ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್
Let's have a plastic-free lifestyle: Nagaraj S. Guttedar

ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್


ಗಂಗಾವತಿ: ನಗರದ ಪ್ರತಿಷ್ಠಿತ ಸಂಕಲ್ಪ ಮಹಿಳಾ ಮಹಾವಿದ್ಯಾಲಯದ ವಿದ್ಯರ‍್ಥಿಗಳು ರಾಷ್ಟ್ರೀಯ ಸೇವಾ ಯೋಜನೆ ಕರ‍್ಯಕ್ರಮದ ಅಡಿಯಲ್ಲಿ ಹಿರೇಜಂತಕಲ್ ಹಾಗೂ ವಿಪ್ರ ಪ್ರದೇಶದಲ್ಲಿ ಶ್ರಮದಾನ ಮಾಡುವ ಮೂಲಕ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ವಸ್ತುಗಳನ್ನು ಆಯ್ದು ಪ್ರದೇಶವನ್ನು ಸ್ವಚ್ಛಗೊಳಿಸುತ್ತಿರುವ ಸಂರ‍್ಭದಲ್ಲಿ ಅಲ್ಲಿಗೆ ಭೇಟಿ ನೀಡಿ ಮಾತನಾಡಿದ ಸಂಕಲ್ಪ ಪದವಿ ಮಹಿಳಾ ಮಹಾವಿದ್ಯಾಲಯ ಕರ‍್ಯಾಧ್ಯಕ್ಷರು ಹಾಗೂ ವಕೀಲರಾದ ನಾಗರಾಜ್ ಗುತ್ತೇದಾರ್ ಅವರು, ಪರಿಸರಕ್ಕೆ ಮಾರಕವಾದ ಏಕ ಬಳಕೆ ಪ್ಲಾಸ್ಟಿಕ್ ಅನ್ನು ನಾವುಗಳೆಲ್ಲ ಸ್ವ ಇಚ್ಛೆಯಿಂದ ತ್ಯಜಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಜೀವನಶೈಲಿಗೆ ಬದಲಾಗಬೇಕಿದೆ.

ಆ ಮೂಲಕ ಹಿರಿಯರಿಂದ ಬಳುವಳಿಯಾಗಿ ಬಂದ ಸುಂದರ-ಸ್ವಚ್ಚ ಪರಿಸರವನ್ನು ಯಥಾವತ್ತಾಗಿ ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಸಾಧ್ಯವಾಗುತ್ತದೆ.

ನಾಗರೀಕತೆಯ ಬೆಳವಣಿಗೆಯ ಭಾಗವಾಗಿ ದಿನನಿತ್ಯದ ಜೀವನಶೈಲಿಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಅತಿಯಾಗಿ ಅವುಗಳು ಪರಿಸರಕ್ಕೆ ಮತ್ತು ಮಾನವನ ಆರೋಗ್ಯಕ್ಕೆ ತೀವ್ರವಾದ ಹಾನಿಯನ್ನು ಉಂಟುಮಾಡುತ್ತಿವೆ ಎಂದು ತಿಳಿಸಿದರು.


ಪ್ಲಾಸ್ಟಿಕ್ ವಸ್ತುಗಳ ಬದಲಾಗಿ ರ‍್ಯಾಯ ಬಳಕೆಯ ಕಡೆಗೆ ನಾವೆಲ್ಲ ಗಮನಹರಿಸುವ ಮೂಲಕ ಆರೋಗ್ಯ ಪರ‍್ಣ ಸಮಾಜ ನರ‍್ಮಾಣಕ್ಕೆ ಮುನ್ನುಡಿ ಬರೆಯಬೇಕಾಗಿದೆ ಎಂದು ಕರೆ ನೀಡಿದರು. ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ಹಲವಾರು ಕಾಯ್ದೆ ಕಾನೂನುಗಳಿದ್ದರೂ ಸಹ ಜನ ಅವುಗಳನ್ನು ಗಮನಿಸದೆ ಮುಂದುವರೆದಲ್ಲಿ ಮಾನವ ಸಂಕುಲ ಅಪಾಯಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲ.

