
Gundamma Camp Youth's campaign to save schools, increase enrollment, and save schools on second day

ಅಳಿವಿನಂಚಿನಲ್ಲಿರುವ ಸರಕಾರಿ ಶಾಲೆಯನ್ನು ಉಳಿಸುವ ಪ್ರಯತ್ನ.

ಗುಂಡಮ್ಮ ಕ್ಯಾಂಪ್ ಯುವಕರಿಮದ ದಾಖಲಾತಿ ಹೆಚ್ಚಿಸಿ ಶಾಲೆ ಉಳಿಸಿ ಎನ್ನುವ ಆಂದೊಲನ ಎರಡನೇ ದಿನ
ಗಂಗಾವತಿ:ಸರ್ಕಾರವು ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕಳುಹಿಸಿ ಎನ್ನುವ ಘೋಷವಾಕ್ಯದಡಿ ಕೆಲಸ ನಿರ್ವಹಿಸಿದರೆ.
ಅದರೆ ಗುಂಡಮ್ಮ ಕ್ಯಾಂಪ್ 25ನೇ ವಾರ್ಡಿನ ಯುವಕರು ಹಿರಿಯರು ಸೇರಿ ದಾಖಲಾತಿ ಹೆಚ್ಚಿಸಿ ಶಾಲೆ ಉಳಿಸಿ ಎನ್ನುವ ಸಂಕಲ್ಪ ಮಾಡಿ ಪಣತೊಟ್ಟು ಮಕಳ ದಾಖಲಾತಿಗೆ ಮನೆ,ಮನೆಗೆ ಬೇಟಿ ನೀಡಿ ಪಾಲಕರಲ್ಲಿ ಶಾಲೆಯ ಸೌಲಭ್ಯ ಗಳ ಮಾಹಿತಿನೀಡಿದರು.
ಈ ಭಾಗದ ಸಮಾನ ಮನಸ್ಕರ ಯುವಕರು ಸಮಿತಿಯೊಂದನ್ನು ರಚಿಸಿಕೊಂಡು, ಸರಕಾರಿ ಶಾಲೆಗಳ ಮಹತ್ವ ಮತ್ತು ಅಲ್ಲಿ ಸಿಗುವ ಸೌಲಭ್ಯಗಳ ವಿವರಗಳನ್ನು ಪೋಷಕರಿಗೆ ತಲುಪಿಸಲು ಮುಂದಾಗಿದ್ದಾರೆ.
ಸುಮಾರು 30 ವರ್ಷಗಳ ಹಳೆಯದಾದ ಶಾಲೆಯು ಸಾವಿರಾರು ವಿದ್ಯಾರ್ಥಿಗಳು ಕಲೆತು ಅತ್ಯುನ್ನತ ಮಟ್ಟದಲ್ಲಿದ್ದಾರೆ.
2026-2027ನೇ ಶೈಕ್ಷಣಿಕ ವರ್ಷದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂಬ ಏಕೈಕ ಉದ್ದೇಶದಿಂದ ಪ್ರತಿ ಮನೆಮನೆಗೂ ಭೇಟಿ ನೀಡಿ ತಂದೆ-ತಾಯಿಯರಿಗೆ ಶಾಲೆಯ ಬಗ್ಗೆ ಮನವರಿಕೆ ಮಾಡಿ ಮಕ್ಕಳನ್ನು ಶಾಲೆಗೆ ದಾಖಲಿಸುವಂತೆ ತಿಳಿಸುತ್ತಿದ್ದಾರೆ.
ಪ್ರೇರಣಾದಾಯಕ ಕೆಲಸ : ಸರ್ಕಾರವು ಶಾಲೆಯ ಅಭಿವೃದ್ಧಿ ಕುಂಠಿತವಾಗಿದೆ ಎಂದು ಶಾಲೆಗೆ ಮಕ್ಕಳು ಸಂಖ್ಯೆ ಗಣನೀಯ ಕಡಿಮೆಯಾಗಿದೆ ಎಂದು ತಿಳಿಸಿ ಶಾಲೆ ಮುಚ್ಚುವುದನ್ನು ನಾವು ಎಲ್ಲ ನೋಡಿದ್ದೇವೆ ಆದರೆ ಗುಂಡಮ್ಮ ಕ್ಯಾಂಪ್ ವಯಸ್ಕರ ಮನಸ್ಥಿತಿಯು ವಿಭಿನ್ನ ಯಶಸ್ವಿ ಪ್ರಯತ್ನವು ಮಾಡುತ್ತಿದ್ದಾರೆ.
ಈ ಪ್ರಯತ್ನ ಯಶಸ್ವಿಯಾಗಲಿ ಮತ್ತು ಈ ಪ್ರಯತ್ನದಿಂದ ಹಲವಾರು ವಿದ್ಯಾರ್ಥಿಗಳಿಗೂ ಹಾಗೂ ಬೇರೆ ಬೇರೆ ವಾರ್ಡಿನ ಜನರಿಗೂ ಪ್ರೇರಣೆಯಾಗುವಂತ ಕೆಲಸವಾಗಿದೆ.
ಕೆ ಸನ್ನೀಕ್ ಮಾತನಾಡಿದರು ಇದು ಕೇವಲ ಒಂದು ದಿನದ ಆಂದೋಲನವಲ್ಲ, ಜೂನ್ ತಿಂಗಳಲ್ಲಿ ಶಾಲಾ ಆರಂಭದವರೆಗೆ ನಿರಂತರವಾಗಿ ಈ ಅಭಿಯಾನ ನಡೆಯಲಿದೆ.
ಹೆಚ್ಚಿನ ಮಕ್ಕಳನ್ನು ಶಾಲೆಗೆ ಸೇರಿಸುವ ಮೂಲಕ ಕನ್ನಡ ಶಾಲೆ ಉಳಿಸುವ ಸಂಕಲ್ಪ ನಮ್ಮದಾಗಿದೆ. ವಾರ್ಡಿನ ಹಿರಿಯರಾದ ಹೆಚ್ .ಮಲ್ಲಿಕಾರ್ಜುನ, ಸಿದ್ದು ಗೌಳಿ, ಉಲ್ಲಾಸ, ದೇವರಾಜ್ ಗುಡದಳ್ಳಿ, ಜೀವರಾಜ್, ಕೊಟ್ರೇಶ್ ಹೊಂಬಾಳ್, ಹಾಗೂ ಶಿಕ್ಷಕರು, ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳು ಅಂಗನವಾಡಿ ಶಿಕ್ಷಕರು ಭಾಗವಹಿಸಿದ್ದರು.
