ಕನಕಗಿರಿ: ಐಟಿಐ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಖಾಸಗಿ ಅಭ್ಯರ್ಥಿಗಳಿಗೆ ಅವಕಾಶ

Kanakagiri: Private candidates allowed to apply for ITI admission

ಕನಕಗಿರಿ: ಐಟಿಐ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಖಾಸಗಿ ಅಭ್ಯರ್ಥಿಗಳಿಗೆ ಅವಕಾಶ


ಕೊಪ್ಪಳ ಮಾರ್ಚ್ 16 (ಕರ್ನಾಟಕ ವಾರ್ತೆ): ಗಂಗಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ 2025–26ನೇ ಸಾಲಿಗೆ ಐಟಿಐ ವಿವಿಧ ವೃತ್ತಿಯಲ್ಲಿ ತರಬೇತಿಗಳಿಗಾಗಿ ಪ್ರವೇಶ ಬಯಸುವ ಖಾಸಗಿ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
 ಗಂಗಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿಗೆ ಅರ್ಹ ಖಾಸಗಿ ಅಭ್ಯರ್ಥಿಗಳ ಪ್ರವೇಶಾತಿಯನ್ನು ತೆಗೆದುಕೊಳ್ಳಲಾಗುತ್ತಿದ್ದು, ಡಿಜಿಟಿ ಮಾರ್ಗಸೂಚಿಗಳ ಪ್ರಕಾರ ಐಟಿಐ ತರಬೇತಿಗೆ ಸಂಬಂಧಿಸಿದ ಕೆಲವು ವೃತ್ತಿಗಳಲ್ಲಿ ಅನುಭವ ಮತ್ತು ಇತರ ಅರ್ಹತೆ ಹೊಂದಿರುವ ಕನಕಗಿರಿ ತಾಲ್ಲೂಕಿನ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಅರ್ಹ ಅಭ್ಯರ್ಥಿಗಳ ಡಿಜಿಟಿ ಮಾರ್ಗ ಸೂಚಿಗಳ ಪ್ರಕಾರ ಪ್ರವೇಶಾತಿಯನ್ನು ಕೈಗೊಳ್ಳಲಾಗುತ್ತದೆ.
 ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 20 ಆಗಿದ್ದು, ಆಸಕ್ತ ಅಭ್ಯರ್ಥಿಗಳು ಗಂಗಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 8904448925 ಅಥವಾ 9448259832 ಗೆ ಸಂಪರ್ಕಿಸಬಹುದಾಗಿದೆ ಎಂದು ಕನಕಗಿರಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೆಫ್ರಿಜರೇಷನ್, ಏರ್ ಕಂಡೀಷನಿಂಗ್ & ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ

Applications invited for Refrigeration, Air Conditioning & Sheep Farming Training

ರೆಫ್ರಿಜರೇಷನ್, ಏರ್ ಕಂಡೀಷನಿಂಗ್ & ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ


ಕೊಪ್ಪಳ ಮಾರ್ಚ್ 16 (ಕರ್ನಾಟಕ ವಾರ್ತೆ): ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ (ರಿ), ಹಳಿಯಾಳ ವತಿಯಿಂದ 30 ದಿನಗಳ ಉಚಿತ ರೆಫ್ರಿಜರೇಷನ್ ಮತ್ತು ಏರ್ ಕಂಡೀಷನಿಂಗ್ ಹಾಗೂ ಕುರಿ ಸಾಕಾಣಿಕೆ ಉಚಿತ ತರಬೇತಿಗೆ ಅರ್ಜಿ ಅರ್ಜಿ ಆಹ್ವಾನಿಸಲಾಗಿದೆ.
 ಗ್ರಾಮೀಣ ಭಾಗದ ನಿರುದ್ಯೋಗ ಯುವಕ, ಯುವತಿಯರಿಗಾಗಿ ಏಪ್ರಿಲ್ ತಿಂಗಳಿನಲ್ಲಿ 30 ದಿನಗಳ ಉಚಿತ ತರಬೇತಿಗಳು ಪ್ರಾರಂಭಿಸಲಾಗುತ್ತಿದ್ದು, ತರಬೇತಿಯು ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ.

ಸ್ವಯಂ ಉದ್ಯೋಗ ಮಾಡಲು ಈ ತರಬೇತಿಯು ಅನುಕೂಲವಾಗಲಿದ್ದು, 18 ರಿಂದ 50 ವಯಸ್ಸಿನ ಒಳಗಿರುವ ಆಸಕ್ತರು ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ ನೀಡಲಾಗುವುದು.
 ಈ ತರಬೇತಿಯಲ್ಲಿ ಕೌಶಲ್ಯ, ಸಾಧನಾ ಪ್ರೇರಣಾ ತರಬೇತಿ, ಉದ್ಯಮಶಿಲತೆಯ ದಕ್ಷ ಗುಣಗಳು, ಹೊಸ ಉದ್ಯಮದ ಸ್ಥಾಪನೆ ಬಗ್ಗೆ ಮಾಹಿತಿ, ಮಾರುಕಟ್ಟೆ ಸಮೀಕ್ಷೆ, ಮಾರಾಟದ ತಂತ್ರಗಳು, ಯಶಸ್ವಿ ಉದ್ಯಮಗಳಿಂದ ಅನುಭವ ಹಂಚಿಕೆ, ಕ್ಷೇತ್ರ ಭೇಟಿ, ಸಾಫ್ಟ್ ಸ್ಕಿಲ್ಸ್, ಯೋಗ ತರಬೇತಿ ಹಾಗೂ ಬ್ಯಾಂಕಿನಿAದ ಸಾಲ ಪಡೆದು ಸ್ವ-ಉದ್ಯೋಗ ಪ್ರಾರಂಭಿಸಲು ಬೇಕಾಗುವ ಜ್ಞಾನ, ಸರಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಇನ್ನಿತರ ಮಾಹಿತಿಗಳನ್ನು ಉಚಿತವಾಗಿ ನೀಡಲಾಗುವುದು.
 ತರಬೇತಿಯಲ್ಲಿ ಭಾಗವಹಿಸುವವರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ಈ ವಿಳಾಸಕ್ಕೆ ಸಂಪರ್ಕಿಸಲು ಹಾಗೂ ಸಂಸ್ಥೆಯ ದೂರವಾಣಿ ಸಂಖ್ಯೆ: 8217236973, 9483485489, 9482188780 ಗೆ ಮಾರ್ಚ್ 30 ರೊಳಗಾಗಿ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸಗಳೊಂದಿಗೆ ನೋಂದಾಯಿಸಬಹುದಾಗಿದೆ ಎಂದು ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಗಂಗಾವತಿ: ಐಟಿಐ ಪ್ರವೇಶಕ್ಕೆ ಖಾಸಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Gangavathi: Applications invited from private candidates for ITI admissions

ಗಂಗಾವತಿ: ಐಟಿಐ ಪ್ರವೇಶಕ್ಕೆ ಖಾಸಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ


ಕೊಪ್ಪಳ ಮಾರ್ಚ್ 16 (ಕರ್ನಾಟಕ ವಾರ್ತೆ): ಗಂಗಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ 2025–26ನೇ ಸಾಲಿಗೆ ಐಟಿಐ ವಿವಿಧ ವೃತ್ತಿಯಲ್ಲಿ ತರಬೇತಿಗಳಿಗಾಗಿ ಪ್ರವೇಶ ಬಯಸುವ ಖಾಸಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
 ಗಂಗಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿಗೆ ಅರ್ಹ ಖಾಸಗಿ ಅಭ್ಯರ್ಥಿಗಳ ಪ್ರವೇಶಾತಿಯನ್ನು ತೆಗೆದುಕೊಳ್ಳಲಾಗುತ್ತಿದ್ದು, ಡಿಜಿಟಿ ಮಾರ್ಗಸೂಚಿಗಳ ಪ್ರಕಾರ ಐಟಿಐ ತರಬೇತಿಗೆ ಸಂಬಂಧಿಸಿದ ಕೆಲವು ವೃತ್ತಿಗಳಲ್ಲಿ ಅನುಭವ ಮತ್ತು ಇತರ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಅರ್ಹ ಅಭ್ಯರ್ಥಿಗಳ ಡಿಜಿಟಿ ಮಾರ್ಗ ಸೂಚಿಗಳ ಪ್ರಕಾರ ಪ್ರವೇಶಾತಿಯನ್ನು ಕೈಗೊಳ್ಳಲಾಗುತ್ತದೆ.
 ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 20 ಆಗಿದ್ದು, ಆಸಕ್ತ ಅಭ್ಯರ್ಥಿಗಳು ಗಂಗಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 8904448925 ಅಥವಾ 9448259832 ಗೆ ಸಂಪರ್ಕಿಸಬಹುದಾಗಿದೆ ಎಂದು ಗಂಗಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೋಕ ಅದಾಲತ್‌ನಲ್ಲಿ 49,953 ಪ್ರಕರಣಗಳ ಇತ್ಯರ್ಥ

