ಕೋತಿಗಳ ಹಾವಳಿಯಿಂದ ಮೂರು ಜನರಿಗೆ ಕಡಿತ: ಅರಣ್ಯ ಇಲಾಖೆಯಿಂದ ಕೋತಿ ಸೆರೆ

Mallikarjun
1 Min Read

Three people injured due to monkey infestation: Forest Department captures monkey




ಕೋತಿಗಳ ಹಾವಳಿಯಿಂದ ಮೂರು ಜನರಿಗೆ ಕಡಿತ: ಅರಣ್ಯ ಇಲಾಖೆಯಿಂದ ಕೋತಿ ಸೆರೆ

ಗಂಗಾವತಿ: ನಗರದ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಮನೆ ಹತ್ತಿರ ಇರುವ ಕಾಲೋನಿಯಲ್ಲಿ ಕಳೆದ ಒಂದು ವಾರದಿಂದ ಕೋತಿಗಳ ವಿಪರೀತ ಹಾವಳಿಯಿಂದ ಇಲ್ಲಿನ ಮೂರು ಜನರಿಗೆ ಕಡಿದಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ, ಕೋತಿಗಳ ಉಪಟಳವನ್ನು ತಾಳಲಾರದೆ ಅಲ್ಲಿನ ನಿವಾಸಿಗಳಾದ ಕೆ.ಕಾಳಪ್ಪ, ಸಿಂಗನಾಳ ಪಂಪಾಪತಿ ಇವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ಶನಿವಾರ ರಾತ್ರಿಯಿಂದ ರವಿವಾರ ಬೆಳಗಿನ ಜಾವದವರೆಗೆ ಕೋತಿಗಳನ್ನು ಸೆರೆ ಹಿಡಿಯಲು ಯಶಸ್ವಿಯಾಗಿದ್ದಾರೆ. ಕೋತಿಗಳನ್ನು ಸೆರೆ ಹಿಡಿದಿದ್ದರಿಂದ ಅಲ್ಲಿನ ನಿವಾಸಿಗರು ನಿಟ್ಟು ಉಸಿರು ಬಿಟ್ಟಿದ್ದಾರೆ.


ಕೋತಿಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ನೇತೃತ್ವ ವಹಿಸಿದ್ದ ಬಸವರಾಜ ಪೂಜಾರಿ ವಲಯ ಅರಣ್ಯಾಧಿಕಾರಿಗಳು, ಜಾವೇದ್ ಭಾಷಾ, ಚಂದ್ರಶೇಖರ್ ರಾಥೋಡ್, ಗುಂಡಪ್ಪ, ಎಸ್ಎಂ ಡಿ ಸುಲೇಮಾನ್ ಉಪ ವಲಯ ಅರಣ್ಯಾಧಿಕಾರಿಗಳು ಮತ್ತು ಶಿವಾನಂದ, ಮಂಜುನಾಥ್, ಶಿವಕುಮಾರ್, ಗ್ಯಾನನಗೌಡ ಗಸ್ತು ಅರಣ್ಯ ಪಾಲಕರು, ಮೌಲಾಸಾಬ್ ಸೇರಿದಂತೆ ಎಲ್ಲರೂ ಸೇರಿಕೊಂಡು ಕೋತಿ ಹಿಡಿದಿರುತ್ತಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಮಹಾಬಲೇಶ ಸಿಂಗನಾಳ, ರಾಜಶೇಖರ ಗುಂಡೂರು, ಗೋಪಾಲ ಜಕ್ಕ, ಸಾಗರ ಮುನವಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Total Views: 0
Share This Article