತು
Share This Article