49,953 cases disposed of in Lok Adalat

ಲೋಕ ಅದಾಲತ್‌ನಲ್ಲಿ 49,953 ಪ್ರಕರಣಗಳ ಇತ್ಯರ್ಥ


ಕೊಪ್ಪಳ ಮಾರ್ಚ್ 16 (ಕರ್ನಾಟಕ ವಾರ್ತೆ): ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗಿದೆ.
 ಈ ಸಂದರ್ಭದಲ್ಲಿ ಒಟ್ಟು 7 ಪ್ರಕರಣಗಳಲ್ಲಿ ಗಂಡ-ಹೆಂಡತಿಯರು ತಮ್ಮ ಮನಸ್ತಾಪವನ್ನು ಬಿಟ್ಟು, ಮಧ್ಯಸ್ಥಿಕೆಗಾರರು, ವಕೀಲರು ಹಾಗೂ ನ್ಯಾಯಾಧೀಶರು ನೀಡಿದ ಸೂಕ್ತ ಮಾರ್ಗದರ್ಶನದ ಹಿನ್ನೆಲೆಯಲ್ಲಿ ಮತ್ತೆ ಒಟ್ಟಿಗೆ ಬಾಳು ನಡೆಸಲು ಒಪ್ಪಿಕೊಂಡಿರುವುದು ವಿಶೇಷವಾಗಿತ್ತು.
 ನ್ಯಾಯಾಲಯಗಳಲ್ಲಿ ನಡೆಯುತ್ತಿದ್ದ ವಿಮೆ, ನೀರಿನ ಬಿಲ್, ಬ್ಯಾಂಕ್ ಸಾಲ, ಮನೆ ಕರ, ಕೌಟುಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್, ಜನನ-ಮರಣ, ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು, ಮೋಟಾರ್ ವಾಹನ ಅಪಘಾತ ಸೇರಿದಂತೆ ವಿವಿಧ ರೀತಿಯ ಒಟ್ಟು 5123 ಪ್ರಕರಣಗಳ ಪೈಕಿ 3032 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
 ಇದೇ ವೇಳೆ ವಿಮೆ, ನೀರಿನ ಕರ, ಮೋಟಾರ್ ವಾಹನ ಅಪಘಾತ ಸೇರಿದಂತೆ ವಿವಿಧ ಪೂರ್ವ ದಾವೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 52,194 ಪ್ರಕರಣಗಳ ಪೈಕಿ 46,921 ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಯಿತು. ಇತ್ಯರ್ಥಗೊಂಡ ಪ್ರಕರಣಗಳ ಒಟ್ಟು ಮೌಲ್ಯ 3,21,81,082 ರೂ. ಆಗಿದೆ.
 ಒಟ್ಟಾರೆ ಒಂದೇ ದಿನದಲ್ಲಿ ನಡೆದ ಈ ಲೋಕ ಅದಾಲತ್‌ನಲ್ಲಿ ಒಟ್ಟು 57,316 ಪ್ರಕರಣಗಳ ಪೈಕಿ 49,953 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಇತ್ಯರ್ಥಗೊಂಡ ಪ್ರಕರಣಗಳ ಒಟ್ಟು ಮೌಲ್ಯ 44,44,49,017 ರೂ. ಆಗಿದೆ.
 ಈ ಬಾರಿ ದಾಖಲೆ ಪ್ರಮಾಣದಲ್ಲಿ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲು ಸಹಕರಿಸಿದ ಗೌರವಾನ್ವಿತ ನ್ಯಾಯಾಧೀಶರು, ವಕೀಲರು, ಕಕ್ಷಿಗಾರರು ಹಾಗೂ ಮಧ್ಯಸ್ಥಿಕೆಗಾರ ವಕೀಲರಿಗೆ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಧನ್ಯವಾದಗಳನ್ನು ಸಲ್ಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಯಾವ ಹಣ್ಣುಗಳು ಆರೋಗ್ಯಕ್ಕೆ ಉತ್ತಮ?

Which fruits are good for health?
Which fruits are good for health?

ಯಾವ ಹಣ್ಣುಗಳು ಆರೋಗ್ಯಕ್ಕೆ ಉತ್ತಮ?

ಎಲ್ಲಾ ಹಣ್ಣುಗಳು ನಮಗೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಡಲು ಸಹಾಯ ಮಾಡುತ್ತದೆ. ಆದರೆ ಅದನ್ನು ಹೇಗೆ ಯಾವ ಹೊತ್ತಿನಲ್ಲಿ ಸೇವೆಸ ಬೇಕೆಂದು ನಿಯಮಗಳು ಇದೆ.

ಉದಾಹರಣೆಗೆ ಹಲಸಿನ ಹಣ್ಣು ಹಸಿವು ಇದ್ದಾಗ ಊಟಕ್ಕೆ ಮುಂಚೆ 2 ಗಂಟೆ ಮೊದಲು ಹಾಗೆ ಯೇ ಬಾಳೆ ಹಣ್ಣುಗಳನ್ನು ಬೆಳಗ್ಗೆ ಉಪಹಾರ ಮುಗಿಸಿ ದ ನಂತರ ಒಂದು ಗಂಟೆ ಬಿಟ್ಟು ಅಥವಾ ಉಪಹಾರ ತಪ್ಪಿ ಹೋದಾಗ ಬಾಳೆಹಣ್ಣು ಸೇವಿಸಬಹುದು.

ಕಲಂಗಡಿ, ಮಸ್ಕ್ ಮೆಲಾನ್ ತಿಂದ ನಂತರ ನೀರು ಸೇವಿಸಬಾರದು, ಪರಂಗಿ ಹಣ್ಣು, ಲಿಚಿ , ನೇರಳೆ ಹಣ್ಣುಗಳು ಬಸುರಿ ಹೆಂಗಸರು ಸೇವಿಸಬಾರದು.ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ ಗೆ ಧನ್ಯವಾದಗಳನ್ನು ಸಲ್ಲಿಸಬೇಕು.

