ಅಧಿಕಾರಿಗಳು ಭೇಟಿ : ದೊರೆಯದ ಪೌಷ್ಠಿಕ ಆಹಾರ ಪಾಕೇಟ್ ಗಳು

Officials visit: Missing nutritious food packets




ಅಧಿಕಾರಿಗಳು ಭೇಟಿ : ದೊರೆಯದ ಪೌಷ್ಠಿಕ ಆಹಾರ ಪಾಕೇಟ್ ಗಳು


ಗಂಗಾವತಿ:ನಗರದ ಕಸ ಗುಂಡಿಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ನೀಡುವ ಪೌಷ್ಠಿಕ ಆಹಾರ ಪಾಕೇಟ್ ಗಳನ್ನು ಹಾಕಲಾಗಿದೆ ಪೋಟೊ ವೈರಲ್ ಆಗಿದ್ದು, ನಗರದ ನಾನಾ ಕಡೆಗಳಲ್ಲಿ ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದ್ದು, ಎಲ್ಲಿಯೂ ಕೂಡ ಪೌಷ್ಠಿಕ ಆಹಾರ ಪಾಕೇಟ್ ಗಳು ಕಂಡು ಬಂದಿಲ್ಲ ಎಂದು ಸಿಡಿಪಿಓ ಜಯಶ್ರೀ ತಿಳಿಸಿದ್ದಾರೆ.
ನಂತರ ಮಾತನಾಡಿ, ನಗರದ ಕಸದ ಗುಂಡಿಯಲ್ಲಿ ಪೌಷ್ಠಿಕ ಆಹಾರ ಪಾಕೇಟ್ ಗಳನ್ನು ಬಿಸಾಡಲಾಗಿದೆ ಎನ್ನುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,ಪೋಟೋದಲ್ಲಿ ಇರುವ ಸ್ಥಳವನ್ನು ಆಧರಿಸಿ, ಅಧಿಕಾರಿಗಳ ಜೊತೆಗೆ ಭೇಟಿಯನ್ನು ನೀಡಲಾಗಿದೆ. ಅಷ್ಟೆ ಅಲ್ಲದೆ ನಗರದ ನಾನಾ ಕಡೆಗಳಲ್ಲಿ ಇರುವ ಕಸದ ಗುಂಡಿಗಳಿಗೂ ಸಹ ಭೇಟಿಯನ್ನು ನೀಡಿ, ಪರಿಶೀಲನೆ ನಡೆಸಲಾಗಿದ್ದು, ಎಲ್ಲಿ ಕೂಡ ಪೌಷ್ಠಿಕ ಆಹಾರದ ಪಾಕೇಟ್ ಗಳು ಕಂಡು ಬಂದಿರುವುದಿಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *