ಲಿಂಗ ಸಾಮರಸ್ಯದಿಂದ ಮಹಿಳಾ ಸಬಲೀಕರಣ ಸಾಧ್ಯ ಡಾ. ಸುಷ್ಮಾ ಹೂಗಾರ
Women empowerment is possible through gender harmony. Dr. Sushma Hoogara
ವಿಜಯನಗರ(ಹೊಸಪೇಟೆ): ವಿಜಯನಗರ ಮಹಾವಿದ್ಯಾಲಯ, ಹೊಸಪೇಟೆ ಎನ್.ಎಸ್.ಎಸ್ ಘಟಕದಿಂದ ಆಯೋಜಿಸಿದ ವಿಶೇಷ ವಾರ್ಷಿಕ ಶಿಬಿರದ ಮೂರನೇ ದಿನದ ವಿಶೇಷ ಉಪನ್ಯಾಸಕ ಕಾರ್ಯಕ್ರಮದಲ್ಲಿ ಮಹಿಳೆ ಮತ್ತು ಪುರುಷ ತಮ್ಮ ನ್ಯೂನ್ಯತೆ ಮತ್ತು ಶಕ್ತಿಗಳನ್ನು ಅರಿತುಕೊಂಡು ಇಬ್ಬರೂ ಸಮ ಎಂದು ಸ್ವೀಕಾರ ಮಾಡಿಕೊಂಡು ಹೊಂದಾಣಿಕೆಯನ್ನು ರೂಢಿಸಿಕೊಂಡಲ್ಲಿ ಮಾತ್ರ ಬದುಕು ಅರ್ಥಪೂರ್ಣ ಎಂದು ವಿಜಯನಗರ ಕಾಲೇಜಿನ ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸೂಷ್ಮಾಹೂಗಾರ್ ಮಾಹಿತಿ ನೀಡಿದರು.ವಿಜಯನಗರ ಕಾಲೇಜಿನ ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸೂಷ್ಮಾಹೂಗಾರ್ ಅವರು ಮಹಿಳಾ ಸಬಲೀಕರಣ ಹಾಗೂ ಲಿಂಗಸಾಮರಸ್ಯದ ಅನಿವಾರ್ಯತೆಯ ಕುರಿತು ಮಾತನಾಡಿದರು.ಇಂದಿನ ಕಾಲದ ಮಹಿಳೆ,ಶಿಕ್ಷಣ ಪಡೆದಿದ್ದಾಳೆ,ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾಳೆ. ಆದರೆ ಇವುಗಳ ಆಧಾರದ ಮೇಲೆ ಮಹಿಳೆ ಸಬಲೆಯಾಗಿದ್ದಾಳೆ ಎಂದರೆ ಅದು ಕೇವಲ ಕಲ್ಪನೆ , ಮೊದಲಿನ ಕಾಲಕ್ಕೂ ಈಗಿನ ಕಾಲಕ್ಕೂ ಹೋಲಿಸಿದರೆ ಕೇವಲ ಶೋಷಣೆ ಆಯಾಮಗಳು ಬದಲಾಗಿವೆ, ಹೊರತು ಕಡಿಮೆಯಾಗಿಲ್ಲ. ಮಹಿಳಾ ಸಬಲೀಕರಣದ ಪ್ರಕ್ರಿಯೆ ನಡೆಯಬೇಕಾಗಿರುವುದು ಸಮಾಜದಲ್ಲಲ್ಲ ಸ್ತ್ರೀ ಹಾಗೂ ಪುರುಷನ ವೈಚಾರಿಕತೆಯಲ್ಲಿ ಮತ್ತು ಅವರ ದೃಷ್ಟಿ ಕೋನದಲ್ಲಿ ಬದಲಾವಣೆ ಅನಿವಾರ್ಯತೆ ಇದೆ. ಆತ್ಮವಿಶ್ವಾಸ ಆತ್ಮ ಗೌರವ ಮನುಷ್ಯನ ಅತಿ ದೊಡ್ಡ ಸಂಪತ್ತು, ಪ್ರತಿ ಮಹಿಳೆ ಆತ್ಮವಿಶ್ವಾಸ ಮತ್ತು ಆತ್ಮ ಗೌರವದಿಂದ ಜೀವನ ನಡೆಸಬೇಕು ಹಾಗೆಯೇ ಪ್ರತಿ ಸವಾಲುಗಳನ್ನು ಅವಕಾಶಗಳನ್ನಾಗಿ ಬದಲಾಯಿಸುವ ಛಲ ಹೊಂದಿರಬೇಕು ಎಂದು ಕರೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರಿಬಸಯ್ಯ ಅವರು ಮಹಿಳೆ ಮತ್ತು ಪುರುಷ ಎಂಬ ಭೇದಭಾವನ್ನು ಮಾಡದೇ ಎಲ್ಲರೂ ಮುನ್ನಡದರೆ ಸಮಸಮಾಜವನ್ನು ಕಾಣಲು ಸಾಧ್ಯ ಎಂದು ಹೇಳಿದರು. ಈ ವೇಳೆ ಎನ್. ಎಸ್. ಎಸ್ ನ ಕಾರ್ಯಕ್ರಮಾಧಿಕಾರಿ ಡಾ.ಗಾದೆಪ್ಪ ಹಾಗೂ ಡಾ. ವಿರೇಶ್ ಉಪಸ್ಥಿತರಿದ್ದರು ಮತ್ತು ಶಿಬಿರಾರ್ಥಿಗಳು, ಕಾಲೇಜಿನ ಉಪನ್ಯಾಸಕರು ಭಾಗವಹಿಸಿದ್ದರು.
ಇಂದಿನ ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟಕ್ಕೆ ಸ್ಫೂರ್ತಿ ಅಂತರರಾಷ್ಟ್ರೀಯ ಮಹಿಳಾ ದಿನ – ವಿಜಯಲಕ್ಷ್ಮಿ
ಕೊಪ್ಪಳ: ತಾಲೂಕಿನ ಹುಲಿಗಿದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(AIMSS) ಹಾಗೂ ಚಿಗುರು ಸಂಜೀವಿನಿ ಮಹಿಳಾ ಒಕ್ಕೂಟವತಿಯಿಂದ ಜಂಟಿಯಾಗಿ ಅಂತರ ರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ AIMSS ನ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ರವರು ಮಾತನಾಡುತ್ತಾ “ಮಾರ್ಚ್ 8- ಮಹಿಳಾ ದಿನವು ಒಂದು ಐತಿಹಾಸಿಕ ದಿನವಾಗಿದ್ದು, ನಮ್ಮ ಸಂಘಟನೆ ಈ ದಿನವನ್ನು ಒಂದು ಅರ್ಥಪೂರ್ಣ ದಿನವನ್ನಾಗಿ ದೇಶದಾದ್ಯಂತ ಆಚರಿಸುತ್ತಾ ಬಂದಿದೆ.
ಇಂದಿನ ದಿನಗಳಲ್ಲಿ ಮಹಿಳಾ ದಿನವನ್ನು ಕೇವಲ ಮಹಿಳೆಯರ ವೈಯಕ್ತಿಕ ಕರಕುಶಲತೆಯನ್ನು ಹಾಗೂ ಚಾಕಚಕ್ಯತೆಯನ್ನು ಹಾಡಿಹೊಗಳುವ ದಿನವಾಗಿ ವಿಜೃಂಭಿಸುತ್ತಿದ್ದಾರೆ. ಆದರೆ ಮಹಿಳಾ ದಿನದ ಇತಿಹಾಸವೆಂದರೆ ವಿಶ್ವದ ತುಳಿತಕ್ಕೊಳಗಾದ ಮಹಿಳೆಯರು ಸಂಘಟಿತ ಹೋರಾಟಕ್ಕೆ ಸಂಕಲ್ಪ ತೊಟ್ಟ ದಿನ. 1908 ಮಾರ್ಚ್ 8ರಂದು ಅಮೆರಿಕಾದ ನ್ಯೂಯಾರ್ಕಿನಲ್ಲಿ ಸಮಾನ ವೇತನಕ್ಕಾಗಿ ಹಾಗೂ ದುಡಿಮೆಯ ಕಾಲಾವಧಿ ದಿನಕ್ಕೆ 8 ಗಂಟೆಗಳನ್ನು ಮೀರಬಾರದೆಂದು ಒತ್ತಾಯಿಸಿ ದುಡಿಯುವ ಮಹಿಳೆಯರು ಬೀದಿಗಿಳಿದರು.
