
ಮಡಿವಾಳ ಜನಾಂಗವನ್ನು ಮೀಸಲಾತಿಗೆ ಸೇರಿಸಲು ರಾಜ್ಯ ಸರ್ಕಾರ ಗಮನಹರಿಸಬೇಕು . ಜಿಲ್ಲಾ ಉಪಾಧ್ಯಕ್ಷರಾದ ವಿಜಯಕುಮಾರ್

The state government should focus on including the Madiwala community in the reservation. District Vice President Vijayakumar
ವರದಿ:ಬಂಗಾರಪ್ಪ .ಸಿ.
ಹನೂರು :ರಾಜ್ಯಾದ್ಯಂತ ನಮ್ಮ ಸಮುದಾಯವು ಹಲವು ಭಾಗದಲ್ಲಿ ವಾಸಿಸುತ್ತಿದ್ದು ಸರ್ಕಾರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ, ನಮ್ಮವರು ಸರ್ಕಾರದಿಂದ ಸವಲತ್ತುಗಳನ್ನು ಪಡೆಯಲು ಅತ್ಯಂತ ಕಷ್ಟ ಪಡುವಂತ ಸ್ಥಿತಿಯಲ್ಲಿದೆ ಇದರಿಂದ ನಮ್ಮ ಮಕ್ಕಳ ವಿದ್ಯಾಭ್ಯಾಸ ಅಥವಾ ಸರ್ಕಾರಿ ನೌಕರಿಗೆ ಬಹಳ ಅಡಚಣೆಯನ್ನು ಅನುಭವಿಸುವಂತಾಗಿದೆ ಎಂದು ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷರಾದ ವಿಜಯ್ ಕುಮಾರ್ ತಿಳಿಸಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಪತ್ರಿಕಾಮಾದ್ಯಮದವರ ಜೊತೆಯಲ್ಲಿ ಮಾತನಾಡಿದ ಅವರು ನಮ್ಮ ದೇಶಕ್ಕೆ ಅಂಬೇಡ್ಕರ್ ರವರು ನೀಡಿದಂತ ಕೊಡುಗೆ ಬಹಳಷ್ಟು ಅದರಲ್ಲಿ ಮಡಿವಾಳ ಸಮುದಾಯದ ಹಿತಶಕ್ತಿಗೆ ಅನುಗುಣವಾಗಿ ಸರ್ಕಾರಗಳು ಅಯಾ ಕಾಲಕ್ಕೆ ತಕ್ಕಂತೆ ವಿಮರ್ಶೆ ಮಾಡಿ ನೈಜವಾಗಿ ಯಾವ ಜನಾಂಗವು ಹಿದುಳಿದಿದೆಯೊ ಅದನ್ನು ಗುರುತಿಸಿ ಮೀಸಲಾತಿ ನೀಡಬೇಕು , ಅದರ ಮುಂದುವರೆದ ಭಾಗವಾಗಿ ನಮಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ರವರು ಕಟ್ಟಕಡೆಯ ಸಮಾಜವಾದ ಮಡಿವಾಳ ಮಾಚಿದೇವರ ಕುಲಸ್ಥರಾದ ನಮ್ಮ ಜನಾಂಗದ ಮುಂದಿನ ಪೀಳಿಗೆಗಾಗಿ ಮೀಸಲಾತಿ ನೀಡಬೇಕಾಗಿದೆ ಎಂದು ತಿಳಿಸಿದರು .