ಆನೆ ದಾಳಿಯಿಂದ ಬಾಳೆಗಿಡ ನಾಶ ರೈತ ಕಂಗಾಲು .

Mallikarjun
1 Min Read

Banana tree destroyed by elephant attack, farmer in distress.

ಆನೆ ದಾಳಿಯಿಂದ ಬಾಳೆಗಿಡ ನಾಶ ರೈತ ಕಂಗಾಲು .


ವರದಿ: ಬಂಗಾರಪ್ಪ .ಸಿ .
ಹನೂರು :ರೈತರು ತಮ್ಮ ಆರ್ಥಿಕತೆಯ ಅಭಿವೃದ್ಧಿಗಾಗಿ ಅವರ ನೆಚ್ಚಿನ ತೋಟಗಳಲ್ಲಿ ಬಾಳೆ ,ಅರಿಸಿಣ ಸೇರಿದಂತೆ ಇನ್ನಿತರ ಅನೇಕ ಬೆಳೆಗಳನ್ನು ಬೆಳೆಯುತ್ತಾರೆ ,ಆದರೆ ಕಾಡಿನಿಂದ ಬಂದು ಪ್ರಾಣಿಗಳು ರೈತರ ಬೆಳೆಗಳನ್ನು ಹಾಳು ಮಾಡಿದರೆ ರೈತನ ಪರಿಸ್ಥಿತಿ ಎನಾಗಬಹುದು ಎಂದು ವಕೀಲರಾದ ಅಶೋಕ್ ಕುಮಾರ್ ತಿಳಿಸಿದರು.
ಹನೂರು ತಾಲೂಕಿನ ಲೋಕನಹಳ್ಳಿ ಹೋಬಳಿಯ ಚಿಕ್ಕಮಾಲಾಪುರ ಗ್ರಾಮದ ಸರ್ವೆ ನಂ 117/1 ರ ನಾರಾಯಣ್ ಮೂರ್ತಿ ಹಾಗೂ 117/2 ರಲ್ಲಿನ ದಿವ್ಯಶ್ರೀ ರವರಿಗೆ ಸೇರಿದ ಜಮಿನಿನಲ್ಲಿತಡ ರಾತ್ರಿ ಸರಿಸುಮಾರು 170ರಿಂದ 200 ಬಾಳೆ ಗಿಡಗಳನ್ನು ಹಾಗೂ ಮೂವತ್ತು ಅಡಿಕೆ ಗಿಡಗಳನ್ನು ತುಳಿದು ತಂತಿ ಬೇಲಿಯನ್ನು ತುಳಿದು ಮುರಿದು ಹಾಕಲಾಗಿದೆ ,ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೆ ಸ್ಪಂದಿಸಿ ರೈತರಿಗೆ ಪರಿಹಾರವನ್ನು ನೀಡಬೇಕಾಗಿದೆ ಎಂದು ರೈತರು ತಿಳಿಸಿದರು. ‌
ಇದೇ ಸಂದರ್ಭದಲ್ಲಿ ಆನೆ ನುಗ್ಗಿ ತುಳಿದ ಜಮೀನಿಗೆ ರೈತರ ಜೋತೆಯಲ್ಲಿ ಅರಣ್ಯ ಇಲಾಕೆಯ ಅಧಿಕಾರಿಗಳು ಹಾಜರಿದ್ದರು. ‌

Total Views: 0
Share This Article