20 ರಿಂದ 30 ಸಾವಿರ ಮಹಿಳಾ ಕಾರ್ಮಿಕರು ಕೊರೆಯುವ ಚಳಿಯನ್ನು ಲೆಕ್ಕಿಸದೆ 13 ವಾರಗಳ ಕಾಲ ಹೋರಾಟ ನಡೆಸಿದರು. ಈ ನಿಶ್ಯಸ್ತ್ರ ಮಹಿಳೆಯರ ಮೇಲೆ ಅಲ್ಲಿನ ಸರ್ಕಾರ ಗುಂಡಿನ ಮಳೆಗೆರೆದಿದ್ದರ ಪರಿಣಾಮ ನ್ಯೂಯಾರ್ಕ್ ನ ಬೀದಿಗಳು ಕೆಂಪಾದವು.
ಆದರೆ ಇದರಿಂದ ಮಹಿಳಾ ಹೋರಾಟ ಹಿಮ್ಮೆಟ್ಟುವ ಬದಲಿಗೆ ಇದು ಮುಂದಿನ ಅನೇಕ ಹೋರಾಟಗಳಿಗೆ ನಾಂದಿ ಹಾಡಿತು.
ಕೊನೆಗೆ 1910ರಲ್ಲಿ ಸಮಾಜವಾದಿ ನಾಯಕಿ ಕ್ಲಾರಾ ಜೆಟ್ಕಿನ್ ರವರು ಕೊಪೆನ್ ಹೆಗನ್ ನಲ್ಲಿ ನಡೆದ ಎರಡನೇ ಅಂತರರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ನಲ್ಲಿ ಮಾರ್ಚ್ 8ನ್ನು ಅಂತರರಾಷ್ಟೀಯ ಮಹಿಳಾ ದಿನವಾಗಿ ಘೋಷಿಸಿದರು. ಅಂದಿನಿಂದ ಈ ದಿನವು ವಿಶ್ವದಾದ್ಯಂತ ಹೋರಾಟದ ದಿನವಾಗಿ ಆಚರಿಸಲ್ಪಡುತ್ತಿದೆ.
ಆದರೆ ಈ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ನೈಜ ಸ್ವಾತಂತ್ರ್ಯ, ಸಮಾನತೆ, ಗೌರವ ಮರೀಚಿಕೆಯಾಗಿಯೇ ಉಳಿದಿದೆ. ಬದಲಾಗಿ ದಿನನಿತ್ಯ ಮಹಿಳೆಯರು ಗರ್ಭಾವಸ್ಥೆಯಿಂದ ಹಿಡಿದು ಮಸಣದವರೆಗೂ ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ಸಂಖ್ಯೆ ಮಿತಿಮೀರಿದೆ.
ಮೂರು ತಿಂಗಳ ಹಸುಗೂಸಿನಿಂದ ಹಿಡಿದು ವಯೋವೃದ್ಧರ ಮೇಲೂ ಕೂಡ ಅತ್ಯಾಚಾರ ಹಾಗೂ ಕೊಲೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ.
