ಅಪ್ಪು ಅವರ 51ನೇ ಹುಟ್ಟು ಹಬ್ಬಕ್ಕೆ 51 ಅಭಿಮಾನಿಗಳಿಂದ ಸ್ವಯಂ ಪ್ರೇರಿತ ರಕ್ತದಾನ..

51 fans voluntarily donate blood on Appu's 51st birthday.

 

ಅಪ್ಪು ಅವರ 51ನೇ ಹುಟ್ಟು ಹಬ್ಬಕ್ಕೆ 51 ಅಭಿಮಾನಿಗಳಿಂದ ಸ್ವಯಂ ಪ್ರೇರಿತ ರಕ್ತದಾನ..

ಜಾಹೀರಾತು

  ಗಂಗಾವತಿ :ಅಪ್ಪು ಅವರ 51ನೇ ಹುಟ್ಟು ಹಬ್ಬಕ್ಕೆ 51 ಅಭಿಮಾನಿಗಳಿಂದ ಸ್ವಯಂ ಪ್ರೇರಿತ ರಕ್ತದಾನ..
ನಗುವಿನ ಒಡೆಯ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಅವರ 51ನೇ ಹುಟ್ಟು ಹಬ್ಬದ ಪ್ರಯುಕ್ತ ಇಂದು ಗಂಗಾವತಿಯ ಶ್ರೀ ನೀಲಕಂಠೇಶ್ವರ ನಗರದ ಮುಖ್ಯ ಮಹಾದ್ವಾರದಲ್ಲಿ
ಶ್ರೀ ನೀಲಕಂಠೇಶ್ವರ ನಗರದ ಅಪ್ಪು ಅಭಿಮಾನಿಗಳು, ಶ್ರೀ ನೀಲಕಂಠೇಶ್ವರ ಸಾಂಸ್ಕೃತಿಕ ಕಲಾ ವೇದಿಕೆ, ಸೃಷ್ಟಿ ಡೆಕೋರೇಟರ್, ಮತ್ತು ಗೋಪಿ ರಕ್ತ ಭಂಡಾರ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಪುಷ್ಪ ನಮನ, ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸುಮಾರು 51 ಜನ ಅಪ್ಪು ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಅಪ್ಪು ಅವರಿಗೆ ಗೌರವಪೂರ್ವಕವಾಗಿ ನಮನವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುರುಹಿನಶೆಟ್ಟಿ ಸಮಾಜದ ಯಜಮಾನರಾದ ತಿಪ್ಪಣ್ಣ ಶಾವಿ,  ಬಸವರಾಜಪ್ಪ ಕುರುಗೋಡು, ವಾರ್ಡಿನ ಹಿರಿಯರಾದ ನಂಜುಂಡಪ್ಪ ಬಜಾರ್,  ಚಂದ್ರಪ್ಪ ಐಲಿ,  ಮಾರುತಿ ಐಲಿ,  ಗಾಳಿನಾಥ ಪೋಲಕಲ್  ಬಸವರಾಜ ಐಲಿ,  ಅಶೋಕ್ ಶಾವಿ,  ಮಲ್ಲಿಕಾರ್ಜುನ ಪೋಲಕಲ್,  ವಿರೂಪಾಕ್ಷ ಶಿರವಾರ, ಕಾರ್ಯಕ್ರಮದ ವ್ಯವಸ್ಥಾಪಕರಾದ  ನಂಜುಂಡ ಐಲಿ , ಅರುಣ್ ಕುಮಾರ್ ಬಜಾರ್ ಸೇರಿದಂತೆ ವಾರ್ಡಿನ ಜನರು ಅಭಿಮಾನಿಗಳು ಉಪಸ್ಥಿತರಿದ್ದರು..