ಹಾಗಾಗಿ ಈ ಪವಿತ್ರ ಪರಿಸರದಲ್ಲಿ ವಾಸಿಸುವ ನಾವೆಲ್ಲರೂ ನಮ್ಮ ಸ್ವ-ಇಚ್ಚೆಯಿಂದ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಹಾಗೂ ನಮ್ಮಗಳ ಆರೋಗ್ಯಯುತ ಜೀವನಕ್ಕೆ ಸಂಕಲ್ಪ ಮಾಡಬೇಕಾಗಿದೆ ಎಂದು ತಿಳಿಸಿದರು.
೨೦೨೧ ಆಗಸ್ಟ್ ೧೨ರಂದು ಕೇಂದ್ರ ಹಾಗೂ ರಾಜ್ಯ ರ‍್ಕಾರಗಳು ಹೊರಡಿಸಿದ ಅಧಿಸೂಚನೆಯಂತೆ ರಾಜ್ಯದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧವಿದ್ದರೂ ಅದನ್ನು ಸಂಪರ‍್ಣವಾಗಿ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ.

ಹಾಗಾಗಿ ನಾವೆಲ್ಲರೂ ರಕ್ಕಸ ಪ್ಲಾಸ್ಟಿಕ್ ಅನ್ನು ತ್ಯಜಿಸಿ ಉತ್ತಮ ಪರಿಸರ ಮತ್ತು ಸ್ವಸ್ಥ ಸಮಾಜ ನರ‍್ಮಾಣಕ್ಕೆ ಕೈಜೋಡಿಸಬೇಕಿದೆ ಎಂದು ಶಿಬಿರರ‍್ಥಿಗಳಿಗೆ ಕರೆ ನೀಡಿದರು.
ಈ ಸಂರ‍್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕರ‍್ಯಕ್ರಮ ಅಧಿಕಾರಿಗಳಾದ ರಮೇಶ್, ಶಿವಶರಣ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿಯಾದ ರಾಹುಲ್ ಉಪಸ್ಥಿತರಿದ್ದರು.

ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ ದಿನಾಚರಣೆ ನ್ಯಾಯವಾದಿ ನಂದಿನಿ ಸಲಹೆ

Women need legal knowledge: Lawyer Nandini's advice on Women's Day

ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ ದಿನಾಚರಣೆ ನ್ಯಾಯವಾದಿ ನಂದಿನಿ ಸಲಹೆ

ಗಂಗಾವತಿ : 14 ಪ್ರತಿ ಕ್ಷೇತ್ರದಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಸಾಧನೆ ಮಾಡಿದ್ದಾರೆ ಎಂದು ನ್ಯಾಯವಾದಿ ನಂದಿನಿ ಶ್ಲಾಘಿಸಿದರು.

ನಗರದ ಬಿಜೆಪಿ ಕಛೇರಿಯಲ್ಲಿ ನಗರ ಘಟಕ ಮಹಿಳಾ ಅಧ್ಯಕ್ಷರ ಆಶ್ರಯದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳೆ ತಾಯಿ , ಮಗಳು, ಅಕ್ಕ-ತಂಗಿ, ಗೆಳತಿ, ಹೆಂಡತಿಯಾಗಿ ಸರ್ವರಿಗೂ ಒಳಿತು ಬಯಸುತ್ತ ಸಂಸಾರ ನೌಕೆಯನ್ನು ಉತ್ತಮವಾಗಿ ಸಾಗಿತ್ತಿದ್ದಾರೆ. ಮಹಿಳೆಯನ್ನು ದೇವತೆಗಳಿಗೆ ಹೋಲಿಕೆ ಮಾಡಲಾಗುತ್ತದೆ. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಕೊಡಬೇಕು ಎಂಬ ಉದ್ಧೇಶದಿಂದ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಮಹಿಳೆಯರಿಗೆ ಕಾನೂನಿನಲ್ಲಿ ಸಿಗುವ ಸ್ಥಾನಮಾನ, ಮಹಿಳೆಯರ ಶೋಷಣೆ ತಡೆಗಟ್ಟುವ ಕ್ರಮಗಳ ಬಗ್ಗೆ ಚರ್ಚೆ ಅತ್ಯಗತ್ಯವಾಗಿದೆ ಎಂದು ಹೇಳಿದರು.

