ಹನೂರು ವಿಧಾನಸಭಾ ಕ್ಷೇತ್ರದಲ್ಲಿ ನೀರಿನ ಸಮಸ್ಯೆಗಳಗೆ ಸ್ಪಂದಿಸಿದ ಡಾಕ್ಟರ್ ದತ್ತೇಶ್ ಕುಮಾರ್

Dr. Dattatesh Kumar responded to the water problems in Hanur assembly constituency.

ಹನೂರು ವಿಧಾನಸಭಾ ಕ್ಷೇತ್ರದಲ್ಲಿ ನೀರಿನ ಸಮಸ್ಯೆಗಳಗೆ ಸ್ಪಂದಿಸಿದ ಡಾಕ್ಟರ್ ದತ್ತೇಶ್ ಕುಮಾರ್ .

ಜಾಹೀರಾತು


ವರದಿ: ಬಂಗಾರಪ್ಪ .ಸಿ.
ಹನೂರು:ವಿಧಾನಸಭಾ ಕ್ಷೇತ್ರದಾದ್ಯಂತ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಸದಾ ಮುಂದಿರುವ ಡಾಕ್ಟರ್ ದತ್ತೇಶ್ ಕುಮಾರ್ ಅವರು ಇಂದು ಹುತ್ತೂರು ಗ್ರಾಮದಲ್ಲಿ ನೀರಿನ ಸಮಸ್ಯೆಯನ್ನು ಕೇಳಿ ಅಲ್ಲಿನ ನಿವಾಸಿಗಳು ಪರದಾಡುವಂತಹ ಸ್ಥಿತಿಯಲ್ಲಿ ಇದ್ದಂತಹ ಸಮಯದಲ್ಲಿ ಬಿಜೆಪಿಯ ಹಿರಿಯರಾದ ಅವರು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಮೂಲಕ ತಮ್ಮ ಸಮಾಜ ಸೇವೆಯಿಂದ ಜನರ ಮನ ಗೆದ್ದಿದ್ದಾರೆ ಎಂದು ಬಿಜೆಪಿ ಮುಖಂಡರಾದ ಬೊರ್ವೆಲ್ ಶ್ರೀನಿವಾಶ್ ರವರು ತಿಳಿಸಿದರು.
ಇದೇ ವಿಷಯವಾಗಿ ಮಾತನಾಡಿದ ಡಾಕ್ಟರ್ ದತ್ತೇಶ್ ಕುಮಾರ್ ರವರು ನಮ್ಮ ಮಾನಸ ಫೌಂಡೇಷನ್ ವತಿಯಿಂದ
ಇತ್ತೀಚಿನ ದಿನಗಳಲ್ಲಿ ನಮ್ಮ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದಿರುವ ಪರಿಣಾಮವಾಗಿನೀರಿಗೆ ಅಹಾಕಾರ ಉಂಟಾಗುವಂತಹ ಸ್ಥಿತಿಗೆ ತಾಲೂಕಿನ ಹುತ್ತೂರು ಗ್ರಾಮದಲ್ಲಿ ಕಾಣಬಹುದು, ಕಳೆದ ಒಂದು ತಿಂಗಳಿಂದಲೂ ಸಹ ನೀರಿನ ಸಮಸ್ಯೆಯಿಂದ ಇಲ್ಲಿನ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ,ಇಲ್ಲಿ ಸಿಗುವ ಅಲ್ಪ ಸ್ವಲ್ಪ ನೀರಿನಲ್ಲಿಯೇ ಬದುಕುಳಿಯುವಂತಹ ಪರಿಸ್ಥಿತಿಯಲ್ಲಿದ್ದಾರೆ, ಲೊಕ್ಕನಹಳ್ಳಿ ಹೋಬಳಿಯ
ಸುಮಾರು ನಾಲ್ಕು ಸಾವಿರ ಜನಸಂಖ್ಯೆಯನ್ನು ಹೊಂದಿರುವ ಹುತ್ತೂರು ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಇರುವ ಎಂಟು ಕೊಳವೆ ಬಾವಿಗಳ ಪೈಕಿ ಕೆಲವೇ ಕೆಲವು ಬೋರ್‌ವೆಲ್‌ಗಳಲ್ಲಿ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ನೀರು ಬರುತ್ತಿದೆ ಉಳಿದಂತೆ
ಎಲ್ಲ ಕೊಳವೆ ಬಾವಿಗಳಲ್ಲಿಯೂ ಅಂತರ್ಜಲ ಮಟ್ಟ ಕಡಿಮೆಯಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ ,
ಜನರ ಸಮಸ್ಯೆಗೆ ಸ್ಪಂದಿಸಿದ್ದೆನೆ ,ಗ್ರಾಮಗಳಿಗೆ ಟ್ಯಾಂಕರ್ ಗಳ ಮೂಲಕ ಜನರಿಗೆ ಬೇಕಾಗುವಷ್ಟು ನೀರನ್ನು ಪೂರೈಸಿ ಒಂದು ಟ್ಯಾಂಕರ್ ಅನ್ನು ಗ್ರಾಮದಲ್ಲಿ ಇರುವಂತೆ ಮಾಡಿದ್ದೇನೆ ಪ್ರತಿನಿತ್ಯ ಎಷ್ಟು ಟ್ಯಾಂಕ್ ನೀರು ಬೇಕಾದರೂ ಬೇಕಾದರೂ ಬಳಸಿಕೊಳ್ಳಿ ಎಂದು ಅನುಕೂಲ ಕಲ್ಪಿಸಿಕೊಟ್ಟಿದ್ದೆನೆ , ಯುಗಾದಿ ಹಬ್ಬದ ಸಂದರ್ಭದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ವ್ಯವಸ್ಥೆ ಕಲ್ಪಿಸಿದ ಗ್ರಾಮದ ನಿವಾಸಿಗಳು ಮಹಿಳೆಯರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.