Death of unidentified person: Karatagi police appeal for information.

ಅನಾಮಧೇಯ ವ್ಯಕ್ತಿ ಸಾವು: ಮಾಹಿತಿ ನೀಡಲು ಕಾರಟಗಿ ಪೊಲೀಸರ ಮನವಿ
ಕಾರಟಗಿ: ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಾಪುರ ಗ್ರಾಮದ ಉಪಕಾಲುವೆ–32ರಲ್ಲಿ ಸುಮಾರು 65 ವರ್ಷ ವಯಸ್ಸಿನ ಅನಾಮಧೇಯ ವ್ಯಕ್ತಿಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತ ವ್ಯಕ್ತಿಯ ಹೆಸರು ಹಾಗೂ ವಿಳಾಸ ಇದುವರೆಗೆ ತಿಳಿದು ಬಂದಿಲ್ಲ. ಮೃತರ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ಅವರನ್ನು ಗುರುತಿಸಿದಲ್ಲಿ ತಕ್ಷಣವೇ ಕಾರಟಗಿ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಿಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Total Views:
0
ಜಾಹೀರಾತು

