ಎಸ್ಸೆಸ್ಸೆಲ್ಸಿ ಪರೀಕ್ಷೆ ನಿರ್ಭೀತಿಯಿಂದ ಎದುರಿಸಿಗ್ರಾಪಂ ಪಿಡಿಒ ಸುರೇಶ್ ಛಲವಾದಿ ಹೇಳಿಕೆಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ಸ್ವಾಗ
Face the SSLC exam with confidence
Gram PDO Suresh Chalavadi's statement
Aarti and welcome to the students who came to write the exam


ಎಸ್ಸೆಸ್ಸೆಲ್ಸಿ ಪರೀಕ್ಷೆ ನಿರ್ಭೀತಿಯಿಂದ ಎದುರಿಸಿ
ಗ್ರಾಪಂ ಪಿಡಿಒ ಸುರೇಶ್ ಛಲವಾದಿ ಹೇಳಿಕೆ
ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ಸ್ವಾಗ

ಗಂಗಾವತಿ: ತಾಲೂಕಿನ ಆರ್ಹಾಳ ಗ್ರಾಮದ ಸರಕಾರಿ ಹಿರಿಯ ಮತ್ತು ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ‘ವಿದ್ಯಾರ್ಥಿಗಳಿಗೆ ಭಯಮುಕ್ತ ವಾತಾವರಣ ನಿರ್ಮಿಸಲು’ ವಡ್ಡರಹಟ್ಟಿ ಗ್ರಾಮ ಪಂಚಾಯತಿ ಆಡಳಿತ ಮಂಡಳಿ, ಪ್ರೌಢ ಶಾಲೆಯ ಬೋಧಕ ಭೋಧಕೇತರ ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಮಕ್ಕಳಿಗೆ ಹೂ ಎರಚಿ ಪ್ಯಾಡ್ ಮತ್ತು ಪೆನ್ ವಿತರಿಸಿ, ಸಿಹಿ ಹಂಚಿ ಹಾಗೂ ಆರತಿ ಬೆಳಗಿ ಬುಧವಾರ ಸ್ವಾಗತ ಮಾಡಿಕೊಳ್ಳಲಾಯಿತು.
ಗ್ರಾಪಂ ಪಿಡಿಒ ಸುರೇಶ್ ಛಲವಾದಿ ಅವರು ಮಾತನಾಡಿ, ಎಸ್ ಎಸ್ ಎಲ್ ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟವಾಗಿದ್ದು, ತುಂಬಾ ಉತ್ಸಾಹದಿಂದ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಮಕ್ಕಳು ಪರೀಕ್ಷೆ ಎದುರಿಸಬೇಕು. 2023-24ನೇ ಸಾಲಿನಲ್ಲಿ ವಡ್ಡರಹಟ್ಟಿ ಗ್ರಾಪಂ ವ್ಯಾಪ್ತಿಯ ಶಾಲೆಗಳ ಸರಾಸರಿ ಫಲಿತಾಂಶ 52% ಇತ್ತು, ಗ್ರಾಮ ಪಂಚಾಯತಿಯ 2024-25ನೆ ಸಾಲಿಗೆ 72% ಆಗಿದ್ದು, ಪ್ರಸ್ತುತ 2025-26ನೆ ಸಾಲಿಗೆ 85% ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ಆದ್ದರಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಆತಂಕ ಪಡದೆ ನಿರ್ಭೀತಿ ಮತ್ತು ಭಯಮುಕ್ತವಾಗಿ ಪರೀಕ್ಷೆ ಬರೆದು ಗ್ರಾಮಕ್ಕೆ ಒಳ್ಳೆಯ ಕೀರ್ತಿ ತರಬೇಕೆಂದು ಹೇಳಿದರು.
ಮಕ್ಕಳಿಗೆ ಪರೀಕ್ಷಾ ಭಯಮುಕ್ತ ವಾತಾವರಣ ನಿರ್ಮಾಣಕ್ಕೆ ಗ್ರಾ.ಪಂ. ಆಡಳಿತ ಮಂಡಳಿ ಹಾಗೂ ಪ್ರೌಢ ಶಾಲೆಯ ಬೋಧಕ ಭೋಧಕೇತರ ಸಿಬ್ಬಂದಿ ಮತ್ತು ಸಾರ್ವಜನಿಕರ ಸಹಯೋಗದಲ್ಲಿ ಹಲವಾರು ಯೋಜನೆಗಳನ್ನ ಹಾಕಿಕೊಳ್ಳಲಾಗಿತ್ತು. ಅದರಲ್ಲೂ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದ ಮಂಜುಳಾ ಶಿವಪ್ಪ ನಾಯಕ್ ಹತ್ತಿಮರದ, ಉಪಾಧ್ಯಕ್ಷರಾಗಿದ್ದ ಟಿ.ಗೌಸಾಸಾಬ್ ಹಾಗೂ ಆಡಳಿತ ಮಂಡಳಿಯ ನೇತೃತ್ವದಲ್ಲಿ ಆರಾಳ ಮತ್ತು ವಡ್ಡರಹಟ್ಟಿಯ ಶ್ರೀ ತಿಮ್ಮನಾಯಕ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ 180 ದಿನಗಳ ಕಾಲ ಶಿಕ್ಷಣಕ್ಕಾಗಿ ಮಕ್ಕಳಿಗೆ ದಿನಪತ್ರಿಕೆಗಳನ್ನು ಉಚಿತವಾಗಿ ನೀಡಲಾಗಿತ್ತು. ಹಾಗೆಯೇ ಶಿಕ್ಷಕ ವೃಂದವು ತುಂಬಾ ಉತ್ಸುಕತೆಯಿಂದ ತಮ್ಮ ಎಲ್ಲ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಕಾರ್ಯನಿರ್ವಾಹಿಸಿದ್ದು, ಉತ್ತನ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ ಎಂದರು.
ಯುವ ಮುಖಂಡರಾದ ಶಿವಪ್ಪ ನಾಯಕ್ ಹತ್ತಿಮರದ, ಕರುಣಾಕರ, ಯಮನಪ್ಪ ನವಲಿ (ದಳಪತಿ), ಕನಕರಾಯ, ತೋಟಪ್ಪ ನಾಯಕ್, ರುದ್ರೇಶ್, ಸಂಗಪ್ಪ, ಹುಸೇನಸಾಬ್ ತಾಳಕೇರಿ, ಶಾಂತಮ್ಮ, ಹುಸೇನಪ್ಪ ಬಂಡೆನಾಯಕ್, ಕಾಳಿಂಗ ಪ್ರಸಾದ್ ಇವರು ಮಕ್ಕಳಿಗೆ ಉಚಿತವಾಗಿ ಪರೀಕ್ಷೆ ಬರೆಯುವ ಪ್ಯಾಡ್ ಮತ್ತು ಪೆನ್ ವಿತರಿಸಿ ಸಿಹಿ ಹಂಚಿ ಸ್ವಾಗತಿಸಿದರು. ಗ್ರಾಮ ಪಂಚಾಯತಿ ಕಾರ್ಯದರ್ಶಿ ಈಶಪ್ಪ, ಎಂ.ಬಿ.ಕೆ. ನಾಗರತ್ನಮ್ಮ, ಎನ್ ಆರ್ ಎಲ್ ಎಂ ಸಿಬ್ಬಂದಿಗಳು, ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