ಎಷ್ಟೊಂದು ವಿಧ ವಿಧವಾದ ಹಣ್ಣುಗಳು ದೇಶ ವಿದೇಶ ದಲ್ಲಿ ಬೆಳೆದು ಲೋಕದ ಮೂಲೆ ಮೂಲೆಯ ನಮ್ಮ ಮಾರುಕಟ್ಟೆ ಯಲ್ಲಿ ಲಭ್ಯ ವಾಗಿದೆ.. ಇತ್ತೀಚೆಗೆ ಯಷ್ಟೆ ಅಪರಿಚಿತ ಹಣ್ಣುಗಳ ಹೆಸರು ಒಂದೊಂದಾಗಿ ಪರಿಚಯ ವಾಗುತ್ತಿದೆ. ನಮಗೆ ಕೆಲವೊಂದು ಹಣ್ಣು ಗಳು ನಮ್ಮ ಹಣ್ಣು ಗಳ ರುಚಿಗೆ ಹೋಲುವ ರೀತಿಯಲ್ಲಿ ಇದೆಯೇನೋ ಅನ್ನಿಸುತ್ತೆ. ಬೆಲೆ ಯೂ ಸ್ವಲ್ಪ ದುಬಾರಿ.

Exotic fruits ಎಂಬ ವಿಂಗಡಣೆ ಯಿಂದ ಎಲ್ಲಾ ಶಾಪಿಂಗ್ ಮಾಲ್ ಗಳಲ್ಲಿ ಸಿಗುತ್ತದೆ.ನಮ್ಮ ವೈವಿಧ್ಯತೆಯಲ್ಲಿ ಏಕತೆ ಯ ನಮ್ಮ ಭಾರತ ದೇಶ ಕೇವಲ ಭಾಷೆಯಲ್ಲಿ, ಉಡುಪು, ಸಂಸ್ಕೃತಿ ಮತ್ತು ಸಂಪ್ರದಾಯ ದಲ್ಲಿ ಮಾತ್ರವಲ್ಲದೆ ಕೆಲವು ಹಣ್ಣುಗಳು ಸಹ ಒಂದು ರಾಜ್ಯದಲ್ಲಿ ಮಾತ್ರ ಬೌಗೋಳಿಕ ಸ್ಥಿತಿಗೆ ಅನುಸಾರವಾಗಿ ಹೆಚ್ಚಾಗಿ ಸಿಗುತ್ತದೆ.ಪ್ರಸ್ತುತ ಹಾಗೆ ಇಲ್ಲ.

ಎಲ್ಲಾ ಪ್ರದೇಶದ ಹಣ್ಣುಗಳು ಲಭ್ಯ. ಕೆಲವೊಂದು ಇಲ್ಲಿ ಕಲೋಚಿತವಾಗಿದರೆ ಮತ್ತೊಂದು ರಾಜ್ಯದಲ್ಲಿ ಇನ್ನು ತಡವಾಗ ಬಹುದು.

ಹಣ್ಣುಗಳ ಸಲಾಡ್ (ರಸಾಯನ?) ದಲ್ಲಿ ನಮಗೆ ಹೆಚ್ಚು ಹೆಚ್ಚಾಗಿ ವರ್ಣರಂಜಿತ ಮಿಶ್ರಣ ಹಣ್ಣುಗಳ ಸವಿಯಲು ಸಿಗುತ್ತಿದೆ. ಹೆಚ್ಚು ರುಚಿಕರ ಮತ್ತು ನಮ್ಮ ಆರೋಗ್ಯವನ್ನು ಕಾಪಾಡಲು ಅನುಕೂಲ ಮಾಡುತ್ತಿದೆ.ನಾವು ಆಯಾ ಕಾಲೋಚಿತ ಹಣ್ಣುಗಳನ್ನು (seasonal fruits) ಹೆಚ್ಚಾಗಿ ಸೇವಿಸಬೇಕು.

ಕಾರಣವೆಂದರೆ ಆಯಾ ಋತುಮಾನದ ಹಣ್ಣುಗಳು ಬೆಲೆ ಕಡಿಮೆ, ರುಚಿಕರ, ತಾಜಾತನ, ಅವುಗಳ ಗುಣಮಟ್ಟವನ್ನು ಸೇರಿಸುವ ನೈಸರ್ಗಿಕ ಸುವಾಸನೆ ಹೊಂದಿರುತ್ತದೆ. ಕಾಲೋಚಿತ ಹಣ್ಣುಗಳು ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ.ನನಗೆ ಹಣ್ಣುಗಳು ಎಂದರೆ ಬಹಳ ಇಷ್ಟ. ಹೆಚ್ಚಾಗಿ ಬರೆಯಲು ಅಸೆ.

ಆದರೆ ಸಮಯದ ಅಭಾವ ವಿರುವುದರಿಂದ ಈಗ ಕೆಲವು ಮುಖ್ಯವಾದ ಹಣ್ಣುಗಳುಗಳು ನಮ್ಮ ಆರೋಗ್ಯಕ್ಕೆ ನೀಡುವ ಫಲದ ಬಗ್ಗೆ ಅಲ್ಲಿ ಇಲ್ಲಿ ಓದಿ ಸಂಗ್ರಹಿಸುರುವ ತುಣುಕುಗಳು ಇಲ್ಲಿ ತಿಳಿಸಲಾಗಿದೆ.

