ಎಪಿಎಸ್‌ನಲ್ಲಿ ಶಿಕ್ಷಕರ ದಿನಾಚರಣೆ ಆಚರಣೆಹಾಗೂಎಪಿಎಸ್‌ನಲ್ಲಿ ಸಂಸ್ಥಾಪಕರ ದಿನಾಚರಣೆ

H.Mallikarjun
H.Mallikarjun - Kalyanasiri
2 Min Read

Teachers' Day Celebration at APS
and Founders' Day Celebration at APS




ಎಪಿಎಸ್‌ನಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ
ಹಾಗೂಎಪಿಎಸ್‌ನಲ್ಲಿ ಸಂಸ್ಥಾಪಕರ ದಿನಾಚರಣೆ

ಜಾಹೀರಾತು

ಬೆಸ್ಟ್ ಟೀಚರ್ ಆಫ್ ಎಪಿಎಸ್ – 2026’ ಪ್ರಶಸ್ತಿ ಪ್ರಧಾನ

ಬೆಂಗಳೂರು, ಸೆ.5; ಶ್ರದ್ಧೆ, ಉತ್ಸಾಹದ ವಾತಾವರಣದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಆಡಳಿತ ಮಂಡಳಿ, ನಿವೃತ್ತ ಸಿಬ್ಬಂದಿ ಜೊತೆಗೂಡಿ ಎಪಿಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಶಿಕ್ಷಣ ಸಂಸ್ಥೆಗಳ ಸಮೂಹವಾಗಿ ಎಪಿಎಸ್‌ ಅನ್ನು ರೂಪಿಸಿದ ಸಂಸ್ಥಾಪಕ ಪ್ರೊ. ಎನ್. ಅನಂತಾಚಾರ್ ಅವರ 116ನೇ ಜನ್ಮ ವಾರ್ಷಿಕೋತ್ಸವವನ್ನು ವಿಶೇಷವಾಗಿ ಸ್ಮರಿಸಲಾಯಿತು.

ರಾಮಕೃಷ್ಣ ಮಠದ ವೀರೇಶಾನಂದ ಸ್ವಾಮೀಜಿ ಮಾತನಾಡಿ, ಬೋಧನಾ ವೃತ್ತಿಯು ಅತ್ಯಂತ ಶ್ರೇಷ್ಠ ವೃತ್ತಿಗಳಲ್ಲಿ ಒಂದಾಗಿದೆ. ಶಿಕ್ಷಕರು ಪ್ರಾಮಾಣಿಕತೆ, ಸಮರ್ಪಣೆ ಮತ್ತು ಕರುಣೆಯಿಂದ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯ ಒಳಿತೇ ತಮ್ಮ ಪ್ರಮುಖ ಗುರಿಯಾಗಿರಬೇಕು. ಶಿಕ್ಷಕರ ಪ್ರಭಾವ ತರಗತಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಯುವ ಪೀಳಿಗೆಯ ವ್ಯಕ್ತಿತ್ವ ಹಾಗೂ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.
ಎಪಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸಿಎ ಡಾ. ವಿಷ್ಣು ಭರತ್ ಅಲಂಪಳ್ಳಿ ಮಾತನಾಡಿ, ಶಿಕ್ಷಕರು ಎಪಿಎಸ್‌ನ ಆಧಾರಸ್ತಂಭ ಮತ್ತು ಶಕ್ತಿಯಾಗಿದ್ದಾರೆ. ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತಿದ್ದರೂ, ಎಐ ಎಂದಿಗೂ ಶಿಕ್ಷಕರ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಈ ವಿಶೇಷ ಸಂದರ್ಭದಲ್ಲಿ ಸಿಎ ಡಾ. ವಿಷ್ಣು ಭರತ್ ಅಲಂಪಳ್ಳಿ ಅವರು ರಚಿಸಿರುವ “ಎಜುಕೇಶನ್ ಇಸ್ ಎ ಟೂಲ್ ಫಾರ್ ಸೆಕ್ಸಸ್” ಕೃತಿಯನ್ನು ವೀರೇಶಾನಂದ ಸ್ವಾಮೀಜಿ ಅವರು ಬಿಡುಗಡೆ ಮಾಡಿದರು. ವ್ಯಕ್ತಿಗಳ ಸಬಲೀಕರಣ, ವ್ಯಕ್ತಿತ್ವ ನಿರ್ಮಾಣ ಹಾಗೂ ಯಶಸ್ಸಿನ ಹಾದಿ ರೂಪಿಸುವಲ್ಲಿ ಶಿಕ್ಷಣದ ಮಹತ್ವವನ್ನು ಈ ಕೃತಿ ಪ್ರತಿಬಿಂಬಿಸುತ್ತದೆ.
ಪ್ರೊ. ಅನಂತಾಚಾರ್ ಹೆಸರಿನಲ್ಲಿ ಶ್ರೇಷ್ಠ ಶಿಕ್ಷಕರ ಪೀಠ ಸ್ಥಾಪನೆ ಈ ವರ್ಷದ ಪ್ರಮುಖ ಆಕರ್ಷಣೆಯಾಗಿದೆ. ಎಪಿಎಸ್‌ನ ಇತಿಹಾಸದಲ್ಲೇ ಮೊದಲ ಬಾರಿಗೆ ‘ಪ್ರೊ. ಅನಂತಾಚಾರ್ ಚೇರ್ ಫಾರ್ ದಿ ಬೆಸ್ಟ್ ಟೀಚರ್’ ಎಂಬ ವಿಶೇಷ ಪೀಠವನ್ನು ಸ್ಥಾಪಿಸಲಾಗಿದೆ.

ಪ್ರೊ. ಆನಂದ್ ಅವರಿಗೆ ‘ಬೆಸ್ಟ್ ಟೀಚರ್ ಆಫ್ ಎಪಿಎಸ್ – 2026’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Total Views: 0
ಜಾಹೀರಾತು
Share This Article