ಪುರುಷರಂತೆ ಮಹಿಳೆಯರೂ ಇರಬೇಕು ಎಂಬ ಉದ್ದೇಶ ಸಂವಿಧಾನ ವಿಶೇಷ ಸ್ಥಾನಮಾನ ಕೊಟ್ಟಿದೆ. ಎಲ್ಲಾ ರಂಗದಲ್ಲಿಯೂ ಇಂದು ತಮ್ಮ ಛಾಪು ಮೂಡಿಸಿದ್ದಾರೆ. ಮಹಿಳೆಯರಿಗೆ ಕಾನೂನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಮಹಿಳೆ ತಾಯಿ , ಮಗಳು, ಅಕ್ಕ-ತಂಗಿ, ಗೆಳತಿ, ಹೆಂಡತಿಯಾಗಿ ಸರ್ವರಿಗೂ ಒಳಿತು ಬಯಸುತ್ತ ಸಂಸಾರ ನೌಕೆಯನ್ನು ಉತ್ತಮವಾಗಿ ಸಾಗಿತ್ತಿದ್ದಾರೆ. ಮಹಿಳೆಯನ್ನು ದೇವತೆಗಳಿಗೆ ಹೋಲಿಕೆ ಮಾಡಲಾಗುತ್ತದೆ. ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಕೊಡಬೇಕು ಎಂಬ ಉದ್ಧೇಶದಿಂದ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಮಹಿಳೆಯರಿಗೆ ಕಾನೂನಿನಲ್ಲಿ ಸಿಗುವ ಸ್ಥಾನಮಾನ, ಮಹಿಳೆಯರ ಶೋಷಣೆ ತಡೆಗಟ್ಟುವ ಕ್ರಮಗಳ ಬಗ್ಗೆ ಚರ್ಚೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ನಂತರ ಮಾತನಾಡಿದ ಬಿಜೆಪಿ ಮಹಿಳಾ ನಗರ ಘಟಕ ಅಧ್ಯಕ್ಷ ಭಾರತಿ ಕೃಷ್ಣ ಆಗಲೂರು ಪ್ರಥಮ ಬಾರಿಗೆ ಬಿಜೆಪಿ ಕಚೇರಿಯಲ್ಲಿ ಮಹಿಳಾ ದಿನಾಚರಣೆ ಆಚರಣೆ ಮಾಡಿದಕ್ಕೆ ನನಗೆ ಸಂತೋಷವಾಗಿ ಅದೆ ರೀತಿ ನಮಗೆ ಸಹಾಯ ಮತ್ತು ಸಹಕಾರ ನೀಡಿದ ಜನಪ್ರಿಯ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಹಾಗೂ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಹಾಗೂ ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷರು ನಗರ ಘಟಕ ಅಧ್ಯಕ್ಷರು ಮತ್ತು ಬಿಜೆಪಿ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷರು ಕಾರ್ಯದರ್ಶಿ ಅದರ ಜೊತೆಗೆ ಗಂಗಾವತಿ ಎಲ್ಲಾ ಸಹೋದರಿಯರು ನನಗೆ ಪ್ರೋತ್ಸಾಹ ನೀಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಡಕ್ಕೆ ಕೈ ಜೋಡಿಸಿದ್ದಾರೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಪ್ರಮಾಣದ ಮಹಿಳೆಯರನ್ನು ಸೇರಿಸಿ ಕಾರ್ಯಕ್ರಮ ಮಾಡುತ್ತೇವೆ ಎಂದು ಭರವಸೆ ನೀಡಿದರು.
ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಮಹಿಳೆಯರಿಗೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಿದರು..
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಜಿಲ್ಲಾಧ್ಯಕ್ಷರಾದ ರತ್ನಕುಮಾರಿ,ಪ್ರಧಾನ ಕಾರ್ಯದರ್ಶಿ ಶೈಲಜಾ,ಕೀರ್ತಿ ಪಾಟೀಲ್, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ಮಾಲಾ ನಾಯಕ, ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ಡಿ.ಕೆ.ಆಗೋಲಿ, ನಗರ ಘಟಕ ಅಧ್ಯಕ್ಷರಾದ ಚಂದ್ರಶೇಖರ ಹಿರೂರು,ಮಹಿಳೆಯರಾದ ಕಮಲಮ್ಮ,ಲಲಿತಾ,ಹುಲಿಗೆಮ್ಮ ನಾಯಕ,ವಿಜಯಲಕ್ಷ್ಮಿ ಹಿರೇಮಠ, ಕಲ್ಲಮ್ಮ,ಸೌಭಾಗ್ಯ, ರಾಜೇಶ್ವರಿ,ರಾಧಾ ಉಮೇಶ,ಸೇರಿದಂತೆ ಇತರರು ಇದ್ದರು

