ಯುಗಾದಿಯು ಪೃಥ್ವಿಯ ಜನ್ಮದಿನ: ಡಾ. ಶರಣಬಸಪ್ಪ ಕೋಲ್ಕಾರ.

Mallikarjun
1 Min Read

Ugadi is the birthday of the Earth: Dr. Sharanabasappa Kolkara.

ಯುಗಾದಿಯು ಪೃಥ್ವಿಯ ಜನ್ಮದಿನ: ಡಾ. ಶರಣಬಸಪ್ಪ ಕೋಲ್ಕಾರ.

ಕಲ್ಮಠ ಮಹಿಳಾ ಕಾಲೇಜಿನಲ್ಲಿ ಯುಗಾದಿ ವಸಂತೋತ್ಸವ ಸಂಭ್ರಮ

ಗಂಗಾವತಿ :ಯುಗಾದಿಯನ್ನು ಭಾರತದಲ್ಲಿ ಹೊಸವರ್ಷವೆಂದು ಆಚರಿಸಲಾಗುತ್ತದೆ. ಅದು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ. ಭಾರತೀಯ ಪುರಾತನ ವಿಜ್ಞಾನಿಗಳಾದ ಋಷಿ ಮುನಿಗಳು ರಚಿಸಿರುವ ಬ್ರಹ್ಮಾಂಡ ಪುರಾಣದಲ್ಲಿ ಪೃಥ್ವಿಯ ಉಗಮದ ಬಗ್ಗೆ ಹೇಳಿದ್ದಾರೆ. ಅವರ ಪ್ರಕಾರ ಯುಗಾದಿ ದಿನವು ಭೂಮಿಯು ಉಗಮಗೊಂಡ ದಿನವಾಗಿದೆ.  ಅಂದರೆ ಯುಗಾದಿ ಭೂಮಾತೆಯ ಜನ್ಮದಿನವಾಗಿದೆ ಎಂದು ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ ಅಭಿಪ್ರಾಯ ಪಟ್ಟರು.

ಅವರು ಇಂದು ಗಂಗಾವತಿಯ ಕಲ್ಮಠ ಶ್ರೀ ಚನ್ನಬಸವಸ್ವಾಮಿ ಮಹಿಳಾ ಕಾಲೇಜಿನಲ್ಲಿ ವಿಶ್ವಚೇತನವಿದ್ಯಾರ್ಥಿನಿ ಒಕ್ಕೂಟ ಏರ್ಪಡಿಸಿದ್ದ ಯುಗಾದಿ ವಸಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಂದುವರೆದು. ಯುಗಾದಿ ಪ್ರಕೃತಿಯ ಪರ್ವವಾಗಿರುವುದರಿಂದ ಅದು ಎಲ್ಲ ಧರ್ಮಿಯರ ಹಬ್ಬ ,ಹೊಸ ಸಂವತ್ಸರ ದಂದು ಮುಂದಿನ ವರ್ಷದುದ್ದಕ್ಕೂ ಬರುವ ನೋವು ನಲಿವುಗಳನ್ನು ಸಮಭಾವದಿಂದ ಸ್ವೀಕರಿಸಬೇಕೆಂಬ ಅರ್ಥದಲ್ಲಿ ಬೇವು ಬೆಲ್ಲ ಸೇವನೆಯನ್ನು ರೂಢಿಗೊಳಿಸಲಾಗಿದೆ ಎಂದರು.

ಬೆಳಿಗ್ಗೆ ವಿದ್ಯಾರ್ಥಿನಿಯರು ಮತ್ತು ಅಧ್ಯಾಪಕರು ಸಾಂಪ್ರದಾಯಕ ಉಡುಗೆ ಧರಿಸಿ ಪ್ರಕೃತಿ ಪರ್ವವನ್ನು ಆಚರಿಸಿದರು.‌ ರಂಗೋಲಿಯಿಂದ ಅಲಂಕೃತವಾದ ಬಣ್ಣದ ಮಡಕೆಗಳ ಮೇಲೆ ಜ್ಙಾನಕಳಸವನ್ನು ಮೆರವಣಿಗೆಯ ಮೂಲಕ ತಂದು ಪ್ರತಿಷ್ಟಾಪಿಸಲಾಯಿತು.

ಕಬ್ಬು, ಬಾಳೆ, ಮಾವಿನ ತೋರಣ, ಭತ್ತದ ತೆನೆ,ಬೇವು, ಬೆಲ್ಲ, ಅಕ್ಕಿಯನ್ನು ಮರಗಳಲ್ಲಿ ತಂದು ಪೃಕೃತಿಮಾತೆಗೆ ಸಾಂಕೇತಿಕವಾಗಿ ಕೃತಜ್ಞತೆ ಸಲ್ಲಿಸಲಾಯಿತು. ವಿದ್ಯಾರ್ಥಿನಿಯರೇ ಬೇವು ಪಾನಿಯವನ್ನು ತಯಾರಿಸಿ ವಿತರಿಸಿದರು. ನಂತರ ವೇದಿಕೆ ಕಾರ್ಯಕ್ರಮ ಜರುಗಿ ಯುಗಾದಿ ಗೀತೆಗಳನ್ನು ವಿದ್ಯಾರ್ಥಿ ನಿಯರು ಪ್ರಸ್ತುತಪಡಿಸಿದರು.

ಅಧ್ಯಾಪಕರು ಶುಭಕೋರಿದರು. ವೇದಿಕೆಯಲ್ಲಿ ಉಪಪ್ರಾಚಾರ್ಯ ಡಾ. ಕೆ.ಎಂ.ಬಸವರಾಜ್, ವಿದ್ಯಾರ್ಥಿ ಒಕ್ಕೂಟದ ಕಾರ್ಯಾದ್ಯಕ್ಷರಾದ ಡಾ. ಜರೀನಾ, ಹಿರಿಯ ಅಧ್ಯಾಪಕರಾದ ಪ್ರೊ. ಜಿ. ಬಸವರಾಜ್, ಡಾ. ಶಾರದಾ ಪಾಟೀಲ್, ಡಾ. ವಾಣಿಶ್ರೀ ಪಾಟೀಲ್, ಪ್ರೊ. ರುದ್ರಗೌಡ ಮುಂತಾದ ಭೋದಕ ಹಾಗೂಬೋದಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಗಳಾದ ಶ್ರೀ ದೇವಿ,ಶಫೀನಾ ಅಂಜುಮ್ ಉಪಸ್ಥಿತರಿದ್ದರು.

Share This Article
Leave a Comment