ಎಲ್.ಪಿ.ಜಿ ಸಿಲಿಂಡರ್ ಬೆಲೆ ಹೇರಿಕೆ ವಿರೋಧಿಸಿ ಹೋರಾಟ

Protest against LPG cylinder price hike




ಎಲ್.ಪಿ.ಜಿ ಸಿಲಿಂಡರ್ ಬೆಲೆ ಹೇರಿಕೆ ವಿರೋಧಿಸಿ ಹೋರಾಟ

ಗಂಗಾವತಿ: ಗೃಹ ಬಳಕೆ ಮತ್ತು ವಾಣಿಜ್ಯ ಎಲ್‌.ಪಿ.ಜಿ ಸಿಲಿಂಡರ್‌ ‌ಗಳ ಬೆಲೆ ಏರಿಕೆಯನ್ನು ಖಂಡಿಸಿ ಸಿಪಿಐಎಂಎಲ್ ಲಿಬರೇಶನ್ ವತಿಯಿಂದ ನಗರದ ತಹಶೀಲ್ದಾರ್ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಲಾಯಿತು ಎಂದು ಜಿಲ್ಲಾ ಕರ‍್ಯರ‍್ಶಿ ವಿಜಯ ದೊರೆರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂರ‍್ಭದಲ್ಲಿ ಮಾತನಾಡಿದ ಅPIಒಐ ಲಿಬರೇಶನ್ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಕಾ. ನರ‍್ಮಲಾ ಮಾತನಾಡಿ ಕೇಂದ್ರ ರ‍್ಕಾರ ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ರೂ. ೬೦ ರಷ್ಟು ಹಾಗೂ ವಾಣಿಜ್ಯ ಬಳಕೆಯ ಸಿಲಿಂಡ‌ರ್ ಬೆಲೆಯಲ್ಲಿ ರೂ. ೧೧೪.೫೦ ರಷ್ಟು ಏರಿಕೆ ಮಾಡಿರುವುದು ಅತ್ಯಂತ ಜನವಿರೋಧಿ ಕ್ರಮವಾಗಿದೆ. ಬೆಲೆ ಏರಿಕೆಯಿಂದ ಉಜ್ವಲ ಯೋಜನೆಯ ಬಡ ಫಲಾನುಭವಿಗಳು, ಮಧ್ಯಮ ರ‍್ಗದ ಕುಟುಂಬಗಳು ಹಾಗೂ ದುಡಿಯುವ ಜನರ ಮೇಲೆ ದೊಡ್ಡ ರ‍್ಥಿಕ ಹೊರೆ ಬಿದ್ದಿದೆ. ವಾಣಿಜ್ಯ ಸಿಲಿಂಡ‌ರ್ ದರ ಏರಿಕೆಯ ಪರಿಣಾಮ ಅಂತಿಮವಾಗಿ ಗ್ರಾಹಕರ ಮೇಲೆಯೇ ಬಾಧಿಸಲಿದೆ. ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂರ‍್ಭದಲ್ಲಿ ಅಡಿಗೆ ಅನಿಲದ ದರವನ್ನೂ ಏರಿಕೆ ಮಾಡಿರುವುದು ಮಧ್ಯಮ ರ‍್ಗದ ಮತ್ತು ಕರ‍್ಮಿಕರ ಜೀವನವನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂರ‍್ಭದಲ್ಲಿ ಸಣ್ಣ ಹನುಮಂತಪ್ಪ ಹುಲಿಹೈದರ, ಶೃತಿ, ರೇಣುಕಮ್ಮ, ದ್ಯಾವಮ್ಮ, ಹುಲಿಗೇಮ್ಮ, ಉಮಾದೇವಿ ಇತರರು ಇದ್ದರು.