ಸರ್ಕಾರ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಶಾಲಾ ದಾಖಲಾತಿ ಪ್ರಾರಂಭಿಸಿದ ಸಾಮರ್ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಗೆ ಎಚ್ಚರಿಕೆ

Government warns Samar International Islamic School for starting school enrollment in violation of court order

ಸರ್ಕಾರ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಶಾಲಾ ದಾಖಲಾತಿ ಪ್ರಾರಂಭಿಸಿದ ಸಾಮರ್ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಗೆ ಎಚ್ಚರಿಕೆ


ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಶಿಕ್ಷಣ ಸಂಯೋಜಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸೂಚನೆ.


ಬೆಂಗಳೂರು,ಮಾ.14: ಥಣಿಸಂದ್ರದ ಸಾಮರ್ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ನ ಮಾನ್ಯತೆ ರದ್ದಾಗಿದ್ದು, ಹೈಕೋರ್ಟ್ ಶಾಲಾ ದಾಖಲಾತಿ ಪ್ರಾರಂಭಿಸದಂತೆ ಆದೇಶಿಸಿದೆ.

ಸರ್ಕಾರ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಶಾಲಾ ದಾಖಲಾತಿ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಶಾಲಾ ಶಿಕ್ಷಣ ಇಲಾಖೆ ಶಾಲಾ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದೆ.


ಹೈಕೋರ್ಟ್ ನಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದ್ದು, 2026-2027 ನೇ ಸಾಲಿಗೆ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದಲ್ಲಿ ನ್ಯಾಯಾಲಯದ ನಿಂದನೆ ಮಾಡಿದಂತಾಗುತ್ತದೆ.

ಆದ್ದರಿಂದ ಹೈಕೋರ್ಟ್ ಆದೇಶದವರೆವಿಗೂ ಯಾವುದೇ ದಾಖಲಾತಿ ಪ್ರಾರಂಭಿಸಬಾರದು.

