ಬಂಡ್ರಾಳ್ ಗ್ರಾಮದ ಶಾಲೆಯನ್ನು ವೆಂಕಟಗಿರಿ ಶಾಲೆಗೆ ವರ್ಗಾವಣೆ ಮಾಡುವ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಗ್ರಾಮಸ್ಥರು

Mallikarjun
2 Min Read

Villagers protest against government's decision to transfer Bandral village school to Venkatagiri school

ಗಂಗಾವತಿಯ ಬಂಡ್ರಾಳ್ ಗ್ರಾಮದ ಶಾಲೆಯನ್ನು ವೆಂಕಟಗಿರಿ ಶಾಲೆಗೆ ವರ್ಗಾವಣೆ ಮಾಡುವ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಗ್ರಾಮಸ್ಥರು.
ಕೆಪಿಎಸ್ ಮಾಗ್ನೆಟ್ ಹೆಸರಲ್ಲಿ ನಮ್ಮೂರಿನ ಶಾಲೆ ಮುಚ್ಚಬೇಡಿ ಎಂದು ಊರಿನ ಜನರ ಆಕ್ರೋಶ


ಗಂಗಾವತಿ ತಾಲೂಕಿನ ಬಂಡ್ರಾಳ್ ಗ್ರಾಮದ ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಬಂಡ್ರಾಳ್ ಶಾಲೆಯ ಎದುರು ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು,ಊರಿನ ಜನರು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು.
ಬಂಡ್ರಾಳ್ ಗ್ರಾಮದ ಸರಕಾರಿ ಶಾಲೆ ಉಳಿಸಿ, ಸಾರ್ವಜನಿಕ ಶಿಕ್ಷಣ ಉಳಿಸಿ ಹೋರಾಟ ಸಮಿತಿಯ ಕಾರ್ಯದರ್ಶಿ ಪರುಶುರಾಮ್.ಕೆ ಬಂಡ್ರಾಳ್ ಮಾತನಾಡಿ
ರಾಜ್ಯದ 40,000 ಶಾಲೆಗಳನ್ನು ರಾಜ್ಯ ಸರಕಾರ ಕೆಪಿಎಸ್ ಹೆಸರಲ್ಲಿ ಮುಚ್ಚಿ ಖಾಸಗೀಕರಣವನ್ನು ಮಾಡಲು ಮುಂದಾಗಿದೆ. ಅದ್ರಲ್ಲಿ ನಮ್ಮೂರಿನ ಶಾಲೆಯನ್ನು ಕೆಪಿಎಸ್ ಮಾಗ್ನೆಟ್ ಹೆಸರಲ್ಲಿ ಪಕ್ಕದ ವೆಂಕಟಗಿರಿ ಶಾಲೆಗೆ ವರ್ಗಾಹಿಸುವುದನ್ನು ನಾವು ಖಂಡಿಸುತ್ತೇವೆ ಎಂದರು.
ಯಾವುದೇ ಸಂಧರ್ಭ ಬಂದರು ನಮ್ಮೂರಿನ ಶಾಲೆಯನ್ನು ಮುಚ್ಚುವುದಕ್ಕೆ ನಾವು ಬಿಡುವುದಿಲ್ಲ, ನಮ್ಮ ಶಾಲೆಯನ್ನು ಮುಚ್ಚಿದರೆ ಸರಕಾರದ ವಿರುದ್ದ ದೊಡ್ಡ ಹೋರಾಟ ಕಟ್ಟುತೀವಿ ಎಂದರು.
