ಮಕ್ಕಳೇಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ಘಟ್ಟ.

SSLC is an important milestone in a student's life.

ಮಕ್ಕಳೇಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ಘಟ್ಟ.

ಜಾಹೀರಾತು


ಮೂಡಲಗಿ: ಈ ಘಟ್ಟ ನಿನ್ನ ಮುಂದಿನ ಕಾಲೇಜು ಆಯ್ದುಕೊಳ್ಳಲು ಬಹುಮುಖ್ಯ. ಹಾಗಾಗಿ ಒಂದಿಷ್ಟು ಓದಿನ ಕಡೆ ಗಮನ ಕೊಡು.
ಹಾಗೆಂದು ಹಗಲು ರಾತ್ರಿ ಓದುವವರು ಇದ್ದಾರೆ.

ಪ್ರತಿದಿನ ಒಂದಿಷ್ಟು ಗಂಟೆಗಳ ನಿರಂತರ ಅಧ್ಯಯನ ಅನುಕೂಲವಾಗಲಿದೆ.

ಇಷ್ಟು ದಿನ ಅಷ್ಟಾಗಿ ಓದಿರದಿದ್ದರೂ ಈಗ ಪರೀಕ್ಷೆಯ ಅಂತರದ ದಿನಗಳಲ್ಲಿ ಓದಬಹುದು.
ಒಂದು ಪುಸ್ತಕ ಓದುವುದು ದೊಡ್ಡ ಸಂಗತಿಯೇನಿಲ್ಲ.
ಆಮೇಲೆ ಪರೀಕ್ಷೆ ಚನ್ನಾಗಿ ಮಾಡಿಲ್ಲಾಂದ್ರೆ ಅದರ ಬಗ್ಗೆ ಚರ್ಚಿಸಬೇಡಿ ಮುಂದಿನ ಪತ್ರಿಕೆ ಬಗ್ಗೆ ಮಾತ್ರ ಗಮನಹರಿಸಿ.
ಒಂದು ವೇಳೆ ಕಡಿಮೆ ಅಂಕ ಬಂದರೂ ಚಿಂತೆ ಬೇಡ.
ಪಿ.ಯು.ಸಿಗೆ ಚಂದ ಓದೋಣ
ನನ್ನ ಗೆಳೆಯನೊಬ್ಬ ಎಸ್.ಎಸ್ ಎಲ್.ಸಿ ಫೇಲ್
ಪಿ.ಯು.ಸಿ ಫೇಲ್,
ಪದವಿ ಕೂಡ ಫೇಲ್ ಆಗಿದ್ದ
ಆದರೆ ಆತ ಕೆ.ಎ.ಎಸ್ ಪಾಸಾಗಿದ್ದ
ಕಾರಣ ಅವನು ಕೆ.ಎ.ಎಸ್ ತುಂಬಾ ಚನ್ನಾಗಿ ಓದಿದ್ದ.
ಹಾಗಾಗಿ ಯಾವುದೋ ಒಂದು ಪರೀಕ್ಷೆ ನಿಮ್ಮ ಭವಿಷ್ಯ ನಿರ್ಧರಿಸಲಾಗದು
ಒಂದು ಪರೀಕ್ಷೆ ಫೇಲಾದರೆ ಮತ್ತೊಂದು ಪರೀಕ್ಷೆ ಬರೆಯಬಹುದು.
ಆದರೆ ಜೀವನದ ಪರೀಕ್ಷೆಯಲ್ಲಿ ಫೇಲಾಗದಿರೋಣ
ಸೋತಾಗ
ಜಗತ್ತು Olympics ಅಪಮಾನ ಮಾಡಬಹುದು ಆದರೆ ಜಗತ್ತನ್ನು ಮೀರಿ ಬೆಳೆಯೋಣ .

ನಿಮ್ಮ ಆರೋಗ್ಯ ಮಾನಸಿಕ ಸ್ಥಿತಿ ಚಂದ ಇರಲಿ

ಪರೀಕ್ಷೆ ಬಗ್ಗೆ ಒತ್ತಡ ಬೇಡ
ಒಲವಿರಲಿ.

ಪರೀಕ್ಷೆ ಗಳು ನಮ್ಮ ಯಶಸ್ವಿನ ಮೆಟ್ಟಿಲುಗಳಾಗಲಿ

ಪೂಜಾ ಬಂಕಲಗಿ
ಚಿತ್ತಾಪುರ