ಟಿಬೇಟ್ ಕ್ಯಾಂಪ್‌ನಲ್ಲಿ ನೂತನ ಜೊಗ್ಚೆನ್ ಸಾರ್ವಜನಿಕರ ಗ್ರಂಥಾಲಯ ಉದ್ಘಾಟಸಿದ ಶಾಸಕ ಎಂ.ಆರ್ ಮಂಜುನಾಥ್.

H.Mallikarjun
H.Mallikarjun - Kalyanasiri
1 Min Read

MLA M.R. Manjunath inaugurated the new Dzogchen Public Library at the Tibet Camp.

ಟಿಬೇಟ್ ಕ್ಯಾಂಪ್‌ನಲ್ಲಿ ನೂತನ ಜೊಗ್ಚೆನ್ ಸಾರ್ವಜನಿಕರ ಗ್ರಂಥಾಲಯ ಉದ್ಘಾಟಸಿದ ಶಾಸಕ ಎಂ.ಆರ್ ಮಂಜುನಾಥ್.

ಜಾಹೀರಾತು


ವರದಿ: ಬಂಗಾರಪ್ಪ .ಸಿ.
ಹನೂರು : ತಾಲೂಕಿನ ಒಡೆಯರಪಾಳ್ಯ ಟಿಬೇಟಿಯನ್ ಕ್ಯಾಂಪ್ನಲ್ಲಿ ನೂತನ ಸಾರ್ವಜನಿಕರ ಗ್ರಂಥಾಲಯವನ್ನು ಶಾಸಕರಾದ ಎಮ್ ಆರ್ ಮಂಜುನಾಥ್ ಉದ್ಘಾಟನೆಯನ್ನು ಮಾಡುವ ಮೂಲಕ ನೆರವೇರಿಸಿದರು .
ನಂತರ ಮಾತನಾಡಿದ ಅವರು ಗ್ರಂಥಾಲಯದಲ್ಲಿರುವ ಪುಸ್ತಕಗಳ ಬಗ್ಗೆ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಓದುವ ಮೂಲಕ ಉತ್ತಮ ವ್ಯಾಸಂಗ ಮಾಡಲು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು , ಅಲ್ಲದೆ ಓದುವ ಅಭ್ಯಾಸದಿಂದಲೇ ಸಮಾಜದಲ್ಲಿ ಬದಲಾವಣೆಯಾಗಲು ಸಾಧ್ಯವಾಗುತ್ತೆ ವಿದ್ಯಾರ್ಥಿಗಳಿಗೆ, ಯುವಕರಿಗೆ ಮತ್ತು ಸಾರ್ವಜನಿಕರಿಗೆ ಓದುವ ಅವಕಾಶ ಮಾಡಿಕೊಳ್ಳುವುದು ಬಹಳ ಒಳಿತು , ಪಠ್ಯಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆ, ಸಾಹಿತ್ಯ ಮತ್ತು ಸಾಮಾನ್ಯ ಜ್ಞಾನದ ಪುಸ್ತಕಗಳು ಶೈಕ್ಷಣಿಕ ಬೆಳವಣಿಗೆಗೆ ದೊಡ್ಡ ಕೊಡುಗೆಯಾಗಲಿ ಎಂದರು.
ಇದೇ ಸಮಯದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ತುಪ್ಟನ್ ಪ್ಸೆರಿಂಗ್, ಸೇರಿದಂತೆ ಇನ್ನಿತರರು ಹಾಜರಿದ್ದರು.

Total Views: 0
Share This Article