ಶ್ರೀ ರೇಣುಕಾಚಾರ್ಯರ ವೃತ್ತ ಉದ್ಘಾಟನೆ:ಮಾನವ ಧರ್ಮಕ್ಕೆ ಜಯವಾಗಲಿ ಎಂದ ರೇಣುಕಾಚಾರ್ಯರು:ಮಾಜಿ ಶಾಸಕ ಪರಣ್ಣ ಮುನವಳ್ಳಿ
Inauguration of Sri Renukacharya circle: Renukacharya said victory to humanity: Former MLA Paranna Munavalli

ಶ್ರೀ ರೇಣುಕಾಚಾರ್ಯರ ವೃತ್ತ ಉದ್ಘಾಟನೆ:
ಮಾನವ ಧರ್ಮಕ್ಕೆ ಜಯವಾಗಲಿ ಎಂದ ರೇಣುಕಾಚಾರ್ಯರು:
ಮಾಜಿ ಶಾಸಕ ಪರಣ್ಣ ಮುನವಳ್ಳಿ

ಗಂಗಾವತಿ:19 ನಗರದ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಕೊಪ್ಪಳ ಮತ್ತು ರಾಯಚೂರು ಹೆದ್ದಾರಿ ಎಪಿಎಂಸಿ ಪ್ರಥಮ ಗೇಟ್ ಮುಂಭಾಗದಲ್ಲಿ ಶ್ರೀ ರೇಣುಕಾಚಾರ್ಯರ ವೃತ್ತ ಉದ್ಘಾಟನೆಯನ್ನು ನೆರವೇರಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೃಹನ್ ಮಠ ಹೆಬ್ಬಾಳ ಶ್ರೀ ನಾಗಭೂಷಣ ಶಿವಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿಕೊಂಡಿದ್ದರು.
ನಂತರ ಮಾತನಾಡಿದ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಅವರು ರೇಣುಕಾಚಾರ್ಯರು ಕೇವಲ ಒಂದು ಜಾತಿ ಒಂದು ಸಮಾಜಕ್ಕೆ ಮೀಸಲಾಗಿಲ್ಲ, ಅವರು ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶವನ್ನು ಸಾರಿದ್ದಾರೆ ಶರಣರು ಹಾಕಿಕೊಟ್ಟರುವ ಹಾದಿಯಲ್ಲಿ ನಾವು ನೀವೆಲ್ಲರೂ ಪರಿಶುದ್ಧತೆಯಿಂದ ನಡೆದುಕೊಳ್ಳಬೇಕು, ಅವರ ಮಾರ್ಗದರ್ಶನ ಆದರ್ಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿವೆ ಎಂದರು. ನಂತರ ಮಾತನಾಡಿದ ಮಾಜಿ ಸಂಸದ ಎಸ್. ಶಿವರಾಮಗೌಡ ಮಾತನಾಡಿ ಶ್ರೀ ರೇಣುಕಾಚಾರ್ಯರ ವೃತ್ತ ಬಹುದಿನಗಳಿಂದ ಬೇಡಿಕೆ ಇತ್ತು ಈಗ ಅದು ಕಾಯಕಲ್ಪಕ್ಕೆ ಬಂದು ನಿಂತಿದ್ದು, ಸಮಾಜದ ಎಲ್ಲಾ ಒಳಪಂಗಡಗಳು ಒಂದಾಗಿ ಮುನ್ನಡೆದರೆ ಮಾತ್ರ ಒಗ್ಗಟ್ಟು ಇರಲು ಸಾಧ್ಯವಾಗುತ್ತದೆ, ಕೈಯಲ್ಲಿನ ಐದು ಬೆರಳುಗಳು ಸಮಾನಾಂತರವಾಗಿ ಇಲ್ಲದಿದ್ದರೂ ಸಹ, ಮಾನವ ಮನೆಯಲ್ಲಿ ಊಟ ಮಾಡುವಾಗ ಒಗ್ಗಟ್ಟಿನಿಂದ ತುತ್ತನ್ನು ತಿನ್ನಿಸುತ್ತವೆ ಹಾಗಾಗಿ ಒಡೆದು ಹೋದ ಮತ್ತು ಒಳಪಂಗಡ ಸಂಘಟನೆಗಳು ಸಮಾಜದ ಕಾರ್ಯ ಚಟುವಟಿಕೆಗಳಲ್ಲಿ ಯಶಸ್ವಿಯಾಗಬೇಕೆಂದರೆ ಸಮಾಜದ ವೀರಶೈವ ಲಿಂಗಾಯಿತರು ಒಂದಾಗಬೇಕು ಎಂದರು.
ಕಾರ್ಯಕ್ರಮದ ಶುಭ ಸಂದರ್ಭದಲ್ಲಿ ಮಾಜಿ ಕಾಡಾ ಅಧ್ಯಕ್ಷ ಬಿ.ಹೆಚ್.ಎಂ. ತಿಪ್ಪೇರುದ್ರ ಸ್ವಾಮಿ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಸಮಾಜದ ಹಿರಿಯ ಮುಖಂಡರಾದ ಬಸವರಾಜಸ್ವಾಮಿ ಮಳೇಮಠ,ಕಳಕನಗೌಡ ಪಾಟೀಲ್, ಚನ್ನಬಸವಸ್ವಾಮಿ ಹಿರೇಮಠ, ಹಚ್.ಗಿರೀಗೌಡ, ಸೋಮನಾಥ ಪಟ್ಟಣಶೆಟ್ಟಿ ವಕೀಲರು, ಎಚ್.ಎಮ್.ಮಂಜುನಾಥ ವಕೀಲರು,
ಎಸ್.ಬಿ. ಹಿರೇಮಠ, ಆದಯ್ಯಸ್ವಾಮಿ ಹಿರೇಮಠ, ಶಂಕ್ರಯ್ಯಸ್ವಾಮಿ ಹಿರೇಮಠ,ಸಂಗಯ್ಯಸ್ವಾಮಿ ಸಂಶಿಮಠ, ವಿರೂಪಾಕ್ಷಸ್ವಾಮಿ ಹೆಚ್.ಎಂ. ಗಿರೀಶ್ ಬಳ್ಳಾರಿ, ಡಾ.ಆರ್.ಬಿ.ಪಾಟೀಲ್, ಪ್ರಕಾಶ ಅಕ್ಕಿ,ಆನಂದ ಅಕ್ಕಿ ಸೇರಿದಂತೆ ಸಮಾಜದ ನೂರಾರು ಜನರು ಉಪಸ್ಥಿತರಿದ್ದರು.
