ನಾಲ್ಕು ವರೆ ಕೋಟಿ ವೆಚ್ಚದಲ್ಲಿ ಸೇತುವೆ ಮತ್ತು ಸಿಸಿ ರಸ್ತೆ ಕಾಮಾಗಾರಿಗೆ ಗುದ್ದಲಿ ಪೂಜೆ :ಶಾಸಕ ಎಮ್ ಆರ್ ಮಂಜುನಾಥ್ .

Hudali puja for bridge and CC road work at a cost of four and a half crores: MLA MR Manjunath.

ನಾಲ್ಕು ವರೆ ಕೋಟಿ ವೆಚ್ಚದಲ್ಲಿ ಸೇತುವೆ ಮತ್ತು ಸಿಸಿ ರಸ್ತೆ ಕಾಮಾಗಾರಿಗೆ ಗುದ್ದಲಿ ಪೂಜೆ :ಶಾಸಕ ಎಮ್ ಆರ್ ಮಂಜುನಾಥ್

ಜಾಹೀರಾತು


ವರದಿ: ಬಂಗಾರಪ್ಪ .ಸಿ.
ಹನೂರು:ಕ್ಷೇತ್ರವ್ಯಾಪ್ತಿಯಲ್ಲಿನಲೊಕ್ಕನಹಳ್ಳಿ–ಒಡೆಯರಪಾಳ್ಯ ಮಾರ್ಗ ಮಧ್ಯದಲ್ಲಿರುವ ಮಸ್ಕಿತಹಳ್ಳ ಮತ್ತು ಜಡೆತಡೆ ಹಳ್ಳಗಳಿಗೆ ಅಡ್ಡಲಾಗಿ ದಾಟುವ ಸೇತುವೆ ಕಾಮಗಾರಿ ಹಾಗೂ ಮತ್ತೊಂದು ಸೇತುವೆಯನ್ನು ಮೇಲ್ಜರ್ಜೆಗೆರಿಸುವ ಕಾಮಗಾರಿಗೆ ಸುಮಾರು ಅಂದಾಜುವೆಚ್ಚ 04 ಕೋಟಿ ರೂಗಳ ವೆಚ್ಚದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಹನೂರು ತಾಲೂಕಿನ ಪಿಜಿ ಪಾಳ್ಯದ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ
ಬಳಿಕ ಮಾತನಾಡಿದ ಶಾಸಕರು, ಪಿಜಿ ಪಾಳ್ಯ–ಒಡೆಯರಪಾಳ್ಯ ಮುಖ್ಯ ರಸ್ತೆ ನೆರೆಯ ತಮಿಳುನಾಡು ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದ್ದು, ದಿನನಿತ್ಯ ಅಪಾರ ಸಂಖ್ಯೆಯ ವಾಹನಗಳು ಹಾಗೂ ನೂರಾರು ಗೂಡ್ಸ್ ವಾಹನಗಳು ಸಂಚರಿಸುತ್ತವೆ. ಆದರೆ ಮಳೆಗಾಲದಲ್ಲಿ ಹಳ್ಳಗಳಲ್ಲಿ ರಭಸವಾಗಿ ನೀರು ಹರಿದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು. ಎಂದರು.

ಈ ಹಿನ್ನೆಲೆಯಲ್ಲಿ ಜಡೆತಡೆ ಹಳ್ಳಕ್ಕೆ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ಹಾಗೂ ಪಿಜಿ ಪಾಳ್ಯ ಹತ್ತಿರದ ಮಸ್ಕಿತಹಳ್ಳಕ್ಕೆ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಾಗಾರಿಗೆ ಗುದ್ದಲಿ ಪೂಜೆ ಮಾಡುತ್ತಿದ್ದು . ಕಾಮಗಾರಿಯು ಉತ್ತಮ ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಂಬಂಧಿಸಿದವರಿಗೆ ಸೂಚಿಸಿದರು

ಇದಲ್ಲದೆ ಪಿ. ಜಿ. ಪಾಳ್ಯ ಗ್ರಾಮದ ಪರಿಶಿಷ್ಟ ಜಾತಿ ಬಡವಣೆಯಲ್ಲಿ ಎಸ್.ಇ.ಪಿ ಯೋಜನೆಯಡಿ ಸುಮಾರು 25 ಲಕ್ಷ ರೂ. ಮತ್ತು ಹುಣಸೇ ಪಾಳ್ಯ ಗ್ರಾಮದ ಪರಿಶಿಷ್ಟ ಜಾತಿ ಬಡವಣೆಯಲ್ಲಿ ಎಸ್. ಇ. ಪಿ.ಪಿ ಯೋಜನೆ ಅನುಧಾನದಡಿ ಸುಮಾರು 25 ಲಕ್ಷ ರೂ ಅಂದಾಜು ವೆಚ್ಚದಲ್ಲಿ ಸಿಸಿರಸ್ತೆ ನಿರ್ಮಾಣ ಕಾಮಾಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಇದೆ ಸಮಯದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಪುರುಷೋತ್ತಮ್, ಎಇ ಸುರೇಂದ್ರ, ಮುಖಂಡರುಗಳಾದ ಬಿಳಿಗಿರಿ ಮಹದೇವಸ್ವಾಮಿ, ಜಿ ಎಂ ಮಾದೇಶ್, ನಿಂಗಶೆಟ್ಟಿ ಜಡರುದ್ರಸ್ವಾಮಿ, ಕೃಷ್ಣಮೂರ್ತಿ, ಸಿದ್ದರಾಜು, ಚಿಕ್ಕರಾಜಶೆಟ್ಟಿ, ಚಿನ್ನಸ್ವಾಮಿ, ಬೇಕ್ರಿ ಶಿವಕುಮಾರ್, ಸೆಲ್ವಂ, ಮಹೇಂದ್ರ,ರವಿ, ಸಣ್ಣಮಾದ, ಸೋಮಶೇಖರ್, ನಾಗೇಂದ್ರ, ಮಧುಸೂದನ್, ಎಂ ಎಸ್ ಸಿ ಮಹದೇಸ್ವಾಮಿ, ನಾಗರಾಜು, ಪುನೀತ್, ಉದ್ದನೂರು ಶಾಂತರಾಜು, ಗಿರೀಶ್ ಪ್ರಮೋದ್, ವೆಂಕಟೇಶ್, ಗೋವಿಂದ, ವಿಜಯ್ ಕುಮಾರ್, ನಟರಾಜು, ಪ್ರಭುಸ್ವಾಮಿ,ಹಾಗೂ ಇನ್ನಿತರರು ಹಾಜರಿದ್ದರು,