Senior citizens who went on Haj pilgrimage were felicitated in Gangavathi


ಗಂಗಾವತಿಯಲ್ಲಿ ಹಜ್ ಯಾತ್ರೆಗೆ ತೆರಳಿದ ಹಿರಿಯರಿಗೆ ಸನ್ಮಾನ.
ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಮೆಹಬೂಬ್ ನಗರದ ನಿವಾಸಿಗಳಾದ ಅಬ್ದುಲ್ ಖಾದರ್, ಮತ್ತು ಅವರ ಧರ್ಮಪತ್ನಿ ಮುಮ್ತಾಜ್ ಬೇಗಂ, ಅವರು ಮುಸ್ಲಿಮರ ಪವಿತ್ರ ಸ್ಥಳವಾದ ಹಜ್ ಯಾತ್ರೆಯನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ, ಕಡಪ ಸಾಹೇಬರ ಭಕ್ತಾದಿಗಳಾದ ಸೈಯದ್ ಭಾಷಾ ಮತ್ತು ಅಭಿಮಾನಿ ಬಳಗದ ಯುವಕರು ಹಜ್ ಯಾತ್ರೆ ಕೈಗೊಂಡಿರುವ ಹಿರಿಯರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸೈಯದ್ ಭಾಷಾ ಅವರು ಹಿರಿಯರಿಗೆ ಶಾಲು ಹೊದಿಸಿ, ಹಾರ ಹಾಕಿ ಆತ್ಮೀಯವಾಗಿ ಶುಭಾಶಯಗಳನ್ನು ತಿಳಿಸಿದರು.
ಹಜ್ ಯಾತ್ರೆ ಯಶಸ್ವಿಯಾಗಿ ನೆರವೇರಲಿ ಹಾಗೂ ಅವರು ಆರೋಗ್ಯದಿಂದ ಮರಳಿ ಬರಲಿ ಎಂದು ಎಲ್ಲರೂ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಯುವಕರು, ಹಿರಿಯರ ಧಾರ್ಮಿಕ ನಿಷ್ಠೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಕೊಂಡಾಡಿದರು.
ಈ ರೀತಿಯ ಸನ್ಮಾನ ಕಾರ್ಯಕ್ರಮಗಳು ಸಮಾಜದಲ್ಲಿ ಸೌಹಾರ್ದತೆ ಮತ್ತು ಪರಸ್ಪರ ಗೌರವವನ್ನು ಹೆಚ್ಚಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕಡಪ ಸಾಹೇಬರ ಭಕ್ತಾದಿಗಳಾದ ಸಯ್ಯದ್ ಭಾಷಾ, ಖಾದರ್ ಭಾಷಾ, ರಮೇಶ್, ಅಯ್ಯೂಬ್, ನಜೀರ್, ಸದ್ದಾಮ್ ಹುಸೇನ್,ಅಜರುದ್ದೀನ್, ಭಾಷಾ,ವಾಹಿದ್, ಸೇರಿದಂತೆ ಹಲವರು ಸ್ಥಳೀಯರು ಉಪಸ್ಥಿತರಿದ್ದು, ಹಜ್ ಯಾತ್ರೆಗೆ ತೆರಳುವರಿಗೆ ಶುಭ ಹಾರೈಸಿದರು.
