ಇಂದರಗಿಯಲ್ಲಿ ಅದ್ದೂರಿಯಾಗಿ ಜರುಗಿದ ಶಾಲಾ ವಾರ್ಷಿಕೋತ್ಸವ
School anniversary celebrated with grandeur in Indaragi

ಇಂದರಗಿಯಲ್ಲಿ ಅದ್ದೂರಿಯಾಗಿ ಜರುಗಿದ ಶಾಲಾ ವಾರ್ಷಿಕೋತ್ಸವ
ಗಂಗಾವತಿ:ಮಾ.14:ಶಾಲಾ ವಾರ್ಷಿಕೋತ್ಸವವು ಕೇವಲ ಒಂದು ಹಬ್ಬವಲ್ಲ; ಅದು ವಿದ್ಯಾರ್ಥಿಗಳ ಒಂದು ವರ್ಷದ ಪರಿಶ್ರಮ, ಶಿಸ್ತಿನ ಜೀವನ ಮತ್ತು ಸಾಧನೆಗಳ ಸಂಭ್ರಮವಾಗಿದೆ.ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್ಸಿ ಅಧ್ಯಕ್ಷ ಡಾ.ಅಮರೇಶ ಕುಂಬಾರ ಹೇಳಿದರು.
ಕೊಪ್ಪಳ ತಾಲೂಕು ಗಂಗಾವತಿ ವಿಧಾನ ಸಭಾ ಕ್ಷೇತ್ರದ ಇಂದರಗಿಯ ಶ್ರೀ ಇಂದ್ರೇಶ್ವರ ಹಿರಿಯ ಪ್ರಾಥಾಮಿಕ ಶಾಲೆಯ 16ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕಗಳಲ್ಲಿನ ಜ್ಞಾನವಲ್ಲ ಅದು ವ್ಯಕ್ತಿತ್ವ ನಿರ್ಮಾಣ, ನೈತಿಕ ಮೌಲ್ಯಗಳು ಮತ್ತು ಆತ್ಮವಿಶ್ವಾಸ ಬೆಳೆಸುವ ಪ್ರಕ್ರಿಯೆ ಮತ್ತು ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ವಿದ್ಯಾಭ್ಯಾಸ ನೀಡುತ್ತಿರುವ ನಮ್ಮ ಶಾಲೆ, ವಿದ್ಯಾರ್ಥಿಗಳಿಗೆ ಜಾಗತಿಕ ಜ್ಞಾನದ ಜೊತೆಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅರಿವು ನೀಡುತ್ತಿರುವುದು ಅತ್ಯಂತ ಶ್ಲಾಘನೀಯ.
ಇಂದು ಮಕ್ಕಳು ಪ್ರದರ್ಶಿಸುವ ನೃತ್ಯ, ಗಾಯನ, ನಾಟಕ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಅವರ ಅಡಗಿದ ಪ್ರತಿಭೆಗಳ ಸುಂದರ ಅಭಿವ್ಯಕ್ತಿಯಾಗಿವೆ. ವೇದಿಕೆಯ ಮೇಲೆ ನಿಲ್ಲುವ ಧೈರ್ಯವೇ ಅವರ ಭವಿಷ್ಯದ ನಾಯಕತ್ವ ಗುಣಗಳ ಆರಂಭವಾಗಿದೆ.
ಶಿಕ್ಷಕರ ಪರಿಶ್ರಮ,ಮುಖ್ಯವಾಗಿ ಪೋಷಕರು ಪ್ರೋತ್ಸಾಹ ಮತ್ತು ಮಕ್ಕಳ ಶ್ರದ್ಧೆ ಈ ಮೂರೂ ಸೇರಿ ಶಾಲೆಯ ಯಶಸ್ಸಿನ ಆಧಾರಸ್ತಂಭಗಳು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇತ್ತೀಚಿಗೆ ನಿಧಾನರಾದ ಗ್ರಾ.ಪಂ.ಸದಸ್ಯರು,ಶಿಕ್ಷಣ ಪ್ರೇಮಿಗಳಾದ ಡಾ.ನಾಗರಾಜ ಕಂಬಳಿ ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು 5ನಿಮಿಷ ಮೌನಚಾರಣೆ ಮಾಡಲಾಯಿತು, ಭಾಗವಹಿಸಿದ ಎಲ್ಲ ಗಣ್ಯರೊಂದಿಗೆ ಮಕ್ಕಳಿಗೆ ವಿವಿಧ ಆಟೋಟಗಳ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪ್ರಮಣ ಪತ್ರವನ್ನು ವಿತರಣೆಯ ಮಾಡಲಾಯಿತು,
ಈ ಸಂದರ್ಭದಲ್ಲಿ,ಶ್ರೀ ಇಂದ್ರೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಇಂದ್ರೇಶ ಕೊಳ್ಳಿ,ಶಾಲೆಯ ಮುಖ್ಯೋಪಾಧ್ಯಾಯರಾದ ಮಧುಸೂಧನ್ ಡೊಳ್ಳಿನ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ ಕುರಿ,ಉಪನ್ಯಾಸಕ ಹನುಮಗೌಡ ಗಬ್ಬೂರು,ಹನಮಂತಪ್ಪ ಕೊಳ್ಳಿ, ಪ್ರಾಥಮಿಕ ಕೃಷಿ ಪತ್ತಿನ ಸಂಘದ ಮಾಜಿ ಸದಸ್ಯ ಆನಂದ ಕುರಿ,ಗ್ರಾಮದ ಮುಖಂಡರಾದ ಬಾಳಪ್ಪ ಶಿರೂರು,ಮೈಲಾರಪ್ಪ. ಹರಿಜನ,,ಶಿವನಗೌಡ ಪೊ.ಪಾಟೀಲ್,ರಾಮಣ್ಣ ಮೂಗುತಿ,ಮಾರುತಿ ಹಡಪದ,ಶರಣಪ್ಪ ಬಿಳೇಬಾವಿ,ಆದೇಪ್ಪ ಬೆಟ್ಟಗೇರಿ, ಹನುಮೇಶ ಹರಿಜನ, ಅಮರೇಶ,ಕ.ಕಾ.ನಿ.ಪತ್ರಕರ್ತ ಸಂಘ ಕೊಪ್ಪಳ ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಡಾ.ಕೆ.ಎಂ.ಶರಣಯ್ಯಸ್ವಾಮಿ, ವಿಧ್ಯಾರ್ಥಿಗಳು ಹಾಗೂ ಪಾಲಕರು ಸೇರಿದಂತೆ ಇತರರು ಇದ್ದರು.


