ಕೊಪ್ಪಳ ನಗರದ ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

Mallikarjun
1 Min Read

Man missing from Koppal city: Request for assistance in finding him

ಕೊಪ್ಪಳ ನಗರದ ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ


ಕೊಪ್ಪಳ ಏಪ್ರಿಲ್ 01 (ಕರ್ನಾಟಕ ವಾರ್ತೆ): ಕೊಪ್ಪಳದ ಸ್ವಾಮಿವಿವೇಕಾನಂದ ಶಾಲೆಹತ್ತಿರ ಫಿರ್ ದೋಷ್ ನಗರದ ನಿವಾಸಿ 48 ವರ್ಷದ ಸದಾನಂದ ತಂದೆ ಕಾಡಪ್ಪ ಹಳಕಟ್ಟಿ ಎಂಬ ವ್ಯಕ್ತಿ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸದಾನಂದ ತಂದೆ ಕಾಡಪ್ಪ ಹಳಕಟ್ಟಿ ಎಂಬ ವ್ಯಕ್ತಿಯು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, 2025ರ ಜುಲೈ 29 ರಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮನೆಯಿಂದ ಊಟ ಮಾಡಿ ಯಾರಿಗೂ ಹೇಳದೆ ಎಲ್ಲಿಗೂ ಹೋಗಿ ಇಲ್ಲಿಯವರೆಗೂ ಪತ್ತೆಯಾಗಿರುವುದಿಲ್ಲ ಎಂದು ಕಾಣೆಯಾದ ವ್ಯಕ್ತಿಯ ಹೆಂಡತಿ ನೀಲಾ ಅವರು ಪೊಲೀಸ್ ಠಾಣೆಗೆ ದೂರು ನೀಡಿರುವ ಪ್ರಯುಕ್ತ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 92/2025 ರಡಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿ ಚಹರೆ ವಿವರ: ಸದಾನಂದ ತಂದೆ ಕಾಡಪ್ಪ ಹಳಕಟ್ಟಿ ವಯಸ್ಸು 48 ವರ್ಷ, 5.1 ಎತ್ತರ, ಹೆಣ್ಣೆಗಂಪು ಮೈ ಬಣ್ಣ, ಸಾಧಾರಣ ಮೈಕಟ್ಟು, ಹಣೆಯ ಮೇಲೆ ಕೂದಲು ಹೋಗಿದ್ದು, ಕಪ್ಪು ಮತ್ತು ಬಿಳುಪು ಮಿಶ್ರಿತ ತಲೆ ಕೂದಳುಗಳಿದ್ದವು. ಕಾಣೆಯಾದಾಗ ಬಿಳಿ ಹಾಗೂ ನೀಲಿ ಬಣ್ಣದ ಚೌಕಡಿಯುಳ್ಳ ತುಂಬು ತೋಳಿನ ಅಂಗಿ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡಲು ಬರುತ್ತದೆ.
ಈ ವ್ಯಕ್ತಿ ಯಾರಿಗಾದರು ಕಂಡುಬಂದಲ್ಲಿ ಅಥವಾ ಇತನ ಬಗ್ಗೆ ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ.ನಂ: 08539-230100 ಮತ್ತು  230222, ಪೊಲೀಸ ಇನ್ಸಪೆಕ್ಟರ್ ನಗರ ಪೊಲೀಸ ಠಾಣೆ ಕೊಪ್ಪಳ ಮೊ.ಸಂ: 9480803745, ಕೊಪ್ಪಳ ನಗರ ಠಾಣೆ ದೂರವಾಣಿ ನಂ: 08539-220333 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

Total Views: 0
Share This Article