ಆನೆಗುಂದಿ ಉತ್ಸವಕ್ಕಾಗಿ ಭೂಮಿ ಖರೀದಿಸಿ ಸ್ವಾದಿನ ಪಡಿಸಿಕೊಳ್ಳಲು ಮುಖ್ಯಮಂತ್ರಿಗಳಿಗೆ ಮನವಿ.

Appeal to the Chief Minister to purchase and acquire land for the Anegundi festival.




ಆನೆಗುಂದಿ ಉತ್ಸವಕ್ಕಾಗಿ ಭೂಮಿ ಖರೀದಿಸಿ ಸ್ವಾದಿನ ಪಡಿಸಿಕೊಳ್ಳಲು ಮುಖ್ಯಮಂತ್ರಿಗಳಿಗೆ ಮನವಿ.

ಗಂಗಾವತಿ :-25-ಆನೆಗುಂದಿ ಉತ್ಸವಕ್ಕಾಗಿ ಭೂಮಿ ಖರೀದಿಸಿ ಸರ್ಕಾರ ಸ್ವಾದಿನಪಡಿಸಿಕೊಳ್ಳಬೇಕೆಂದು ಕೊಪ್ಪಳ ಜಿಲ್ಲಾ ಸರ್ವಾ0ಗೀಣ ಅಭಿವೃದ್ಧಿ ಹೋರಾಟ ಸಮಿತಿಯು ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಮನವಿ ಮಾಡಿದೆ. ನಗರದಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಶಿರಸ್ತೇದಾರ್ ರವಿಕುಮಾರ್ ನಾಯ್ಕವಾಡಿಗೆ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನವಿ ಸಲ್ಲಿಸಿ ಮಾತನಾಡಿ,ಆನೆಗುಂದಿಯು ವಿಜಯನಗರಸಾಮ್ರಾಜ್ಯ ದ ಮೂಲ ರಾಜಧಾನಿಯಾಗಿತ್ತು. ಇಲ್ಲಿ ಅನೇಕ ಐತಿಹಾಸಿಕ ಸ್ಮಾರಕಗಳು ಇವೆ. ವಿಶ್ವ ಪರಂಪರೆ ಪಟ್ಟಿಯಲ್ಲಿಯೂ ಸೇರಿದೆ. ಆನೆಗುಂದಿ ಉತ್ಸವ ಎರಡು ವರ್ಷಗಳಿಂದ ನಡೆದಿಲ್ಲ. ಅಧಿವೇಶನ ಮುಗಿದ ತಕ್ಷಣವೇ ಈ ಬಾರಿ ಕಡ್ಡಾಯವಾಗಿ ಉತ್ಸವ ಆಚರಿಸಲೇಬೇಕು ಇದು ನಮ್ಮ ಆಗ್ರಹ ಕೂಡ ಆಗಿರುತ್ತದೆ. ಉತ್ಸವ ಆಚರಣೆಯನ್ನು ಮಾಡುವ ವೇದಿಕೆಯ ಭೂಮಿಯು ಖಾಸಗಿಯವರದ್ದಾಗಿರುತ್ತದೆ. ಅಂಜನಾದ್ರಿ ಸ್ಥಳ ಸಮೀಪದಲ್ಲಿರುವದರಿಂದ ಅಲ್ಲಿನ ಭೂಮಿಗೆ ಬೇಡಿಕೆ ಹೆಚ್ಚಾಗುತ್ತಿರುವದರಿಂದ ಅವರು ತಮ್ಮ ಭೂಮಿಯನ್ನು ಬೇರೆಯವರಿಗೆ ಮಾರಿದರೆ ಅಥವಾ ಕಟ್ಟಡಗಳನ್ನು ನಿರ್ಮಿಸಿದರೆ ಮುಂದಿನ ದಿನಗಳಲ್ಲಿ ಉತ್ಸವ ಮಾಡಲು ಸ್ಥಳದ ಅಭಾವ ಉಂಟಾಗುತ್ತದೆ.ಉತ್ಸವ ಆಚರಿಸಲು ದೊಡ್ಡ ಸಮಸ್ಯೆಯಾಗುತ್ತದೆ. ಸಮಸ್ಯೆ ಆಗುವ ಮೊದಲೇ ಸರಕಾರ ಎಚ್ಚತ್ತುಕೊಂಡು ವಿಳಂಬ ಮಾಡದೇ ಅವರಿಂದ ಭೂಮಿ ಖರೀದಿಸಿ ಸ್ವಾದಿನಪಡಿಸಿಕೊಳ್ಳಬೇಕೆಂದು ಒತ್ತಾಯಿಸಿದರು ಈ ಸಂದರ್ಭದಲ್ಲಿ ಪದಾಧಿಕಾರಿ ರಾಮಣ್ಣ ರುದ್ರಾಕ್ಷಿ ಇದ್ದರು.

Leave a Reply

Your email address will not be published. Required fields are marked *