ಆದೇಶವನ್ನು ಉಲ್ಲಂಘಿಸಿ ದಾಖಲಾತಿ ಮಾಡಿಕೊಂಡರೆ ತಮ್ಮ ಶಾಲೆಯ ವಿರುದ್ಧ ನ್ಯಾಯಾಂಗ ನಿಂದನೆ ವರದಿಯನ್ನು ನ್ಯಾಯಾಲಯಕ್ಕೆ ಹಾಗೂ ಇಲಾಖಾ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ದಕ್ಷಿಣ ವಲಯದ -14 ರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಗಂಗೊಂಡನಹಳ್ಳಿಯ ಅಬ್ದುಲ್ ಹಮೀದ್ ಪಾಷ ಹಾಗೂ ಭಾರತಿ ನಗರದ ಅರ್ಷಿಯ ಮೊದಮ್ಮದಿ ಸರಿಷ್ ಸಲ್ಲಿಸಿರುವ ದೂರಿನ ಮೆರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಆಡಳಿತ ಮಂಡಳಿಗೆ ಸ್ಪಷ್ಟವಾದ ಎಚ್ಚರಿಕೆ ನೀಡಿದ್ದಾರೆ.


ದೂರು ಆಧರಿಸಿ ಪ್ರೌಢ ಶಾಲಾ ವಿಭಾಗದ ಶಿಕ್ಷಣ ಸಂಯೋಜಕರಾದ ರಂಗನಾಥ ಅವರಿಗೆ ಈ ಬಗ್ಗೆ ಪರಿಶೀಲಿಸಿ ಮೂರು ದಿನಗಳ ಒಳಗಾಗಿ ಸೂಕ್ತ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.


ಮಾನ್ಯತೆ ಇಲ್ಲದ ಈ ಸಂಸ್ಥೆ 6 ರಿಂದ 8 ನೇ ತರಗತಿಗೆ ಶಾಲಾ ದಾಖಲಾತಿ ಪ್ರಕ್ರಿಯೆ ಆರಂಭಿಸಿದೆ, ಹೈ ಕೋರ್ಟ್ ನಲ್ಲಿ ದಾಖಲಾತಿ ಮಾಡಿಕೊಳ್ಳುವುದಿಲ್ಲ ಎಂದು ಒಪ್ಪಿ ಶಾಲಾ ನಡೆಸುತ್ತಿದ್ದು ಈ ಎಲ್ಲಾ ನೀತಿ, ನಿಯಮ, ಕಾನೂನುಗಳನ್ನು ಉಲ್ಲಂಘಿಸಿದ್ದು, ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ತಕ್ಷಣವೇ ಕ್ರಮ ತೆಗೆದುಕೊಳ್ಳುವಂತೆ ಇವರು ಶಾಲಾ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದರು. ಶಾಲಾ ಆಡಳಿತ ಮಂಡಳಿ ಧೋರಣೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಗೊಂದಲಕ್ಕೆ ಸಿಲುಕಿದ್ದಾರೆ.

ಕೂಡಲೇ ಮಧ್ಯ ಪ್ರವೇಶಿಸಿ ಸ್ಪಷ್ಟ ನಿರ್ದೇಶನ ನೀಡಬೇಕೆಂದು ದೂರುದಾರರು ಕೋರಿದ್ದರು.
ಆಡಳಿತ ಮಂಡಳಿಯವರು ಶಾಲಾ ದಾಖಲಾತಿಯನ್ನು ಗುಪ್ತವಾಗಿ ಪ್ರಾರಂಭಿಸಿದ್ದು, ಸಂಗ್ರಹಿಸುತ್ತಿರುವ ಹಣಕ್ಕೆ ರಸೀದಿ ನೀಡುತ್ತಿಲ್ಲ. ನ್ಯಾಯಾಲಯದ ಅನುಮತಿ ಇಲ್ಲದೇ ಮುಂದಿನ ಶೈಕ್ಷಣಿಕ ಸಾಲಿಗೆ ದಾಖಲಾತಿ ಪ್ರಾರಂಭಿಸಬಾರದು.

ಮುಂದಿನ ವಿಚಾರಣೆವರೆಗೆ ಶಾಲೆಯ ಎಲ್ಲಾ ಚಟುವಟಿಕೆಗಳಿಗೆ ನ್ಯಾಯಾಲಯ ತಡೆ ನೀಡಿದೆ. ಹೀಗಿದ್ದರೂ ಶಾಲಾ ದಾಖಲಾತಿ ಪ್ರಾರಂಭಿಸಿರುವುದು ಸರಿಯಲ್ಲ ಎಂದು ದೂರುದಾರರು ಸರ್ಕಾರದ ಗಮನ ಸೆಳೆದಿದ್ದಾರೆ.

ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯ.

Karnataka Provincial Farmers' Association demands justice for Kudathini land victims.

ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯ.

ಬಳ್ಳಾರಿ: ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಕುಡತಿನಿ ಸೇರಿದಂತೆ ಹಲವು ಗ್ರಾಮಗಳ ರೈತರ ಭೂ ಸಮಸ್ಯೆಗೆ ನ್ಯಾಯ ಒದಗಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಸರ್ಕಾರವನ್ನು ಆಗ್ರಹಿಸಿದೆ.

ಸಂಘದ ಆರೋಪದ ಪ್ರಕಾರ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕುಡತಿನಿ, ಹರಗಿನಡೋಣಿ, ಜಾನೆಕುಂಟೆ, ವೇಣಿವೀರಾಪುರ, ಕೊಳಗಲ್ಲು, ಎರ್ರೆಂಗಳಿ ಮತ್ತು ಸಿದ್ದಮ್ಮನಹಳ್ಳಿ ಗ್ರಾಮಗಳ ಸುಮಾರು 13 ಸಾವಿರ ಎಕರೆ ಜಮೀನುಗಳನ್ನು ರೈತರ ಒಪ್ಪಿಗೆ ಇಲ್ಲದೆ ಕೈಗಾರಿಕೆಗಳಿಗಾಗಿ ಸ್ವಾಧೀನಪಡಿಸಿಕೊಂಡು ಕಳಪೆ ಬೆಲೆ ನಿಗದಿ ಮಾಡಲಾಗಿದೆ. ಇದರಿಂದ ಸಾವಿರಾರು ರೈತ ಕುಟುಂಬಗಳಿಗೆ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.

ಕಳೆದ 16 ವರ್ಷಗಳಿಂದ ಕೈಗಾರಿಕೆಗಳು ಸ್ಥಾಪನೆಯಾಗದೆ ರೈತರಿಗೆ ಉದ್ಯೋಗವೂ ಸಿಗಲಿಲ್ಲ, ಇದರಿಂದ ರೈತರು ದೊಡ್ಡ ನಷ್ಟ ಅನುಭವಿಸಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ತಿಳಿಸಿದೆ.

ಆದ್ದರಿಂದ ವಂಚಕ ಭೂ ಬೆಲೆ ರದ್ದುಪಡಿಸಿ, ರೈತರಿಗೆ ನ್ಯಾಯಸಮ್ಮತ ಭೂ ಬೆಲೆ ನಿಗದಿ ಮಾಡಬೇಕು ಅಥವಾ ಜಮೀನುಗಳನ್ನು ಮರಳಿ ನೀಡಬೇಕು. ಜೊತೆಗೆ 16 ವರ್ಷಗಳ ನಿರುದ್ಯೋಗ ಭತ್ಯೆಯಾಗಿ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಸರ್ಕಾರವನ್ನು ಒತ್ತಾಯಿಸಿದೆ.

ಈ ಕುರಿತು ರೈತ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ಹೊಸಳ್ಳಿ, ಜಿಲ್ಲಾ ಕಾರ್ಯದರ್ಶಿ ಶಿವಣ್ಣ ಬೆಣಕಲ್ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.

ಗೊರಗೋಡನಹಳ್ಳಿ 31ನೇ ವಾರ್ಡ್ ನಲ್ಲಿ 11 ಕೆ ವಿ ವಿದ್ಯುತ್ ಕಂಬ ಸೇರಿಸಿಕೊಂಡು ಧನದ ಶೆಡ್ ನಿರ್ಮಾಣ.ಬೆಸ್ಕಾಂ ಅಧಿಕಾರಿಗಳ ಜಾಣ ಮೌನ
Construction of a money shed by adding an 11 KV electricity pole in Ward 31 of Goragodanahalli. The wise silence of BESCOM officials.

