
Dear sister, writer Champa Shivanna is no more

ಆತ್ಮೀಯ ಸಹೋದರಿ, ಸಾಹಿತಿ ಚಂಪಾ ಶಿವಣ್ಣ ಇನ್ನಿಲ್ಲ

ಮೈಸೂರಿನ ಹಿರಿಯ ಲೇಖಕಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಚಂಪಾ ಶಿವಣ್ಣ (71) ಇಂದು ಬೆಳಿಗ್ಗೆ ಅನಾರೋಗ್ಯದ ಕಾರಣದಿಂದಾಗಿ ನಿಧನ ಹೊಂದಿದ್ದಾರೆ.ಇವರು ಮೈಸೂರಿನ ಹಿರಿಯ ಪತ್ರಕರ್ತ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿ. ಎಂ. ಆರ್. ಶಿವಣ್ಣ ಅವರ ಪತ್ನಿ. ಸುಮಾರು 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದ ಇವರು ತಮ್ಮ ಸಾಹಿತ್ಯ ಸೇವೆಯ ಮೂಲಕ ಹಿರಿಯ ಸಾಹಿತಿಗಳಾದ ಡಾ. ದೊಡ್ಡ ರಂಗೇಗೌಡ, ಡಾ. ಸಿ ಪಿ ಕೆ, ಡಾ. ಎಚ್ಚೆಸ್ಕೆ, ಡಾ. ಶಿವರುದ್ರಪ್ಪ ಜಿ. ಎಸ್.ಡಾ. ಮಹೇಶ್ ಜೋಶಿ ಮೊದಲಾದವರಿಂದ ಅಪಾರ ಮೆಚ್ಚುಗೆ ಗಳಿಸಿದ್ದರು.ಪುತ್ರಿ ಶ್ರೀಮತಿ ಶಿವರಂಜಿನಿ, ಅಳಿಯ ಪ್ರಹ್ಲಾದರಾವ್, ಮೊಮ್ಮಗ ಪ್ರತಮ್ ಹಾಗೂ ಅಪಾರ ಸಂಖ್ಯೆಯ ಸಾಹಿತ್ಯಭಿಮಾನಿ ಗಳನ್ನು ಇವರು ಬಿಟ್ಟು ಅಗಲಿದ್ದಾರೆ.
ಶ್ರೀಮತಿ ಚಂಪಾ ಶಿವಣ್ಣ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದು ಹಿರಿಯ ಸಾಹಿತಿಗಳಾದ ಶ್ರೀಮತಿ ಹೇಮಗಂಗಾ, ಕನ್ನಡ ಸಾಹಿತ್ಯಪರಿಷತ್ತಿನ ದತ್ತಿ ಪ್ರಶಸ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಭೇರ್ಯ ರಾಮಕುಮಾರ್ ಕಂಬನಿ ಸಲ್ಲಿಸಿದ್ದಾರೆ.