ಸ್ತ್ರೀ ಭ್ರೂಣ ಹತ್ಯೆ, ಮರ್ಯಾದೆಗೇಡು ಹತ್ಯೆ , ಆಸಿಡ್ ದಾಳಿ ಹಾಗೆಯೇ ಸರ್ಕಾರವೇ ಹೇಳುತ್ತಿರುವ ಸಮೀಕ್ಷೆಯಂತೆ ಇತ್ತೀಚೆಗಂತೂ ಬಾಲಗರ್ಭಿಣಿಯರ ಸಂಖ್ಯೆ ಸಮಾಜವನ್ನು ಆಘಾತಕ್ಕೀಡು ಮಾಡಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಸಾಂಸ್ಕೃತಿಕ ಅಧ:ಪತನ. ಅಶ್ಲೀಲ ಸಿನಿಮಾ-ಸಾಹಿತ್ಯ ಹಾಗೂ ಮದ್ಯ-ಮಾದಕ ವಸ್ತುಗಳು.
ಸರ್ಕಾರ ಈ ಸಮಸ್ಯೆಗಳನ್ನ ಗಂಭೀರವಾಗಿ ಪರಿಗಣಿಸಿ ಅಶ್ಲೀಲತೆಗೆ ಕಡಿವಾಣ ಹಾಕಿ, ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ಖಾತ್ರಿಪಡಿಸಬೇಕು.
ಜೊತೆಗೆ ಮಹಾನ್ ಚೇತನಗಳಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ, ಮೇಡಂ ಕ್ಯೂರಿ ಅವರಂತಹ ಆದರ್ಶ ವ್ಯಕ್ತಿತ್ವಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕು ಎನ್ನುತ್ತಾ, ಸಮಾಜದಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಸ್ತ್ರೀ-ಪುರುಷರು ಒಗ್ಗಟ್ಟಾಗಿ ಧ್ವನಿ ಎತ್ತಿದರೆ ಮಾತ್ರ ಇಂತಹ ಮಹಿಳಾ ದಿನಾಚರಣೆಗಳು ನಿಜಕ್ಕೂ ಸಾರ್ಥಕವಾಗುತ್ತವೆ.
ಇದು ಕೇವಲ ಒಂದು ದಿನದ ಆಚರಣೆಗೆ ಮಾತ್ರ ಸೀಮಿತವಾಗಬಾರದು ಬದಲಿಗೆ ನಮ್ಮ ಮನೆ – ಮನಸ್ಸುಗಳನ್ನು ಹೊಕ್ಕು ಬದಲಾವಣೆಗೆ ನಾಂದಿ ಹಾಡಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಸನ್ನದ್ಧರಾಗೋಣ” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಚಿಗುರು ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಆರ್. ನಿಲ್ಲಮ್ಮ, ಪದಾಧಿಕಾರಿಗಳಾದ ಭಾಗ್ಯಲಕ್ಷ್ಮಿ, ಹುಸೇನ್ ಬೀ, ಯಮನೂರಮ್ಮ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ನಿಲ್ಲಮ್ಮ ಹಾಗೂ ಮಹಿಳೆಯರು ಉಪಸ್ಥಿತರಿದ್ದರು.