ಮುಂದೆ ಸಮಯ ಸಿಗುವಾಗ ಇನ್ನಷ್ಟು ವಿವರ ಮುಂಬರುವ ಹಣ್ಣುಗಳ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡುತ್ತೇನೆ.ಬೇಸಿಗೆಯಲ್ಲಿ ದೊರೆಯುವ

ಹಣ್ಣುಗಳು : ಮಾವು, ಕಲ್ಲಂಗಡಿ, ನೇರಳೆ, ಪ್ಲಮ್, ಪರಂಗಿ

ಹಣ್ಣುಗಳುಮಾವು : ವಿಟಮಿನ್ ಸಿ ಹೇರಳವಾಗಿದೆ. ದೇಹವನ್ನು ನೈಸರ್ಗಿಕ ರಕ್ಷಣೆ ಕಾರ್ಯ ವಿಧಾನ ವನ್ನು ಹೆಚ್ಚಿಸುತ್ತದೆ, ಮಾವು ಶಾಖದ ವಿರುದ್ಧ ಹೋರಾಡುತ್ತದೆ ಮತ್ತು ಬೇಸಿಗೆಯಲ್ಲಿ ಶಾಖದ ಹೊಡೆತಗಳನ್ನು ತಡೆಯುತ್ತದೆ.

(Sun strokes). ಜೀರ್ಣ ಶಕ್ತಿ ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಹೃದಯದ ಅರೋಗ್ಯ ವನ್ನು ಸುಧಾರಿಸುತ್ತದೆ.

ಕಲ್ಲಂಗಡಿ : ಕಣ್ಣುಗಳ ಆರೋಗ್ಯ, ಜೀವಕೋಶದ ಬೆಳವಣಿಗೆ, ದೇಹದ ಉಷ್ಣತೆ ಕಡಿಮೆ ಮಾಡುತ್ತದೆ, ಮೂತ್ರಪಿಂಡದ ಕಲ್ಲುಗಳು ಮತ್ತು ಸ್ನಾಯು ನೋವುಗಳು ತಡೆಯುವುದು.

ನೇರಳೆ : ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವುದು, ಮಧುಮೇಹ (Diabetes) ತಡೆಯುವುದು, ಮಿದುಳು ಆರೋಗ್ಯ ಸುಧಾರಣೆ, ತೂಕ ಇಳಿಸಲು ಸಹಾಯ ಮಾಡುವುದು,

ಪ್ಲಮ್ : (ಊಟಿ ಆಪಲ್) ಸೌಂದರ್ಯ ವರ್ಧಕ, ಕಲೆ, ತ್ವಚೆ ಯ ಕಾಂತಿ ಹೆಚ್ಚಿಸುವುದು, ಮಧುಮೇಹ ಸ್ಥಿಮಿತವಾಗಿ ಇಡುವುದು, ರಕ್ತದ ಒತ್ತಡ ಇಳಿಸುವುದು, ಜೀರ್ಣಕ್ಕೆ ಸಹಾಯಕಾರಿ, ಕರುಳು ಶುದ್ದಿಗೆ ಒಳ್ಳೆಯದು.

ಪರಂಗಿ ಹಣ್ಣು : ಸ್ನಾಯು ಅಂಗಾಂಶ ನವೀಕರಣ ಪ್ರಕ್ರಿಯೆಗೆ ಉತ್ತಮ, ಚರ್ಮದ ಕಾಂತಿ, ಜೀರ್ಣ ಕ್ರಿಯೆಗೆ, ನಾರಿನ ಅಂಶ ಹೆಚ್ಚಾಗಿ ಇರುವುದು, ಹೃದಯದ ಆರೋಗ್ಯ ಸಹಾಯ ಮಾಡುವುದು.

ಮಳೆಯ ಕಾಲದ ಹಣ್ಣುಗಳು : ಸೀತಾ ಫಲ, ಸೇಬು, ಬಾಳೆಹಣ್ಣುಸೀತಾ ಫಲ : ಕಣ್ಣಿನ ಆರೋಗ್ಯ ವೃದ್ಧಿ, ಉಷ್ಣತೆ ಕಡಿಮೆಗೆ ಸಹಾಯ ಮಾಡುತ್ತದೆ.

ಸೇಬು : ಮದುಮೇಹ ನಿಯಂತ್ರಣ, ಹೃದಯ ಅರೋಗ್ಯ, ತೂಕ ಕಡಿಮೆ, ಬಹಳ ಹೆಚ್ಚಾಗಿ ವಿಟಮಿನ್ ಸಿ. ಉದರ ಭಾದೆ ಸರಿಯಾಗುತ್ತದೆ.

