ನೆಲಮೂಲ ಸಂಸ್ಕೃತಿ- ನಮ್ಮ ಜಾನಪದ ಕಾರ್ಯಕ್ರಮ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Root Culture - Our Folk Program




ನೆಲಮೂಲ ಸಂಸ್ಕೃತಿ- ನಮ್ಮ ಜಾನಪದ ಕಾರ್ಯಕ್ರಮ

ಜಾಹೀರಾತು


ಯುವಜನತೆ ಮೊಬೈಲ್ ಗೀಳಿನಿಂದ ಹೊರಬಂದು ನಮ್ಮ ನೆಲದ ಸಂಸ್ಕೃತಿಯನ್ನು ಅರಿತುಕೊಳ್ಳಬೇಕು: ಸಿ.ಪಿ.ಐ ವಿಶ್ವನಾಥ ಹಿರೇಗೌಡ್ರ

ಕೊಪ್ಪಳ ಮೇ 13, (ಕರ್ನಾಟಕ ವಾರ್ತೆ): ಯುವಜನತೆ ಮೊಬೈಲ್ ಗೀಳಿನಿಂದ ಹೊರಬಂದು ನಮ್ಮ ನೆಲದ ಸಂಸ್ಕೃತಿ, ಪರಂಪರೆಯನ್ನು ಅರಿತುಕೊಳ್ಳಬೇಕು ಎಂದು ಕುಷ್ಟಗಿ ಸಿ.ಪಿ.ಐ ವಿಶ್ವನಾಥ ಹಿರೇಗೌಡ್ರ ಹೇಳಿದರು.
ಬುಧವಾರದಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕುಷ್ಟಗಿಯ ಜನಜಾಗೃತಿ ಕಲಾರಂಗ ಸಂಸ್ಥೆ(ರಿ) ವತಿಯಿಂದ ಕುಷ್ಟಗಿಯ ಬಿ.ಜಿ.ಎಸ್. ಪ್ಯಾರಾ ಮೆಡಿಕಲ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ನೆಲ ಮೂಲ ಸಂಸ್ಕೃತಿ- ನಮ್ಮ ಜಾನಪದ ಜಾನಪದ ಕಲಾ ಪ್ರಕಾರಗಳ ಪರಿಚಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಸಾಮಾನ್ಯರ ಬದುಕಿನಲ್ಲಿ ಬರುವ ನೋವು-ನಲಿವುಗಳು ಜಾನಪದಗಳಾಗಿ ಹೊರಹೊಮ್ಮಿ ತಲೆಮಾರುಗಳಿಂದ ತಲೆಮಾರಿಗೆ ಮುಂದುವರೆಯುತ್ತಿವೆ. ಇಂದಿನ ಯುವಜನತೆ ಮೊಬೈಲ್ ಗೀಳಿನಿಂದ ತಮ್ಮ ಸುಂದರ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಯುವ ಸಮುದಾಯ ಒಣ ಭ್ರಮೆ, ಭ್ರಾಂತಿಗಳಿಗೆ ಒಳಗಾಗದೇ ಮುಂದಿನ ಜೀವನವನ್ನು ಸುಖಮಯವಾಗಿಸಿಕೊಳ್ಳಲು ಒಳ್ಳೆಯ ಗುರಿಗಳನ್ನು ಇಟ್ಟುಕೊಳ್ಳಬೇಕು. ನಮ್ಮ ಪರಂಪರೆಯನ್ನು ಅರಿತು, ಅದರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಹಾಗೆಯೇ ಸಮಾಜದಲ್ಲಿ ನಡೆಯುವ ಅಹಿತಕರ ಘಟನೆಗಳ ಕುರಿತು ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದರು.