ಗಂಗಾವತಿ: ತಾಲೂಕಿನ ಹೊಸಕೇರಾ ಡಗ್ಗಿ ಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ “HPV ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಡಾಕ್ಟರ್ ಫರ್ಜಾನಾ ಜಾಸ್ಮಿನ್ ಚಾಲನೆ ನೀಡಿದರು, ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಡಿ ಶ್ರೀನಿವಾಸ್ ಹಾಗೂ ಶ್ರೀ ಮಂಜುನಾಥ ARS ಸಮಿತಿ ಸದಸ್ಯರು ಭಾಗಿಯಾಗಿದ್ದರು, ಜ್ಯೋತಿ ಬೆಳಗಿಸುವ ಮೂಲಕ ಮಾತನಾಡಿದ ಡಾಕ್ಟರ್ ಫರ್ಜಾನಾ ಜಾಸ್ಮಿನ್ , ಇಂದು ಅಂತರಾಷ್ಟ್ರೀಯ ಕಿಡ್ನಿ ದಿನ, ” ಆರೋಗ್ಯವೇ ಭಾಗ್ಯ” ಗಾದೆಗಳು ವೇದಗಳಿಗೆ ಸಮವಾಗಿವೆ. ಗಾದೆಗಳು ಹಿರಿಯರು ನುಡಿದ ನುಡಿಮುತ್ತುಗಳಾಗಿವೆ. ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ತುಂಬಾ ಅರ್ಥಪೂರ್ಣವಾದ ಗಾದೆ ಮಾತಾಗಿದೆ.ಮನುಷ್ಯನಿಗೆ ಆರೋಗ್ಯಕ್ಕಿಂತ ಬೆಲೆ ಬಾಳುವ ವಸ್ತು ಮತ್ತೊಂದಿಲ್ಲ. ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳೋಣ ಎಂದು ಹೇಳಿದರು, ನಿಮ್ಮ ಜನನಾಂಗಗಳ ಮೇಲೆ ಪರಿಣಾಮ ಬೀರುವ HPV ಸಾಮಾನ್ಯವಾಗಿ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ. ರೋಗಲಕ್ಷಣಗಳು ಕಂಡುಬಂದಾಗ, ವೈರಸ್‌ನ ಸಾಮಾನ್ಯ ಲಕ್ಷಣವೆಂದರೆ ನಿಮ್ಮ ಜನನಾಂಗದ ಪ್ರದೇಶದಲ್ಲಿನ ನರಹುಲಿಗಳು. ಜನನಾಂಗದ ನರಹುಲಿಗಳು ನಿಮ್ಮ ಚರ್ಮದ ಮೇಲೆ ಬೆಳೆಯುವ ಒರಟಾದ, ಹೂಕೋಸು ತರಹದ ಉಂಡೆಗಳಾಗಿವೆ. ಅವು ಚರ್ಮದ ಟ್ಯಾಗ್‌ಗಳಂತೆಯೂ ಕಾಣಿಸಿಕೊಳ್ಳಬಹುದು. ನೀವು ಕಡಿಮೆ-ಅಪಾಯದ HPV ಸೋಂಕಿಗೆ ಒಳಗಾದ ವಾರಗಳು, ತಿಂಗಳುಗಳು ಅಥವಾ ವರ್ಷಗಳ ನಂತರವೂ ಅವು ಕಾಣಿಸಿಕೊಳ್ಳಬಹುದು. ಜನನಾಂಗದ ನರಹುಲಿಗಳು ಸಾಂಕ್ರಾಮಿಕವಾಗಿವೆ (ಎಲ್ಲಾ ರೀತಿಯ HPV ಗಳಂತೆ). ಅವು ತುರಿಕೆ ಮತ್ತು ತುಂಬಾ ಅನಾನುಕೂಲತೆಯನ್ನು ಉಂಟುಮಾಡಬಹುದು. ಹ್ಯೂಮನ್ ಪ್ಯಾಪಿಲೋಮವೈರಸ್ (HPV) ನಿಮ್ಮ ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುವ ಒಂದು