ಪರೀಕ್ಷೆಯಲ್ಲಿ ಆಚಾತುರ್ಯ ಆಗಿಲ್ಲ – ಬಿಇಓ ಹಿರೇಮಠ

Mallikarjun
2 Min Read

There was no haste in the exam – BEO Hiremath




ಪರೀಕ್ಷೆಯಲ್ಲಿ ಆಚಾತುರ್ಯ ಆಗಿಲ್ಲ – ಬಿಇಓ ಹಿರೇಮಠ


ಮೂಡಲಗಿ: ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಇರುವ ಎಸ್‌ಎಸ್ ಎಲ್‌ಸಿಯ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಆಯಾ ದಿನದ ಪ್ರಶ್ನೆ ಪತ್ರಿಕೆಗಳನ್ನು ಇಲಾಖೆಯ ನಿಯಮದಂತೆ ಭದ್ರತೆಯಲ್ಲಿ ವಾಹನದಲ್ಲಿ ಮಾರ್ಗಾಧಿಕಾರಿಯು ತಲುಪಿಸಿ ಮರಳಿ ಉತ್ತರ ಪತ್ರಿಕೆಗಳನ್ನು ಅದೇ ಮಾರ್ಗದಲ್ಲಿ ಭದ್ರತೆ ಮೂಲಕ ವಾಹನ ಮೂಲಕ ಬಿಇಒ ಕಚೇರಿಗೆ ವಾಪಸ್‌ ಪಡೆಯಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹಿರೇಮಠ ತಿಳಿಸಿದ್ದಾರೆ.

ಬೈಕ್ ಮೇಲೆ ಉತ್ತರ ಪತ್ರಿಕೆಗಳನ್ನು ಸಾಗಿಸಲಾಗುತ್ತಿದೆಯೆಂಬ ಪತ್ರಿಕಾ ವರದಿಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದರು.

ಮಾ. 25ರಂದು ಜರುಗಿದ ಇಂಗ್ಲಿಷ್ ಪತ್ರಿಕೆಯ ಪರೀಕ್ಷೆ ಉತ್ತರ ಪತ್ರಿಕೆಯನ್ನು ಪಡೆಯಲು ಭದ್ರತಾ ವಾಹನವು ಖಾನಟ್ಟಿ ಪರೀಕ್ಷಾ ಕೇಂದ್ರದಿಂದ ಸ್ಥಳೀಯ ಉಮಾಬಾಯಿ ಶಾಲೆಗೆ ತೆರಲು ಹೋಗುವಾಗ ಇಕ್ಕಟ್ಟಾದ ದಾರಿಯಲ್ಲಿ ಸಂಚಾರ ದಟ್ಟಣೆಯಿಂದಾಗಿ ವಾಹನ ನಿಲ್ಲುವಂತಾಗಿದೆ. ಸಮಯ ನಿರ್ವಹಣೆಗಾಗಿ ಉಮಾಬಾಯಿ ಶಾಲೆಯಿಂದ ಬೈಕ್‌ ಮೇಲೆ ಪರೀಕ್ಷೆಗೆ ಸಂಬಂಧಿಸಿದ ಜವಾಬ್ದಾರಿ ಸಿಬ್ಬಂದಿಯವರು ಭದ್ರತಾ ವಾಹನದ ಬಳಿಗೆ ಉತ್ತರ ಪತ್ರಿಕೆಗಳ ಸೀಲ್ ಮಾಡಿದ್ದ ಬಂಡಲ್‌ಗಳನ್ನು ಸಾಗಿಸಿದ್ದು, ಇದನ್ನು ಸಾರ್ವಜನಿಕರು ದೂರಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದೆ.

ರಸ್ತೆಯಲ್ಲಿ ವಾಹನ ಜನದಟ್ಟಣೆಯಿಂದಾಗಿ ಆಗಿದ್ದ ವಿಳಂಬವನ್ನು ಸರಿದೂಗಿಸಲು 50 ಮೀ. ಅಂತರದಲ್ಲಿದ್ದ ಭದ್ರತಾ ವಾಹನದ ಬಳಿಗೆ ಬಂಡಲ್‌ಗಳನ್ನು ಬೈಕ್ ಮೇಲೆ ಕೇಂದ್ರದ ಸ್ಥಾನಿಕ ಜಾಗೃತದಳ ಅಧಿಕಾರಿ ಅವರೊಂದಿಗೆ ಜವಾಬ್ದಾರಿಯಲ್ಲಿ ಸಾಗಿಸಲಾಗಿದೆ ಎಂದು ಶಾಲೆಯವರು ತಿಳಿಸಿದ್ದಾರೆ.

ಈ ಸಂಬಂಧವಾಗಿ ಆಗಿರುವ ಘಟನೆಯನ್ನು ತಿಳಿದು ಸಂಬಂಧಿಸಿದ ಪರೀಕ್ಷಾ ಸಿಬ್ಬಂದಿಯವರಿಗೆ ನೋಟಿಸ್‌ ಸಹ ನೀಡಲಾಗಿದೆ ಮತ್ತು ಅಲ್ಲಿ ಯಾವುದೇ ರೀತಿಯ ಪರೀಕ್ಷೆಯ ಅಚಾತುರ್ಯ ಸಂಭವಿಸಿಲ್ಲ ಎಂದು ಮೂಡಲಗಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ಹಿರೇಮಠ ಅವರು ಪ್ರತಿಕ್ರಿಯಿದ್ದಾರೆ.

ದಿ. 29-03-2026ರಂದು ಮಧ್ಯಾಹ್ನ 2 ಗಂಟೆಗೆ 22 ಪರೀಕ್ಷೆ ಕೇಂದ್ರಗಳ ಮುಖ್ಯ ಅಧೀಕ್ಷಕರು ಉಪಮುಖ್ಯ ಅಧೀಕ್ಷಕರು ಹಾಗೂ ಪ್ರಶ್ನೆ ಪತ್ರಿಕೆ ಪಾಲಕರು ಮಾರ್ಗಾಧಿಕಾರಿಗಳ ಸಭೆ ನಡೆಸಿ ಪರೀಕ್ಷೆಯನ್ನು ಮಂಡಳಿ ನಿಯಮವಂತೆ ಕಟ್ಟುನಿಟ್ಟಾಗಿ ಪಾರದರ್ಶಕವಾಗಿ ನಕಲು ರಹಿತವಾಗಿ ನಡೆಸಲು ಎಚ್ಚರಿಕೆ ನೀಡಲಾಯಿತು. ಪರೀಕ್ಷಾ ದಿನದಂದು ಮಾರ್ಗಾಧಿಕಾರಿಗಳಿಂದ ಪ್ರಶ್ನೆ ಪತ್ರಿಕೆಗಳನ್ನು ಪಡೆದು ಗೌಪ್ಯತೆಯನ್ನು ಕಾಪಾಡಿಕೊಂಡು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ ಉತ್ತರ ಪತ್ರಿಕೆಗಳನ್ನು ಮಾರ್ಗ ಅಧಿಕಾರಿಗಳ ಮೂಲಕ ಎಸ್ಕಾರ್ಟ್ ವ್ಯವಸ್ಥೆಯೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ತಲುಪಿಸಲು ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿರುತ್ತಾರೆ.

Total Views: 0
Share This Article