ಅರ್ಹ ಮತದಾರರು ಪಟ್ಟಿಯಿಂದ ಹೋರಗುಳಿಯಬಾರದು :ಅಧಿಕಾರಿ ಮುನಿರಾಜು ಸೂಚನೆ .

H.Mallikarjun
H.Mallikarjun - Kalyanasiri
1 Min Read

ಅರ್ಹ ಮತದಾರರು ಪಟ್ಟಿಯಿಂದ ಹೋರಗುಳಿಯಬಾರದು :ಅಧಿಕಾರಿ ಮುನಿರಾಜು ಸೂಚನೆ .

ಜಾಹೀರಾತು

 

Eligible voters should not be removed from the list: Officer Muniraj’s advice.

 


ವರದಿ:ಬಂಗಾರಪ್ಪ .ಸಿ.

ಹನೂರು:- ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಹನೂರು ತಾಲೂಕಿನಲ್ಲಿ 2026ರ ವಿಶೇಷ ಸಂಕ್ಷಿಪ್ತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಆರಂಭಗೊಂಡಿದ್ದು, ಪರಿಷ್ಕರಣೆ ವೇಳಾಪಟ್ಟಿ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.

ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದಲ್ಲಿ ಪತ್ರಕರ್ತರನ್ನೂದ್ದೇಶಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ಒಟ್ಟು 2,24,616 ಮತದಾರರು ಇದ್ದಾರೆ. ಪರಿಷ್ಕರಣೆಯ ಪೂರ್ವ ಅರ್ಹತಾ ಅವಧಿ 2026ರ ಜೂನ್ 30ರಿಂದ ಆಗಸ್ಟ್ 8ರವರೆಗೆ ನಿಗದಿಪಡಿಸಲಾಗಿದೆ. ಇದೇ ಅವಧಿಯಲ್ಲಿ ಗೃಹಗೃಹ ಸಮೀಕ್ಷೆ ಕಾರ್ಯವೂ ನಡೆಯಲಿದೆ. ಕರಡು ಮತದಾರರ ಪಟ್ಟಿಯನ್ನು ಜುಲೈ 17, 2026ರಂದು ಪ್ರಕಟಿಸಲಾಗುತ್ತದೆ.
ಕರಡು ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಮತ್ತು ಹಕ್ಕು ದಾವೆಗಳನ್ನು ಆಗಸ್ಟ್ 17ರಿಂದ ಸೆಪ್ಟೆಂಬರ್ 16ರವರೆಗೆ ಸಲ್ಲಿಸಬಹುದಾಗಿದೆ. ಸಲ್ಲಿಕೆಯಾಗುವ ಅರ್ಜಿಗಳ ವಿಲೇವಾರಿ ಅಕ್ಟೋಬರ್ 15ರೊಳಗೆ ಪೂರ್ಣಗೊಳ್ಳಲಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 19, 2026ರಂದು ಪ್ರಕಟಿಸಲಾಗುತ್ತದೆ.
ಹನೂರು ತಾಲೂಕಿನಲ್ಲಿ 2,24,616 ಅರ್ಹ ಮತದಾರರ ಪೈಕಿ 1,75,519 ಜನರ ಇ-ಕೆವೈಸಿ (EF) ಪ್ರಗತಿ ಸಾಧನೆಯಾಗಿದ್ದು, ಇದು ಶೇ.78.14ರಷ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ, 100 ವರ್ಷ ಮೇಲ್ಪಟ್ಟ 18 ಮತದಾರರು, ASSD ವರ್ಗಕ್ಕೆ ಸೇರಿದ 10,291 (ಶೇ.4.58) ಮತದಾರರು, 4686 ಮರಣ , 4413 ಶಾಶ್ವತ ಸ್ಥಳಾಂತರ, 1083 ಡಬಲ್ ಎಂಟ್ರಿಗಳು ಹಾಗೂ 15 ಇತರೆ ಮತದಾರರು ದಾಖಲಾಗಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಹೆಸರು ತೆಗೆದುಹಾಕುವ ಅಗತ್ಯವಿರುವ ಸಾರ್ವಜನಿಕರು ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಅಧಿಕಾರಿಗಳು ಮಾದ್ಯಮ ಮೂಲಕ ಮನವಿ ಮಾಡಿದ್ದಾರೆ.
ಇದೇ ಸಮಯದಲ್ಲಿ ಹನೂರು ತಾಲ್ಲೂಕು ತಹಶಿಲ್ದಾರರಾದ ಶ್ರೀ ಚೈತ್ರಾರವರು ,ಉಪ ತಹಶಿಲ್ದಾರರ ಸುರೇಖ ಹಾಗೂ ಅಧಿಕಾರಿಗಳಾದ ಲೋಕೇಶ್ , ಸೇರಿದಂತೆ ಇನ್ನಿತರರು ಹಾಜರಿದ್ದರು.

Total Views: 0
Share This Article