ದಿನಕ್ಕೆ ಒಂದು ಸೇಬು ತಿಂದರೆ ವ್ಯಧ್ಯರನ್ನು ಕಾಣುವ ಅವಶ್ಯಕತೆ ಬಾರದು ಎಂಬ ಆಂಗ್ಲ ಗಾದೆಯೇ ಇದೆ.

ಉತ್ತರ ಭಾರತದಲ್ಲಿ ಸಿಗುವ ಸೇಬು ರಸವತ್ತಾಗಿರುತ್ತದೆ. ದಕ್ಷಿಣ ಭಾರತಕ್ಕೆ ರವಾನೆ ಆಗುವ ವೇಳೆಯಲ್ಲಿ ರಸ ಸ್ವಲ್ಪ ಕಡಿಮೆ ಯಾಗುತ್ತದೆ ಅಂತ ನನ್ನ ಅನಿಸಿಕೆ.

ಬಾಳೆ ಹಣ್ಣು : potassium, ನಾರಿನ ಶಕ್ತಿ ಹೇರಳ ವಾಗಿದೆ. ವಿಟಮಿನ್ ಬಿ6, ಬಿಳಿಯ ರಕ್ತ ಕಣಗಳ ಶಕ್ತಿ ಗೆ, ಉದರ ರೋಗಕ್ಕೆ, ತಲೆಸುತ್ತು, ವಾಕರಿಕೆ, ಜೀರ್ಣ, ಹಸಿವು ಉತ್ತಜಿಸಲು, ಇನ್ನು ಹಲವಾರು ಪ್ರಯೋಜನ ಗಳು ಇದೆ.

ವಸಂತ ಋತು ಹಣ್ಣುಗಳು : ಹಲಸಿನ ಹಣ್ಣು, ಅನಾನಸ್ ಲಿಚಿ, ದಾಳಿಂಬೆಹಲಸಿನ ಹಣ್ಣು : ಮೂಳೆ ಗಟ್ಟಿ ಮಾಡಲು ಸಹಾಯ, ಮಲಬದ್ಧತೆ ಗೆ ಒಳ್ಳೆಯ ಹಣ್ಣು. ಇನ್ನು ಹಲವಾರು ಪ್ರಯೋಜನ ಗಳಿವೆ.

ಅನಾನಸ್ : ರೋಗನಿರೋಧಕ ಶಕ್ತಿಯನ್ನು, ಕ್ಯಾನ್ಸರ್, ತಲೆನೋವು, ಇತರೆ ರೋಗಕ್ಕೆ ಶಕ್ತಿ ವರ್ಧಕ, ಜೀರ್ಣ ಶಕ್ತಿ ಗೆ ಮತ್ತು ಹೆರಳವಾದ ವಿಟಮಿನ್ ಗಳಿಂದ ಕೂಡಿರುವ ಹಣ್ಣು.

ಲಿಚಿ : ಕೆಂಪು ರಕ್ತದ ಕಣ ವೃದ್ಧಿ, ಮೂಳೆ ಬಲ, ಉದರ ರೋಗಗಳಿಗೆ, ಜೀರ್ಣ ವ್ಯಾದಿ ಗಳಿಗೆ ಒಳ್ಳೆ ಯದು.

ದಾಳಿಂಬೆ : ರೋಗಕ್ಕೆ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಕೀಲು ನೋವುಗಳು, ಮೂಳೆ ಸಂಬಂಧ ರೋಗಕ್ಕೆ, ರಕ್ತದ ಒತ್ತಡ ಗಳಿಗೆ ಹೆಚ್ಚು ಪ್ರಯೋಜನಕಾರಿ.

ಚಳಿಕಾಲದ ಹಣ್ಣುಗಳು : ಕಿತ್ತಳೆ, ಕಿವಿ, ದ್ರಾಕ್ಷಿ, ಸಪೋಟಕಿತ್ತಳೆ : ವಿ ಟಮಿನ್ ಸಿ ಯಿಂದ ಕೂಡಿರುವ ಈ ಹಣ್ಣು ಚರ್ಮ ಕಾಂತಿ ಹಾಗೂ ಚರ್ಮದ ರೋಗಕ್ಕೆ ಉಪಕಾರಿ. ಹೃದಯ ರೋಗಕ್ಕೆ, ಮದುಮೇಹ ಗಳಿಗೆ ಒಳ್ಳೆಯದು.

ಕಿವಿ : ಹೇರಳ ವಾದ ವಿಟಮಿನ್ ಸಿ ಚರ್ಮ, ಉರಿಯೂತ, ಕಿರುಬಿಲ್ಲೆಗಳ ಹೆಚ್ಚಳ, ಜೀರ್ಣಕ್ಕೆ, ಉದರಕ್ಕೆ ಒಳ್ಳೆ ಯ ಹಣ್ಣು.

ದ್ರಾಕ್ಷಿ : ದೇಹದ ಉಷ್ಣತೆ ಸೀಮಿತವಾಗಿದೆ ಇಡುತ್ತದೆ, ಮದುಮೇಹ, ಹೃದಯ, ತಲೆನೋವು, ಸುಸ್ತು, ಉದರ ಬೇನೆ, ಇತರೆ ರೋಗಳಿಗೆ ರಾಮಬಾಣ.

