ಶ್ರಾವಣದ ಮೂರನೇ ಸೋಮವಾರ: ಬುಡ್ಡಮ್ಮ ದೇವಿಗೆ ವಿಶೇಷ ಪೂಜೆ

H.Mallikarjun
H.Mallikarjun - Kalyanasiri
1 Min Read
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; motionR: 0; delta:null; module: video;hw-remosaic: false;touch: (-1.0, -1.0);sceneMode: null;cct_value: 0;AI_Scene: (-1, -1);aec_lux: 118.64447;aec_lux_index: 0;albedo: ;confidence: ;motionLevel: -1;weatherinfo: null;temperature: 42;

Third Monday of Shravan: Special worship for Buddamma Devi

ಶ್ರಾವಣದ ಮೂರನೇ ಸೋಮವಾರ: ಬುಡ್ಡಮ್ಮ ದೇವಿಗೆ ವಿಶೇಷ ಪೂಜೆ

ಜಾಹೀರಾತು

ಕೊಪ್ಪಳ: ಜಿಲ್ಲೆಯ ಮೈನಹಳ್ಳಿ ಗ್ರಾಮದ ಆರಾಧ್ಯ ದೇವತೆ ಶ್ರೀ ಶಿವಶರಣೆ ಬುಡ್ಡಮ್ಮ ದೇವಿಯ ಶ್ರಾವಣದ ನಿಮಿತ್ತ ಮೂರನೇ ಸೋಮವಾರದಂದು ಗ್ರಾಮಸ್ಥರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.
ಬೆಳಿಗ್ಗೆ ದೇವಸ್ಥಾನದಲ್ಲಿ ಬುಡ್ಡಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಜನಾ ತಂಡದೊಂದಿಗೆ ಗ್ರಾಮಸ್ಥರು ಬುಡ್ಡಮ್ಮ ದೇವಿಯ ಮನೆಗೆ ತೆರಳಿ, ಪಲ್ಲಕ್ಕಿಯಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತಿಭಾವದಿಂದ ಪಾದಯಾತ್ರೆ ಕೈಗೊಂಡರು.
ಮೈನಹಳ್ಳಿ ಗ್ರಾಮದಿಂದ ಪಾದಯಾತ್ರೆಯ ಮೂಲಕ ಬಿಸರಹಳ್ಳಿ, ಬೇಲೂರು ಹಾಗೂ ಕಾತರಕಿ ಗ್ರಾಮಗಳ ಮಾರ್ಗವಾಗಿ ತೆರಳಿ ತುಂಗಭದ್ರಾ ನದಿಯ ದಂಡೆಯಲ್ಲಿ ದೇವಿಗೆ ವಿಶೇಷ ಪೂಜೆ ಹಾಗೂ ಮಂಗಳಾರತಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ದೇವಿಗೆ ಜೈಕಾರ ಹಾಕಿ ಭಕ್ತಿಯನ್ನು ಮೆರೆದರು.
ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ತಮ್ಮ ಮನೆಗಳಿಂದ ಸಿಹಿ ದಿನಸು ಚಪಾತಿ, ವಿವಿಧ ಬಗೆಯ ಪಲ್ಯ, ಕರ್ಚಿಕಾಯಿ ಸೇರಿದಂತೆ ಹಲವು ಬಗೆಯ ಆಹಾರ ಪದಾರ್ಥಗಳನ್ನು ತಂದು ಸಾಮೂಹಿಕವಾಗಿ ಊಟ ಮಾಡಿದರು. ಈ ಮೂಲಕ ಭಕ್ತರು ಪರಸ್ಪರ ಸೌಹಾರ್ದತೆ ಹಾಗೂ ಭಕ್ತಿಭಾವವನ್ನು ಹಂಚಿಕೊಂಡರು.
ನಂತರ ಗ್ರಾಮಸ್ಥರು ಕಾತರಕಿ ಗುಡ್ಡಾನೂರು ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮೆರವಣಿಗೆಯೊಂದಿಗೆ ಗ್ರಾಮಕ್ಕೆ ಆಗಮಿಸಿ ಹಲವು ಮನೆಗಳಲ್ಲಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ಬಿಸರಳ್ಳಿ ಗ್ರಾಮದಲ್ಲಿಯೂ ವಿಶೇಷ ಪೂಜೆ ಸಲ್ಲಿಸಿ, ನಂತರ ಸ್ವಗ್ರಾಮ ಮೈನಹಳ್ಳಿಗೆ ಪಲ್ಲಕ್ಕಿಯೊಂದಿಗೆ ಮರಳಲಾಯಿತು. ದೇವಸ್ಥಾನದಿಂದ ಬುಡ್ಡಮ್ಮ ದೇವಿಯ ಮನೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಊಡಿ ತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು. ಗ್ರಾಮದಲ್ಲಿ ಮೆರವಣಿಗೆ ನಡೆಸಿ ಧಾರ್ಮಿಕ ಕಾರ್ಯಕ್ರಮಗಳನ್ನು ಸಮಾಪ್ತಿಗೊಳಿಸಲಾಯಿತು.
ಶ್ರಾವಣದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮೈನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಳೆ-ಬೆಳೆ ಸಮೃದ್ಧಿಯಾಗಲಿ, ಗ್ರಾಮಸ್ಥರಿಗೆ ಸುಖ-ಶಾಂತಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು.
Total Views: 0
ಜಾಹೀರಾತು
Share This Article