ಡಾ. ಉಮಾಶಂಕರ್, ಭೀಮ ಪುತ್ರಿ ನಾಗಮ್ಮ ಸೇರಿ 33 ಸಾಧಕರಿಗೆ ರಾಜ್ಯಮಟ್ಟದ ಅಂಬೇಡ್ಕರ್ ಪ್ರಶಸ್ತಿ

H.Mallikarjun
H.Mallikarjun - Kalyanasiri
2 Min Read
State-level Ambedkar Award for 33 achievers, including Dr. Umashankar and Bhima's daughter Nagamma.

ಡಾ. ಉಮಾಶಂಕರ್, ಭೀಮ ಪುತ್ರಿ ನಾಗಮ್ಮ ಸೇರಿ 33 ಸಾಧಕರಿಗೆ ರಾಜ್ಯಮಟ್ಟದ ಅಂಬೇಡ್ಕರ್ ಪ್ರಶಸ್ತಿ

ಜಾಹೀರಾತು


ಚಿಕ್ಕೋಡಿ: ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶಿಷ್ಟ ಛಾಪು ಮೂಡಿಸಿದ ಮಹಾನ್ ಕಾನೂನು ಹೋರಾಟಗಾರರಾಗಿದ್ದು, ಅವರ ಆದರ್ಶಗಳನ್ನು ಸ್ಮರಿಸುವ ಉದ್ದೇಶದಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯದ 33 ಗಣ್ಯರನ್ನು ಗುರುತಿಸಿ ರಾಜ್ಯಮಟ್ಟದ ಅಂಬೇಡ್ಕರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಎ.ವಿ.ಎಸ್.ಎಸ್. ಸಂಘದ ನಿರ್ವಾಹಕ ಸದಸ್ಯ ದಯಾನಂದ ಕಾಂಬಳೆ ತಿಳಿಸಿದರು.


ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಅವರು ಚಿಕ್ಕೋಡಿ ಸುತ್ತಮುತ್ತಲಿನ ಪ್ರದೇಶಗಳಿಗೆ ಆಗಮಿಸಿ ಸಾಮಾಜಿಕ ಸುಧಾರಣೆಯ ಕಾರ್ಯಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ವೇಳೆ ಎ.ವಿ.ಎಸ್.ಎಸ್. ಸದಸ್ಯರಿಗೆ ಯಶಸ್ವಿನಿ ಕಾರ್ಡ್ ವಿತರಣಾ ಸಮಾರಂಭವೂ ನಡೆಯಲಿದೆ ಎಂದರು.
ಆಗಸ್ಟ್ 30ರಂದು ಚಿಕ್ಕೋಡಿಯ ಎ.ಜಿ. ಫಾರಂ ಹೌಸ್‌ನಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 33 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ವಿಜಯಕುಮಾರ್ ಬಾಗಿವಾಳು (ಮಾಧ್ಯಮ), ಯೋಗೀಶ್ ಈ. (ಸಂಗೀತ), ಶಂಭು ಎನ್. ಕಾಳೆ (ಸಮಾಜ ಸೇವೆ), ಸಿ.ವೈ. ಸಂಗಮ (ಶಿಕ್ಷಣ), ಡಾ. ಚಿಂ. ಬಸವರಾಜು (ಬೌದ್ಧ ಧರ್ಮ ಪ್ರಚಾರ), ಸಿದ್ದರಾಮಯ್ಯ ಹಿಪ್ಪರಗಿ (ಸಂಘಟನೆ), ಚಿದಾನಂದ ಕಾಂಬಳೆ (ಸಮಾಜ ಸೇವೆ), ನಾಗರಾಜು ತಲಕಾಡು (ಸಾಹಿತ್ಯ ಮತ್ತು ಸಿನಿಮಾ), ಆತ್ಮಾನಂದ ಎನ್.ಆರ್. (ಸಂಘಟನೆ), ಡಾ. ನಂಜಯ್ಯ ಹೊಂಗನೂರು (ಸಮಾಜ ಸೇವೆ), ಡಾ. ಮಂಜು ಎಚ್.ಪಿ. (ಜಾನಪದ), ಡಾ. ಪ್ರಸನ್ನ (ಸಾಹಿತ್ಯ), ವಿನೋದ್ ಮಹದೇವಪುರ (ಪತ್ರಿಕಾ ಮಾಧ್ಯಮ), ಡಾ. ಭೈರಪ್ಪ ಕೆ.ಎಂ. (ಸಾಹಿತ್ಯ), ನೀಲಾಮಲ್ಲೆ (ಶಿಕ್ಷಣ), ಶರಣು ಸಿಂಧೆ (ಸಂಘಟನೆ), ಬಸವರಾಜು ಬೆನ್ನೂರು (ಸಂಘಟನೆ), ವಿಠಲ್ ವಗ್ಗನ (ನ್ಯಾಯವಾದಿ), ರವಿ ನಾಯ್ಕರ (ಸಾಹಿತ್ಯ ಚಳುವಳಿ), ಡಾ. ಸುಬ್ಬರಾವ್ ಎಂಟತ್ತಿನವರ (ಸಾಹಿತ್ಯ), ರಾಘವೇಂದ್ರ ಅಪೂರ್ವ (ಆಡಳಿತ), ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ (ಶಿಕ್ಷಣ), ಡಾ. ಸಿ. ರಂಗಸ್ವಾಮಿ (ಶಿಕ್ಷಣ), ಡಾ. ಹೊಂಬಯ್ಯ (ಸಾಹಿತ್ಯ), ಡಾ. ಶಿವಕುಮಾರ (ಶೈಕ್ಷಣಿಕ), ಡಾ. ಲಕ್ಷ್ಮಿಕಾಂತ್ ಸಿಂಗ್ (ಸಾಮಾಜಿಕ ಸೇವೆ), ಡಾ. ಉಮಾ ಎ. (ಶಿಕ್ಷಣ), ಪ್ರಕಾಶ್ ಬೀರಪ್ಪ ಗೋಡ್ಬೋಲೆ (ಬೌದ್ಧ ಧರ್ಮ ಪ್ರಚಾರ), ನಿತಿನ್ ತೊರವಿ (ರಾಜಕೀಯ), ಕುಮಾರ ಎಂ. ತಳವಾರ್ (ಕನ್ನಡ ಮತ್ತು ಸಂಘಟನೆ), ವಿಠಲ್ ಮಾದರ (ಸಾಮಾಜಿಕ ಹೋರಾಟ) ಸೇರಿದಂತೆ ಹಲವು ಸಾಧಕರು ಸೇರಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಅವರು ಸಾಧಕರನ್ನು ಸನ್ಮಾನಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ವಿ.ಎಸ್.ಎಸ್. ಸಂಸ್ಥಾಪಕ ತುಂಬಲ ರಾಮಣ್ಣ ವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ದಯಾನಂದ ಕಾಂಬಳೆ, ರಮೇಶ್ ಬೋಸ್ಲೆ, ಶಾಂತ ರಾಯಣ್ಣ, ಶ್ರೀನಾಥ್ ಚಿಕ್ಕೋಡಿ ಹಾಗೂ ಎ.ವಿ.ಎಸ್.ಎಸ್. ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Total Views: 0
ಜಾಹೀರಾತು
Share This Article