ಭತ್ತದ ನಾಡು ಶಿಕ್ಷಣದ ಜೊತೆಗೆ ಕ್ರೀಡೆಯಲ್ಲೂ ಹೆಸರು ಮಾಡುತ್ತಿದೆ: ಶ್ರೀಮತಿ ಎಂ. ಸರಸ್ವತಿ

Mallikarjun
1 Min Read

The land of rice is making a name for itself in sports as well as education: Mrs. M. Saraswati




ಭತ್ತದ ನಾಡು ಶಿಕ್ಷಣದ ಜೊತೆಗೆ ಕ್ರೀಡೆಯಲ್ಲೂ ಹೆಸರು ಮಾಡುತ್ತಿದೆ: ಶ್ರೀಮತಿ ಎಂ. ಸರಸ್ವತಿ

ಗಂಗಾವತಿ: ಇಂದು ಫ್ಲೈಯಿಂಗ್‌ ಫೆದರ್ಸ್‌ ಬ್ಯಾಡ್ಮಿಂಟನ್‌ ಅಕಾಡೆಮಿಯ 3ನೇ ವರ್ಷದ ಬೇಸಿಗೆ ಶಿಬಿರಕ್ಕೆ ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀಮತಿ ಸರಸ್ವತಿ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಗಂಗಾವತಿಯು ಶಿಕ್ಷಣದಲ್ಲಿ ಬಹಳಷ್ಟು ಹೆಸರು ಮಾಡುತ್ತಿದೆ. ಅದರ ಜೊತೆಗೆ ಹಲವಾರು ಕ್ರೀಡೆಗಳಲ್ಲೂ ರಾಜ್ಯ/ರಾಷ್ಟ್ರ ಮಟ್ಟದಲ್ಲಿ ನಮ್ಮ ತಾಲೂಕಿನ ಮಕ್ಕಳು ಆಯ್ಕೆಯಾಗಿ ಪ್ರಶಸ್ತಿ ಪಡೆಯುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಫ್ಲೈಯಿಂಗ್‌ ಫೆದರ್ಸ್‌ ಬ್ಯಾಡ್ಮಿಂಟನ್‌ ಅಕಾಡೆಮಿ ಗಂಗಾವತಿಯಲ್ಲಿ ಸುಸಜ್ಜಿತ ಅಂತರಾಷ್ಟ್ರೀಯ ಮಟ್ಟದ ಸಿಂಥೇಟಿಕ್‌ ಒಳಾಂಗಣ ಕ್ರೀಡಾಂಗಣ ನಿರ್ಮಿಸುವುದರ ಜೊತೆಗೆ ಮಕ್ಕಳಿಗೆ ಅತ್ಯುತ್ತಮ ತರಬೇತಿ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಬ್ಯಾಡ್ಮಿಂಟನ್‌ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಡಾ|| ಸತೀಶ್‌ ರಾಯಕರ್‌, ಅಧ್ಯಕ್ಷರಾದ ಡಾ|| ಪ್ರಶಾಂತ್‌ ದೇಸಾಯಿ, ಕಾರ್ಯದರ್ಶಿ ಆಜಾದ್‌ ಗನ್ನಮನಿ, ಖಜಾಂಚಿ ನಾಗೇಶ ಗುನ್ನಾಳ, ನಿರ್ದೇಶಕರಾದ ಡಾ|| ಶಿವಕುಮಾರ ಮಾಲಿಪಾಟೀಲ್‌, ರಮೇಶ ವಲ್ಕಂದಿನ್ನಿ, ಅಶೋಕ ಗನ್ನಮನಿ, ತರಬೇತಿದಾರರಾದ ಪೀರಾವಲಿ, ವ್ಯವಸ್ಥಾಪಕರಾದ ಹೇಮಂತ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಎರಡು ತಿಂಗಳು ನಡೆಯುವ ಈ ಬೇಸಿಗೆ ಶಿಬಿರದಲ್ಲಿ 50 ಕ್ಕಿಂತಲೂ ಹೆಚ್ಚಿನ ಮಕ್ಕಳು ಪಾಲ್ಗೊಳ್ಳಲಿದ್ದಾರೆ.

Total Views: 0
Share This Article