ಊರಿನ ಯುವಕರಾದ ಲಕ್ಷ್ಮಣ್ ಯಾದವ್ ಅವರು ಮಾತನಾಡಿ, ಸರಕಾರ ಸ್ಥಳೀಯವಾಗಿ ಶಿಕ್ಷಣ ಸಿಗಬೇಕೆಂಬ ಶಿಕ್ಷಣದ ಹಕ್ಕನ್ನು ನಮ್ಮಿಂದ ಕಿತ್ತುಕೊಳ್ಳುತ್ತಿದೆ. ಕೆಪಿಎಸ್ ಮಾಗ್ನೆಟ್ ಶಾಲೆ ಸ್ಥಳೀಯವಾಗಿ ಬಂದಿರುವ ದಿನಗೂಲಿ ಮಾಡುವ ಜನರ ಮಕ್ಕಳ ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳುವ ಸರಕಾರದ ನಿರ್ಧಾರ ಜನವಿರೋಧಿಯಾಗಿದೆ. ನಮ್ಮೂರಿನ ಶಾಲೆಯನ್ನು ಮುಚ್ಚಿ ನಾವೆಲ್ಲ ನಮ್ಮ ಮಕ್ಕಳನ್ನು ಬೇರೆ ಕೆಪಿಎಸ್ ಶಾಲೆಗೆ ಕಳಿಸೋಕೆ ಸಾಧ್ಯವಿಲ್ಲ, ನಾವೆಲ್ಲರೂ ಒಂದಾಗಿ ನಮ್ಮೂರಿನ ಶಾಲೆಯನ್ನು ಉಳಿಸಿಕೊಳ್ಳುತ್ತೇವೆ, ಕೆಪಿಎಸ್ ಮಾಗ್ನೆಟ್ ಯೋಜನೆ ಸರಕಾರ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸಿಂಧು ಕೌದಿ ಮಾತನಾಡಿ ರಾಜ್ಯ ಸರ್ಕಾರ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ನಿಂದ 2,500 ಕೋಟಿ ಸಾಲವನ್ನು ತಂದು, ಹಾಗೇ ನಮ್ಮ ಕೆಕೆಆರ್ ಡಿಬಿ ಹಣವನ್ನು ಬಳಸಿ ಕೆಪಿಎಸ್ ಮಾಗ್ನೆಟ್ ಹೆಸರಲ್ಲಿ ರಾಜ್ಯದಲ್ಲಿ 40,000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಗಂಗಾವತಿ ಭಾಗದ 100 ಕ್ಕೂ ಹೆಚ್ಚು ಶಾಲೆಗಳು ಈ ಪಟ್ಟಿಯಲ್ಲಿವೆ. ಇದರ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಸಾರ್ವಜನಿಕ ಶಿಕ್ಷಣ ಉಳಿಸಿ ಜನ ಸಮಿತಿ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳನ್ನು ರಕ್ಷಿಸಿ, ಬಲಪಡಿಸಲು ಪ್ರಬಲ ಹೋರಾಟ ಕಟ್ಟಬೇಕು, ಏಪ್ರಿಲ್ 10 ರಂದು ನಡೆಯಲಿರುವ ರಾಜ್ಯಮಟ್ಟದ ಜನಸಮಾವೇಶಕ್ಕೆ ಮುನ್ನಡೆಯೋಣ ಎಂದರು.
ಪ್ರತಿಭಟನೆಯಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಅಧ್ಯಕ್ಷರಾದ ನಾಗರಾಜ್ ಸುಂಕಪುರ,ಉಪಾಧ್ಯಕ್ಷರಾದ ಬೆಟ್ಟಪ್ಪ ಜೀರಾಳ್,ಮದರ್ ಸಾಬ್, ಸಹ ಕಾರ್ಯದರ್ಶಿ ಹುಸೇನ್ ಪೀರ್,ಸದಸ್ಯರಾದ ಮಲ್ಲೇಶ್ ಪಾಟೀಲ್, ಭೀಮಣ್ಣ, ನೆನ್ನೆ ಸಾಬ್,ದುರೆಗಪ್ಪ ಜೆಲೆ, ರೆಹೇಮತ್ ಅಲಿ,ಸಣ್ಣ ಹೊನ್ನಪ್ಪ, ಭಕ್ಷಿ, ದುರ್ಗಪ್ಪ, ಮಂಜಪ್ಪ ಜೆಲ್ಲಿ,ಮುದಿಯಪ್ಪ ಜೆಲ್ಲಿ,ಮುಸ್ತಫಾ, ಭಾಷ ಸಾಬ್,ಕನಕ ಬಿಂಗಿ, ಶಿವರಾಜ್ ಬಿಂಗಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಇತರೆ ಗ್ರಾಮಸ್ಥರು ಭಾಗವಹಿಸಿದ್ದರು.
ಧನ್ಯವಾದಗಳು

Total Views: 1
Share This Article