
It has been decided to celebrate the birth anniversaries of Sri Shankaracharya and Maharishi Bhagiratha on the 21st and 23rd.
ಶ್ರೀ ಶಂಕರಾಚಾರ್ಯರ ಹಾಗೂ ಮಹರ್ಷಿ ಭಗೀರಥ ದಿನಾಂಕ 21 ಹಾಗೂ 23ರಂದು ಜಯಂತೋತ್ಸವ ಆಚರಿಸಲು ತೀರ್ಮಾನ


ಗಂಗಾವತಿ: ನಗರದ ತಹಸೀಲ್ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರದಂದು ಗ್ರೇಡ್2 ತಹಸೀಲ್ದಾರ್ರಾದ ಮಹಾಂತೇಶ್ ಗೌಡ ಅಧ್ಯಕ್ಷತೆಯಲ್ಲಿ ಶ್ರೀ ಶಂಕರಾಚಾರ್ಯರ ಹಾಗೂ ಮಹರ್ಷಿ ಶ್ರೀ ಭಗೀರಥ ಜಯಂತೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ ಜರುಗಿತು
ಈ ಸಂದರ್ಭದಲ್ಲಿ ತಹಸಿಲ್ದಾರರು ಮಾತನಾಡಿ ವಿಶ್ವ ದಾರ್ಶನಿಕ ದಿನಾಚರಣೆಯನ್ನು ಶ್ರೀ ಶಂಕರಾಚಾರ್ಯರ ಜಯಂತೋತ್ಸವವನ್ನು ದಿನಾಂಕ 21 ರಂದು ಆಚರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದ ಅನ್ವಯ ಪ್ರತಿಯೊಂದು ಇಲಾಖೆಗಳಲ್ಲಿ ಆಚರಣೆಗೆ ಮುಂದಾಗಬೇಕೆಂದು ತಿಳಿಸಿದರು.
ನಾರಾಯಣರಾವ್ ವೈದ್ಯ ಮಾತನಾಡಿ ಪ್ರತಿಯೊಂದು ಇಲಾಖೆಗಳಲ್ಲಿ ಶ್ರೀ ಶಂಕರಾಚಾರ್ಯರ ಜಯಂತೋತ್ಸವವನ್ನು ಆಚರಿಸಲು ಕಟ್ಟು ನಿಟ್ಟಿನ ಆದೇಶ ನೀಡಬೇಕು ಎಂದರು
ಇದೆ ಸಂದರ್ಭದಲ್ಲಿ ದಿನಾಂಕ 23 ರಂದು ಜರುಗಲಿರುವ ಮಹರ್ಷಿ ಭಗಿರಥ ಜಯಂತೋತ್ಸವದ ಪೂರ್ವಭಾವಿ ಸಭೆಯಲ್ಲಿ ಉಪ್ಪರ ಸಮಾಜ ಅಧ್ಯಕ್ಷರಾದ ವೆಂಕಟೇಶ್ ಅಮರ್ ಜ್ಯೋತಿ ಸೇರಿದಂತೆ ಮತ್ತಿ ತರ ಮುಖಂಡರುಗಳು ಭಗೀರಥ ಜಯಂತೋತ್ಸವವನ್ನು ಅರ್ಥಪೂರ್ಣವಾದ ಆಚರಣೆಗೆ ಎಲ್ಲಾ ಇಲಾಖೆ ಅಧಿಕಾರಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಭಯ ಸಮಾಜಗಳ ಮುಖಂಡರುಗಳು ಪಾಲ್ಗೊಂಡಿದ್ದರು..