ಗೊರಗೋಡನಹಳ್ಳಿ 31ನೇ ವಾರ್ಡ್ ನಲ್ಲಿ 11 ಕೆ ವಿ ವಿದ್ಯುತ್ ಕಂಬ ಸೇರಿಸಿಕೊಂಡು ಧನದ ಶೆಡ್ ನಿರ್ಮಾಣ.ಬೆಸ್ಕಾಂ ಅಧಿಕಾರಿಗಳ ಜಾಣ ಮೌನ.ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದರೂ ಕ್ರಮವಹಿಸಿಲ್ಲ.

ತಿಪಟೂರು.ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ್ ಅವರ ತವರಿನ ಕ್ಷೇತ್ರದಲ್ಲೇ ದಿನೇ ದಿನೇ ದಲಿತ ಕುಟುಂಬಗಳು ಅನ್ಯಾಯಕ್ಕೆ ಒಳಗಾಗುತ್ತಿರುವ ಘಟನೆ ಬೆಳಕಿಗೆ ಬರುತ್ತಲೇ ಇವೆ .

ತಿಪಟೂರು ನಗರದ 31ನೇ ವಾರ್ಡ್‌ನ ಗೊರಗೊಂಡನಹಳ್ಳಿ ಗ್ರಾಮದ ದಲಿತ ಕುಟುಂಬಗಳು ಸವರ್ಣೀಯರ ದೌರ್ಜನ್ಯ ಹಾಗೂ ದಬ್ಬಾಳಿಕೆಯಿಂದ ಭಯಭೀತದ ಜೀವನ ಸಾಗಿಸುವಂತಾಗಿದೆ ಎಂದು ದಲಿತ ಕುಟುಂಬಗಳು ಆರೋಪಿಸಿದ್ದಾರೆ.

ಸ್ವಾತಂತ್ರ್ಯ ಬಂದು ಸುಮಾರು ದಶಕಗಳೇ ಕಳೆದರೂ ದಲಿತರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿಲ್ಲ ಎಂಬ ತಮ್ಮ ಅಳಲನ್ನ ಗ್ರಾಮಸ್ಥರು ಮಾಧ್ಯಮದ ಮುಂದೆ ತೊಡಿಕೊಂಡರು.

ಗೊರಗೊಂಡನಹಳ್ಳಿ ಗ್ರಾಮದ ಸರ್ವೆ ನಂ. 90/4ಎ2ರಲ್ಲಿ ರಸ್ತೆಗೆ ಅಡ್ಡವಾಗಿ ದನದ ಸಾಕಾಣಿಕೆ ಶೆಡ್ ಸಂಪೂರ್ಣವಾಗಿ ಕಬ್ಬಿಣದ ದಿಂದ ಮಾಡಲಾಗಿದ್ದು 11 ಕೆ.ವಿ. ವಿದ್ಯುತ್ ಲೈನ್ ಕಂಬ ಶೆಡ್ ಒಳಗೆ ಸೇರಿಸಿಕೊಂಡು ನಿರ್ಮಾಣ ಮಾಡಿರುವುದರಿಂದ ಯಾವಾಗ ಬೇಕಾದರೂ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರ ಆತಂಕವಾಗಿದೆ

ಗ್ರಾಮದ ಸವರ್ಣೀಯರಾದ ಚೇರ್ಮನ್ ಶಿವನಂಜಪ್ಪ ಅವರ ಕುಟುಂಬದವರು ಈ ಶೆಡ್ ನಿರ್ಮಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಶೆಡ್‌ನಲ್ಲಿ ಸುಮಾರು 7-9 ಸೀಮೆ ಹಸುಗಳನ್ನು ಸಾಕಲಾಗುತ್ತಿದೆ. ಆದರೆ ವಿದ್ಯುತ್ ಕಂಬದ ಪಕ್ಕದಲ್ಲೇ ಈ ಶೆಡ್ ನಿರ್ಮಾಣವಾದರೂ, ಒಂದು ವರ್ಷದ ಹಿಂದೆ ತೆರವುಗೊಳಿಸಲು ಅರ್ಜಿ ಸಲ್ಲಿಸಿದರು ಕೆ.ಇ.ಬಿ. ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದಲಿತ ಕುಟುಂಬಗಳು ಆರೋಪಿಸುತ್ತಿವೆ.

