Call for applications for interest subsidy
ಬಡ್ಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಕೊಪ್ಪಳ ಸೆಪ್ಟೆಂಬರ್ 04, (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಗೆ/ಇತರೆ ವೃತ್ತಿಪರರಿಗೆ ಹಾಗೂ ಗುಡಿ ಕೈಗಾರಿಕೆಗಳಿಗೆ ಬಡ್ಡಿ ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಗರಿಷ್ಠ ರೂ. 5 ಲಕ್ಷ ಯೋಜನಾ ವೆಚ್ಚದ ಮೇಲೆ ಬ್ಯಾಂಕುಗಳಿAದ ಸಾಲ ಪಡೆದು, ಸಾಲದ ಮೇಲೆ ಬ್ಯಾಂಕುಗಳು ವಿಧಿಸುವ ಶೇ.7 ಕ್ಕಿಂತ ಹೆಚ್ಚಿನ ಬಡ್ಡಿಯ ಮೇಲೆ ಗರಿಷ್ಠ ಶೇ.5 ಅಥವಾ ರೂ. 10,000/- ವರೆಗೆ ಬಡ್ಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 5 ರೊಳಗೆ ನಿಗದಿತ ನಮೂನೆಯನ್ನು ಕಚೇರಿಯಿಂದ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ನಿಗದಿತ ಬ್ಯಾಂಕ್ನ ಬಡ್ಡಿ ಕ್ಲೇಮ್ನೊಂದಿಗೆ ಅಕ್ಟೋಬರ್ 9 ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು (ಗ್ರಾ.ಕೈ), ಗ್ರಾಮೀಣ ಕೈಗಾರಿಕಾ ವಿಭಾಗ, ಜಿಲ್ಲಾ ಪಂಚಾಯತ್, ಕೊಪ್ಪಳ ಕಚೇರಿ ವಿಳಾಸ: ನಗರಸಭೆ ಎದುರುಗಡೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕಛೇರಿ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ದೂರವಾಣಿ ಸಂಖ್ಯೆ: 08539-230980 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Total Views:
0
ಜಾಹೀರಾತು