ಜಾನಪದದಲ್ಲಿ ಲಾವಣಿ/ ಗೀಗೀ ಪದಗಳು ಕುರಿತು ಉಪನ್ಯಾಸ ನೀಡಿದ ರಾಜ್ಯ ಜಾನಪದ ಅಕಾಡೆಮಿ ಸದಸ್ಯ ಡಾ.ಜೀವನಸಾಬ ಬಿನ್ನಾಳ ಅವರು, ನಮ್ಮ ಹಳ್ಳಿಗಳ ಸಂಸ್ಕೃತಿ ಗಟ್ಟಿಗೊಳ್ಳಬೇಕಾದರೆ ಮೂಲ ಜಾನಪದ ಗೀತೆಗಳಾದ ಕುಟ್ಟುವ ಪದ, ಬೀಸುವ ಪದ, ಕೋಲಾಟದ ಪದ, ಲಾವಣಿ, ಸೋಬಾನೆ ಹಾಡು ಇವುಗಳ ಮೂಲ ದಾಟಿ ಮತ್ತು ಶೈಲಿಗಳನ್ನು ಇಂದಿನ ಯುವ ಪೀಳಿಗೆ ಅರ್ಥ ಮಾಡಿಕೊಳ್ಳಬೇಕಾಗಿದೆ. ಇದರಿಂದ ನಮ್ಮ ಸಂಸ್ಕೃತಿ ಮತ್ತು ಭಾಷೆ ಗಟ್ಟಿಗೊಳ್ಳಲಿದೆ ಎಂದರು.
ಬಿ.ಜಿ.ಎಸ್. ಪ್ಯಾರಾ ಮೆಡಿಕಲ್ ಕಾಲೇಜು ಅಧ್ಯಕ್ಷ ಶ್ರೀಶೈಲ ವಾದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜನಜಾಗೃತಿ ಕಲಾರಂಗ ಸಂಸ್ಥೆ (ರಿ) ಕುಷ್ಟಗಿ ಅಧ್ಯಕ್ಷ ಶರಣಪ್ಪ ವಡಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭ ಕುಷ್ಟಗಿ ಸಿ.ಪಿ.ಐ ವಿಶ್ವನಾಥ ಹಿರೇಗೌಡ್ರ ಇವರಿಗೆ “ಪ್ರೇರಕ ಚೇತನ” ಮತ್ತು ರಾಜ್ಯ ಜಾನಪದ ಅಕಾಡೆಮಿ ಸದಸ್ಯ ಡಾ.ಜೀವನಸಾಬ ಬಿನ್ನಾಳ ಇವರಿಗೆ “ಜನಪದ ಚೇತನ” ಬಿರುದುಗಳನ್ನು ಸಂಸ್ಥೆಯಿAದ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಾವಲಸಾಬ ಅತ್ತಾರ, ಮುದಕವ್ವ ಗಂಜ್ಯಾಳ, ನಿಂಗಪ್ಪ ಸೊಲ್ಲಾಪೂರ, ಮಲ್ಲಿಕಾರ್ಜುನ ಕುಲಕರ್ಣಿ ಮತ್ತು ಸಂಗಡಿಗರಿAದ ಲಾವಣಿ, ಗೀ ಗೀ ಪದ ಕಾರ್ಯಕ್ರಮಗಳು ನಡೆದವು. ನಾಗರಾಳ ಗ್ರಾಮದ ಬಾಳಮ್ಮ ಯಲಬರ್ತಿ ಹಾಗೂ ಸಂಗಡಿಗರಿAದ ಸಂಪ್ರದಾಯದ ಪದಗಳು, ಶರಣಪ್ಪ ಬನ್ನಿಗೋಳ ಹಾಗೂ ಬಸವರಾಜ ಗಂಗನಾಳ ಹಾಗೂ ಸಂಗಡಿಗರಿAದ ಬಯಲಾಟದ ಪದಗಳನ್ನು ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾಯಿತು.
ಅಕ್ಕಮಹಾದೇವಿ ಪ್ರಾರ್ಥಿಸಿದರು. ಉಪನ್ಯಾಸಕ ಕಿರಣ ಬಡಿಗೇರ ಸ್ವಾಗತಿಸಿದರು. ಚನ್ನಪ್ಪ ಭಾವಿಮನಿ ಕಾರ್ಯಕ್ರಮ ನಿರೂಪಿಸಿದರು. ಅನಿಲಕುಮಾರ ವಂದಿಸಿದರು. 

Total Views: 0
Share This Article