ಈ ಬಗ್ಗೆ ಮಾತನಾಡಿದ ದಲಿತ ಸಮುದಾಯದ ಕಾಂತರಾಜ್, “ಒಂದು ವರ್ಷದ ಹಿಂದೆ ಕೆ.ಇ.ಬಿ. ಇಲಾಖೆಗೆ ದೂರು ನೀಡಿದ್ದೇವೆ. ಆದರೆ ಇಂದಿಗೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ರಾಜಕೀಯ ಒತ್ತಡವೋ ಅಥವಾ ಬೇರೆ ಕಾರಣವೋ ಗೊತ್ತಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಲ್ಲದೆ, ಈ ವಿಷಯವನ್ನು ಪ್ರಶ್ನಿಸಲು ಹೋದಾಗ ನಮ್ಮ ಮೇಲೆ ಹಲ್ಲೆ ಮಾಡಲು ಮಚ್ಚು ಹಾರೆಗಳನ್ನು ತಂದು ದೌರ್ಜನ್ಯ ಹಲ್ಲೇ ಮಾಡಲು ಬರುತ್ತಾರೆ ಎಂದು ಅವರ ಆರೋಪವಾಗಿದೆ

ಇದರಿಂದ ದಲಿತ ಕುಟುಂಬಗಳು ನಿರಂತರ ಮಾನಸಿಕ ಒತ್ತಡದಲ್ಲಿ ಬದುಕುವ ದುಸ್ಥಿತಿ ನಿರ್ಮಾಣವಾಗಿದೆ

ಅದೇ ರೀತಿ, ಶೆಡ್‌ನಿಂದ ಬರುವ ಗಂಜಲು ಮತ್ತು ತ್ಯಾಜ್ಯವನ್ನು ನೇರವಾಗಿ ಚರಂಡಿ ಹಾಗೂ ರಸ್ತೆಗೆ ಬಿಡಲಾಗುತ್ತಿದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಮಲೇರಿಯಾ ಡೆಂಗ್ಯೂ ಅಂತಹ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ

ಈ ಹಿನ್ನೆಲೆಯಲ್ಲಿ ತಕ್ಷಣವೇ ಅಪಾಯಕಾರಿಯಾದ 11 ಕೆ.ವಿ. ವಿದ್ಯುತ್ ಕಂಬವನ್ನು ತೆರವುಗೊಳಿಸಿ, ಅಕ್ರಮವಾಗಿ ನಿರ್ಮಿಸಿರುವ ಶೆಡ್ ಮತ್ತು ಬೇಲಿಗಳನ್ನು ತೆರವುಗೊಳಿಸಬೇಕು. ಇಲ್ಲವಾದರೆ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ದಲಿತ ಕುಟುಂಬಗಳು ಎಚ್ಚರಿಕೆ ನೀಡಿದ್ದಾರೆ.

ಈ ವಿಷಯವನ್ನು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಎಸ್. ಪರಮೇಶ್ವರ್ ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಗ್ರಾಮಸ್ಥರ ದಲಿತ ಕುಟುಂಬಗಳ ಆಗ್ರಹವಾಗಿದೆ

ಸಂಬಂಧಪಟ್ಟವರ ಮೇಲೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಈಗಾದರೂ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುತ್ತಾರ ಎಂದು ಕಾದುನೋಡಬೇಕಾಗಿದೆ.
ವರದಿ ಮಂಜು ಗುರುಗದಹಳ್ಳಿ