ಸಪೋಟ : ರೋಗ ನಿರೋಧಕ, ಸೋಂಕು ರೋಗಕ್ಕೆ, ಚರ್ಮ ರೋಗಕ್ಕೆ ಜೀರ್ಣ ಶಕ್ತಿಯನ್ನು ಹಾಗೂ ಚಯಪಚಯ ಗಳಿಗೆ ತುಂಬಾ ಅನುಕೂಲವಾಗುವ ಹಣ್ಣು.ದಯವಿಟ್ಟು ದಿನಕ್ಕೆ ಒಂದು ಹಣ್ಣು ಗಳಾನ್ನಾದರೂ ಸೇವಿಸಿ, ಜಿಪುಣತನ ಬೇಡ.

ಹಾಗೆಯೇ ನಮ್ಮ ರೈತರನ್ನು ಉಳಿಸಿ ಸಾಧ್ಯವಾದರೆ ಅವರು ಮಾರುವ ಹಣ್ಣುಗಳನ್ನು ಹೆಚ್ಚಾಗಿ ಕೊಂಡು ಕೊಳ್ಳಿ.ಹಣ್ಣು ಸೇವಿಸಿ ಅರೋಗ್ಯ ದಿಂದ ಇರಿ.ಧನ್ಯವಾದಗಳು.

ಅಡುಗೆ ಅನಿಲದ ಬಗೆಗಿನ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ: ಡಾ.ಸುರೇಶ್ ಬಿ.ಇಟ್ನಾಳ

Don't listen to false rumors about cooking gas: Dr. Suresh B. Itnal

ಅಡುಗೆ ಅನಿಲದ ಬಗೆಗಿನ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ: ಡಾ.ಸುರೇಶ್ ಬಿ.ಇಟ್ನಾಳ

ಕೊಪ್ಪಳ ಮಾರ್ಚ್ 16, (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್‌ಗಳ ದಾಸ್ತಾನು ಲಭ್ಯವಿದ್ದು, ಗ್ರಾಹಕರು ಗಾಬರಿಗೊಳ್ಳಬಾರದು ಹಾಗೂ ಸಿಲಿಂಡರ್ ಕೊರತೆ ಉಂಟಾಗಿದೆ ಎಂಬ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿ ಡಾ.ಸುರೇಶ್. ಬಿ. ಇಟ್ನಾಳ ಅವರು ತಿಳಿಸಿದ್ದಾರೆ.


ಜಿಲ್ಲೆಯಲ್ಲಿ ಗೃಹ ಬಳಕೆಯ ಅಡುಗೆ ಅನಿಲ ಕೊರತೆ ಇಲ್ಲವಾದ್ದರಿಂದ ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಹಾಗೂ ಗೃಹ ಬಳಕೆ ಅಡುಗೆ ಅನಿಲಕ್ಕೆ ಸಂಬಂಧಿಸಿದಂತೆ ಯಾವುದೇ ಕುಂದು ಕೊರತೆಗಳು ಇದ್ದಲ್ಲಿ ಕೊಪ್ಪಳ ಜಿಲ್ಲೆಯ ಗೃಹ ಬಳಕೆ ಅಡುಗೆ ಅನಿಲ ಗ್ರಾಹಕರು .

ಸಹಾಯವಾಣಿ ಸಂಖ್ಯೆ: 08539-221515 ಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ.17 ರಂದು ಕೊಪ್ಪಳದಲ್ಲಿ ಉದ್ಯೋಗ ಮೇಳ

