ಕುಡಿಯುವ ನೀರಿನ ಕಾಮಗಾರಿ ಸರಿಪಡಿಸಲು ಒತ್ತಾಯ : ಎಸ್.ಕೆ.ದಾನಕೈ

Mallikarjun
1 Min Read

Demand to fix drinking water works: S.K. Danakai

ಕುಡಿಯುವ ನೀರಿನ ಕಾಮಗಾರಿ ಸರಿಪಡಿಸಲು ಒತ್ತಾಯ : ಎಸ್.ಕೆ.ದಾನಕೈ

ಯಲಬುರ್ಗಾ : ಕುಡಿಯುವ ನೀರಿಗಾಗಿ ಅಮೃತ ಯೋಜನೆಯಿಂದ 7 ಮತ್ತು 8 ವಾರ್ಡಗಳು ಸೇರಿದಂತೆ ಇತರ ವಾರ್ಡುಗಳಲ್ಲಿ ಕುಡಿಯುವ ನೀರಿಗಾಗಿ ಕಾಮಗಾರಿ ಪ್ರಾರಂವಾಗಿದೆ , ಆದರೆ ಪೈಪುಗಳ ಜೋಡನೆಗಾಗಿ ಅಗೆದು ತಗೆದಿರುವ ರಸ್ತೆ ಈಗ ತಗ್ಗು ಗುಂಡಿಗಳಾಗಿ ಪರಿವರ್ತನೆಯಾಗಿವೆ ಅಲ್ಲದೆ ಸರಿಯಾಗಿ ರಸ್ತೆ ಮೇಲೆ ಹೊಂದಿಸಿರುವ ಪೆವರ್ಸಗಳನ್ನು ಕಿತ್ತುಹಾಕಿ ಪೈಪುಗಳನ್ನು ಅಳವಡಿಸಲಾಗಿದೆ ಇದರಿಂದ ಸಮತಟ್ಟವಾದ ರಸ್ತೆಗಳು ಕಿತ್ತು ಹೋಗಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಯಲಬುರ್ಗಾ ತಾಲೂಕು ಅದ್ಯಕ್ಷ ಶರಣಬಸಪ್ಪ ದಾನಕೈ ಅವರು ಸರಿಪಡಿಸಲು ಅಗ್ರಹಿಸಿದ್ದಾರೆ, ಇದರಿಂದ ವಯೋವೃದ್ದರು, ಚಿಕ್ಕಮಕ್ಕಳು,ಹಾಗು ರೈತಾಪಿ ಜನ ಜಾನುವಾರುಗಳಿಗೆ ತೊಂದರೆಯಾಗುತ್ತದೆ ಮತ್ತು ರಾತ್ರಿ ಸಮಯದಲ್ಲಿ ಕರೆಂಟ ಹೋದಾಗ ಬಿದ್ದು ಎದ್ದಿರುವ ಪ್ರಸಂಗಗಳು ಜರುಗಿವೆ, ಸಂಬಂಧಿಸಿದ ದವರು ಸರಿಪಡಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಯಲಬುರ್ಗಾ ತಾಲೂಕು ಅದ್ಯಕ್ಷ ಶರಣಬಸಪ್ಪ ದಾನಕೈ ಅವರು ಒತ್ತಾಯಿಸಿದ್ದಾರೆ.

Share This Article
Leave a Comment