Changes in the schedule of government offices in the hot country

ಬಿಸಿಲ ನಾಡಿನ ಸರ್ಕಾರಿ ಕಚೇರಿಗಳ ವೇಳಾಪಟ್ಟಿ ಬದಲಾವಣೆ
ಬೆಂಗಳೂರು. ಬೆಳಗಾವಿ ವಿಭಾಗದ ಬಿಜಾಪುರ್ ಮತ್ತು ಬಾಗಲಕೋಟೆ ಕಲ್ಬುರ್ಗಿ ವಿಭಾಗದ ಎಲ್ಲಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕಚೇರಿಗಳಲ್ಲಿ ಸಮಯ ಬದಲಾವಣೆ ಮಾಡಲಾಗಿದ್ದು ಈ ಕುರಿತಂತೆ ದಿನಾಂಕ 31 ಮಾರ್ಚ್ ರಾಜ್ಯಪಾಲರ ಆಜ್ಞಾನುಸಾರ ಅಧೀನ ಕಾರ್ಯದರ್ಶಿ ವಿಮಲಾಕ್ಷಿ ಆದೇಶ ನೀಡಿದ್ದಾರೆ ಬಿಸಿಲು ತಾಪಮಾನದಿಂದಾಗಿ ಬೆಳಗ್ಗೆ 8:00 ಯಿಂದ ಮಧ್ಯಾಹ್ನ ಒಂದು ಗಂಟೆ 30 ನಿಮಿಷದವರೆಗೆ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವಂತೆ ಆದೇಶ ನೀಡಿದ್ದಾರೆ .
ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿರುವ ಸಾರ್ವಜನಿಕರು ತಮ್ಮ ಸರ್ಕಾರಿ ಕಚೇರಿಯ ಕೆಲಸ ಕಾರ್ಯಗಳನ್ನು ನಿಗದಿಪಡಿಸಿದ ಸಮಯದೊಳಗೆ ಮುಗಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯ ಸರ್ಕಾರಿ ಕಚೇರಿಗಳಿಗೆ ಆದೇಶ ನೀಡುವುದರ ಮೂಲಕ ಯಾವುದೇ ಅನಾನುಕೂಲತೆ ಆಗದಂತೆ ಸಾರ್ವಜನಿಕ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
