Cancellation of unauthorized layout plans: Warning to plot buyers

ಅನಧಿಕೃತ ಬಡಾವಣೆ ನಕ್ಷೆ ರದ್ದು: ನಿವೇಶನ ಖರೀದಿದಾರರಿಗೆ ಎಚ್ಚರಿಕೆ

ಗಂಗಾವತಿ: ತಾಲೂಕಿನ ವೆಂಕಟಗಿರಿ ಹೋಬಳಿಯ ವಡ್ಡರಹಟ್ಟಿ ಗ್ರಾಮ ವ್ಯಾಪ್ತಿಯ ಸರ್ವೇ ನಂ. 34/3/2ರ 2.31 ಎಕರೆ ಜಮೀನಿನಲ್ಲಿ ನಿರ್ಮಿಸಿರುವ ಅನಧಿಕೃತ ಬಡಾವಣೆಯ ನಕ್ಷೆಯನ್ನು ರದ್ದುಪಡಿಸಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ನಡಾವಳಿ ಸಂ. ತಾಪಂ/ಲೋಕಾಯುಕ್ತ/ಸಿ.ಆರ್/2026-27/1848, ದಿನಾಂಕ 03-03-2026ರ ಆದೇಶದಂತೆ ಅನಧಿಕೃತ ಬಡಾವಣೆಯ ನಕ್ಷೆಯನ್ನು ರದ್ದುಪಡಿಸಿದ್ದು, ನಂತರ 16-07-2026ರಂದು ಮುಂದಿನ ಕ್ರಮ ಜರುಗಿಸುವಂತೆ ಸೂಚನೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಡ್ಡರಹಟ್ಟಿ ಗ್ರಾಮದ ಸರ್ವೇ ನಂ. 34/3/2ರ 2.31 ಎಕರೆ ಜಮೀನಿಗೆ ಸಂಬಂಧಿಸಿದ ಅನಧಿಕೃತ ಬಡಾವಣೆಯ ನಕ್ಷೆ ರದ್ದುಗೊಂಡಿರುವ ಹಿನ್ನೆಲೆಯಲ್ಲಿ, ಇ-ಸ್ವತ್ತು ವಿತರಿಸಿರುವ ಆಸ್ತಿಗಳನ್ನು ಹೊರತುಪಡಿಸಿ, ಮಾಲೀಕರ ಹೆಸರಿನಲ್ಲಿರುವ ಇತರೆ ಆಸ್ತಿಗಳನ್ನೂ ರದ್ದುಪಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಸಾರ್ವಜನಿಕರು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಸದರಿ ಬಡಾವಣೆಯಲ್ಲಿ ನಿವೇಶನ ಅಥವಾ ಆಸ್ತಿ ಖರೀದಿಸುವ ಮೊದಲು ಅಗತ್ಯ ದಾಖಲೆಗಳನ್ನು ಪರಿಶೀಲಿಸಬೇಕು. ಈ ಕಚೇರಿಯ ಗಮನಕ್ಕೆ ಬಾರದೆ ನಿವೇಶನ ಖರೀದಿ ಅಥವಾ ಇತರೆ ವ್ಯವಹಾರಗಳಲ್ಲಿ ತೊಡಗಿಕೊಂಡಲ್ಲಿ, ಅದಕ್ಕೆ ಸಂಬಂಧಿಸಿದ ಸಂಪೂರ್ಣ ಜವಾಬ್ದಾರಿ ಖರೀದಿದಾರರದೇ ಆಗಿರುತ್ತದೆ ಎಂದು ಸಾರ್ವಜನಿಕ ಹಿತದೃಷ್ಟಿಯಿಂದ ಮಾಹಿತಿ ನೀಡಲಾಗಿದೆ.
.

