ಕಿಷ್ಕಿಂದೆಯಾ ಮೂಲ ಅಂಜನಾದ್ರಿ ಗುರುಗಳಿಗೆ ಮುಜರಾಯಿ ಇಲಾಖೆಯಿಂದ ಅಪಮಾನ…. ಭಕ್ತರ ಆಕ್ರೋಶ..

Kishkindeya's original Anjanadri Guru was insulted by the Muzrai department... Devotees outraged..




ಕಿಷ್ಕಿಂದೆಯಾ ಮೂಲ ಅಂಜನಾದ್ರಿ ಗುರುಗಳಿಗೆ ಮುಜರಾಯಿ ಇಲಾಖೆಯಿಂದ ಅಪಮಾನ…. ಭಕ್ತರ ಆಕ್ರೋಶ..

ಜಾಹೀರಾತು


ಗಂಗಾವತಿ. ತಾಲೂಕಿನ ಕಿಸ್ಕಿಂದ ಅಂಜನಾದ್ರಿ ಪರ್ವತದ ಮೂಲ ಗುರುಗಳಾದ ಲಕ್ಕಡಿ ದಾಸ್ ಬಾಬು ಅವರ ಭಂಡಾರ ಮತ್ತು ಪುಣ್ಯ ತಿಥಿ ಕಾರ್ಯಕ್ರಮ ಪ್ರತಿ ವರ್ಷ ಯುಗಾದಿ ಹಬ್ಬದ ದಿನದಂದು ಹೈದರಾಬಾದ್ ಮತ್ತು ಕರ್ನಾಟಕ ರಾಜ್ಯದ ಲಕ್ಕಡಿದಾಸ್ ಬಾಬಾ ಅವರ ಅಪಾರ ಭಕ್ತ ಮಂಡಳಿ ಸೇರಿಕೊಂಡು ಲಕ್ಕಡಿದಾಸ್ ಬಾಬಾರ ವಿಗ್ರಹಕ್ಕೆ ಜಲಾಭಿಷೇಕ ಪಂಚಾಮೃತ ಅಭಿಷೇಕ ಗಂದಾಭಿಷೇಕ ಮೂಲಕವಾಗಿ ವಿಶೇಷ ಪೂಜೆ ಕಾರ್ಯಕ್ರಮಗಳ ಜರುಗುಸ್ತಿದ್ದರು .. ಪೂಜಾ ಕಾರ್ಯಕ್ರಮದ ನಂತರ ಸಾವಿರಾರು ಭಕ್ತಾದಿಗಳಿಗೆ ಪ್ರತಿ ವರ್ಷ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿದರು…
***ಆದರೆ ಈ ಬಾರಿ ಪೂಜಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವಂತಹ ಕಾರ್ಯಕ್ಕೆ ಮುಜರಾಯಿ ಇಲಾಖೆಯ ಆಡಳಿತ ಅಧಿಕಾರಿಗಳು ಮಾಡುವುದರ ಮೂಲಕ ಮೂಲ ವಿದ್ವಾನ್ ಪಂಡಿತರಿಗೆ ಅಪಮಾನವಸಲಿದ್ದಾರೆ ಎಂದು ಅಪಾರ ಭಕ್ತಾದಿಗಳು ಆರೋಪ ವ್ಯಕ್ತಪಡಿಸಿದರು..ಎರಡು ದಶಕಗಳಿಂದ ಲಕ್ಕಡಿ ದಾಸ್ ಬಾಬಾ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ವಿದ್ವಾನ್ ವಿದ್ಯಾದಾಸ್ ಬಾಬಾ ಅವರು ಮತ್ತು ನಮ್ಮೆಲ್ಲ ಭಕ್ತ ಮಂಡಳಿ ವತಿಯಿಂದ ಶ್ರದ್ಧೆ ಭಕ್ತಿಯಿಂದ ಆಚರಿಸುತ್ತ ಬರಲಾಗಿದೆ. ಆದರೆ ಈಗ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತ ಅಧಿಕಾರಿಗಳು ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಭಕ್ತರಿಗೆ ಮೂಲಭೂತ ಸೌಲಭ್ಯ ಕಲ್ಪಿಸದೆ ಸನಾತನ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದೆ. ವಿದ್ವಾನ್ ವಿದ್ಯಾದಾಸ ಬಾಬಾಜಿಯವರ ಅಭಿವೃದ್ಧಿಪಡಿಸುವಲ್ಲಿ ಮುಂದಾದಂತಹ ಗುರುಗಳಿಗೆ ಅಪಮಾನ ಮಾಡಿರುವುದು ಖಂಡನೆ ಎಂದು ವ್ಯಕ್ತಪಡಿಸಿದ ಭಕ್ತಾದಿಗಳು ಇದೇ ಪದ್ಧತಿಯನ್ನು ಮುಂದುವರಿಸಿಕೊಂಡು ಹೋದಲ್ಲಿ ಬೃಹತ್ ಹೋರಾಟ ಅನಿರ್ದಿಷ್ಟ ಧರಣಿ. ಸೇರಿದಂತೆ ಮತ್ತೆ ತರ ಹೋರಾಟದ ಪ್ರಕ್ರಿಯೆಗಳನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು ಈ ಸಂದರ್ಭದಲ್ಲಿ ..
ಜಗದೀಶ್ ಬಂಟು ಶಿವರಾಜ್ ದೇವಡ ಶರಣಪ್ಪ ದೊಡ್ಮನಿ ಹಂಪೆಶ್ ಅರಿಗೋಲು ಸೇರಿದಂತೆ ಮತ್ತಿತರ ಮುಖಂಡರಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು

Leave a Reply

Your email address will not be published. Required fields are marked *