Job fair in Koppal on March 17th

ಮಾ.17 ರಂದು ಕೊಪ್ಪಳದಲ್ಲಿ ಉದ್ಯೋಗ ಮೇಳ

ಕೊಪ್ಪಳ ಮಾರ್ಚ್ 16, (ಕರ್ನಾಟಕ ವಾರ್ತೆ): ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕೌಶಲ್ಯ ಮಿಷನ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಡಿಡಿಯು-ಜಿಕೆವೈ ಯೋಜನೆಯಡಿಯಲ್ಲಿ ಮಾ.17 ರಂದು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ತಂಗಡಗಿ ಶಿವರಾಜ ಸಂಗಪ್ಪ ಅವರು ನಡೆಸುವರು. ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಮಂತ್ರಿಗಳಾದ ಶರಣಪ್ರಕಾಶ ರುದ್ರಪ್ಪ ಪಾಟೀಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಸಚಿವರಾದ ಪ್ರಿಯಾಂಕ ಖರ್ಗೆ, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಶಾಸಕರಾದ ದೊಡ್ಡನಗೌಡ ಹನುಮಗೌಡ ಪಾಟೀಲ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಶಾಸಕರಾದ ಬಸವರಾಜ ರಾಯರಡ್ಡಿ ಅವರು ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸುವರು.
ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ಗಂಗಾವತಿ ಶಾಸಕರಾದ ಜಿ.ಜನಾರ್ಧನ ರೆಡ್ಡಿ, ವಿಧಾನ ಪರಿಷತ್ ಸದಸ್ಯರುಗಳಾದ ಶಶೀಲ್ ಜಿ.ನಮೋಶಿ, ಡಾ.ಚಂದ್ರಶೇಖರ ಬಿ.ಪಾಟೀಲ, ಶರಣಗೌಡ ಅನ್ನದಾನಗೌಡ ಪಾಟೀಲ ಬಯ್ಯಾಪೂರ ಹಾಗೂ ಹೇಮಲತಾ ನಾಯಕ, ಮುನಿರಾಬಾದ್ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ತುಂಗಭದ್ರಾ ಯೋಜನೆಯ ಅಧ್ಯಕ್ಷರಾದ ಹಸನಸಾಬ ನಬಿಸಾಬ ದೋಟಿಹಾಳ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ವಿ. ಗಡಾದ, ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಅವರು ಭಾಗವಹಿಸುವರು.
ವಿಶೇಷ ಆಹ್ವಾನಿತರಾಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಮನೋಜ್ ಕುಮಾರ್ ಮೀನಾ, ವಸತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಕೆ. ಪಿ ಮೋಹನ್‌ರಾಜ್, ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತರು ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ರಾಗಪ್ರಿಯ ಆರ್, ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಅಭಿಯಾನ ನಿರ್ದೇಶಕರಾದ ವಾಸರೆಡ್ಡಿ ವಿಜಯಾ ಜ್ಯೋತ್ಸ್ನಾ ಅವರು ಆಗಮಿಸುವರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣೀತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ದಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣಮೂರ್ತಿ ಟಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮನ್ಸೂರ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಮಂಜುಳಾ ಉಪ್ಪಾರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗವಿಶಂಕರ್ ಕೆ. ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವಾಯ್.ಬಿ. ಅಂಗಡಿ ಅವರು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ಮಾದಪ್ಪನ ಸನ್ನಿಧಿಯಲ್ಲಿ ನಡೆಯುವ ಯುಗಾದಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ ಕಾರ್ಯದರ್ಶಿ : ಎ ಇ ರಘು
All arrangements have been made for the devotees who will be attending the Ugadi fair held in the presence of Madappa. Secretary: A. E. Raghu

ಮಾದಪ್ಪನ ಸನ್ನಿಧಿಯಲ್ಲಿ ನಡೆಯುವ ಯುಗಾದಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ ಕಾರ್ಯದರ್ಶಿ : ಎ ಇ ರಘು.


ವರದಿ: ಬಂಗಾರಪ್ಪ .ಸಿ .


ಹನೂರು :ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೈ ಮಾದೇಶ್ವರ ಬೆಟ್ಟದಲ್ಲಿಇಂದಿನಿಂದ 16-03-2026 ರಿಂದ 19-03-2026 ರವರೆಗೆ ನಡೆಯಲಿರುವ ಚಂದ್ರಮಾನ ಯುಗಾದಿ ಹಬ್ಬದ ವಿಶೇಷ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜಾ ಕೈಂಕಾರ್ಯಗಳು ಹಾಗೂ ಮಹಾರಥೋತ್ಸವ ಭಕ್ತಿಭಾವದಿಂದ ನಡೆಯಲಿದೆ.
ಶ್ರೀ ಕ್ಷೇತ್ರಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ಪ್ರಾಧಿಕಾರ ವತಿಯಿಂದ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ಸಮಸ್ತ ಭಕ್ತಾದಿಗಳಿಗೆ ಸದುಪಯೋಗ ಪಡಿಸಿಕೊಳ್ಳಲು ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ ಇ ರಘು ತಿಳಿಸಿದರು.

ಇದೇ ತಿಂಗಳು ಜರುಗುವ
ಚಂದ್ರಮಾನ ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಭಕ್ತಾದಿಗಳಿಗೆ ವಿತರಿಸಲು ಲಾಡು ಪ್ರಸಾದವನ್ನು ವಿಶೇಷವಾಗಿ ತಯಾರಿಸಲಾಗುತ್ತಿದೆ.
ಭಕ್ತಾದಿಗಳಿಗೆ ಶುದ್ಧ ಹಾಗೂ ಗುಣಮಟ್ಟದ ಪ್ರಸಾದ ಸಿಗುವಂತೆ, ಲಾಡು ತಯಾರಿಕೆ ಕೊಠಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ದೇವಾಲಯದ ಪಾರುಪತ್ತೆದಾರರಾದ ಮಹಾದೇವಸ್ವಾಮಿ ಮಹಾಲಿಂಗನಕಟ್ಟೆ , ಪ್ರಾಧಿಕಾರದ ಮೇಲ್ವಿಚಾರಕರು ಹಾಗೂ ಸಿಬ್ಬಂದಿಗಳು ಸಹ ಉಪಸ್ಥಿತರಿದ್ದು ಸಿದ್ಧತೆಗಳನ್ನು ವೀಕ್ಷಿಸಿದರು.