ಸಾಮಾನ್ಯ ವೈರಸ್ ಆಗಿದೆ. ನಿಮ್ಮ ಕೈಗಳು, ಪಾದಗಳು ಮತ್ತು ಮುಖದ ಮೇಲೆ ನರಹುಲಿಗಳನ್ನು ಉಂಟುಮಾಡುವ HPV ತಳಿಗಳು ಸೇರಿದಂತೆ 100 ಕ್ಕೂ ಹೆಚ್ಚು ರೀತಿಯ HPVಗಳಿವೆ . ಸುಮಾರು 30 HPV ತಳಿಗಳು ನಿಮ್ಮ ಜನನಾಂಗಗಳ ಮೇಲೆ ಪರಿಣಾಮ ಬೀರಬಹುದು, ನಿಮ್ಮ ಯೋನಿ, ಯೋನಿ , ಗರ್ಭಕಂಠ, ಶಿಶ್ನ ಮತ್ತು ಸ್ಕ್ರೋಟಮ್ , ಹಾಗೆಯೇ ನಿಮ್ಮ ಗುದನಾಳ ಮತ್ತು ಗುದದ್ವಾರ ಸೇರಿದಂತೆ. ಇದು ಜನನಾಂಗದ ನರಹುಲಿಗಳನ್ನು ಉಂಟುಮಾಡುವ HPV ಪ್ರಕಾರವನ್ನು ಒಳಗೊಂಡಿದೆ ಎಂದರು. ಈ ಸಂದರ್ಭದಲ್ಲಿ ವೀರಣ್ಣ ಹರ್ತಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾಗಳು ಮತ್ತು ಶ್ರೀಮತಿ ಡಿ ಅಕ್ಕಿಮ್ಮ PHCO ಶ್ರೀಮತಿ ಸರಸ್ವತಿ PHCO ಶ್ರೀ ಮಾದಗೊಂಡ ಮಹೇಂದ್ರ HIO ಶ್ರೀ ಶರಣಪ್ಪ ಎಸ್ HIO, ಹೊಸಕೇರಾ ಗ್ರಾಮದ ಗುರು ಹಿರಿಯರು, ಗ್ರಾಮ ಪಂಚಾಯತ್ ಸದಸ್ಯರು, ಹಿರಿಯ ನಾಗರಿಕರು, ಫಲಾನುಭವಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಒಬ್ಬ ಮಹಾತ್ಮನ ಜೀವನವನ್ನು ಅಳೆಯುವುದು ಅವನು ಬದುಕಿದ ವರ್ಷಗಳಿಂದಲ್ಲ; ಅವನು ಬದುಕಿದ ಧ್ಯೇಯದಿಂದ. ಈ ದೃಷ್ಟಿಯಿಂದ ನೋಡಿದರೆ ಪರಮ ಪೂಜ್ಯ ಮಹಾಜಗದ್ಗುರು ಮಾತೆ ಮಹಾದೇವಿಯವರ ಜೀವನವು ಕೇವಲ ಒಂದು ವ್ಯಕ್ತಿಯ ಜೀವನಕಥೆಯಲ್ಲ, ಅದು ಲಿಂಗಾಯತ ಧರ್ಮದ ಪುನರುತ್ಥಾನ ಹೋರಾಟದ ಒಂದು ಮಹತ್ವದ ಅಧ್ಯಾಯ.
1946ರ ಮಾರ್ಚ್ 13ರಂದು ಜನಿಸಿದ ಅವರು, 2019ರ ಮಾರ್ಚ್ 14ರಂದು ಲಿಂಗೈಕ್ಯರಾದರು. ಹುಟ್ಟು ಮತ್ತು ಲಿಂಗೈಕ್ಯ ದಿನಾಂಕಗಳ ಈ ಸಮೀಪತೆ ಅವರ ಜೀವನದ ಒಂದು ತಾತ್ವಿಕ ಸಂಕೇತದಂತೆ ಕಾಣುತ್ತದೆ. ತಮ್ಮ ಪ್ರವಚನಗಳಲ್ಲಿ ಅವರು ಹೇಳುತ್ತಿದ್ದ ಮಾತು — “Date of Birth ಯಾವಾಗಲೂ Date of Death ಅನ್ನು ತನ್ನ ಹಿಂದೆಯೇ ಕಟ್ಟಿಕೊಂಡು ಬರುತ್ತದೆ.” — ಅವರ ಜೀವನದಲ್ಲೇ ಸಾರ್ಥಕವಾದಂತಾಗಿದೆ.
ಮಾತಾಜಿಯವರ ಜೀವನದ ಮಹತ್ವ ಕೇವಲ ಆಧ್ಯಾತ್ಮಿಕ ಕ್ಷೇತ್ರದಲ್ಲಷ್ಟೇ ಸೀಮಿತವಾಗಿಲ್ಲ. ಅದು ಸಾಮಾಜಿಕ ಜಾಗೃತಿ, ಧಾರ್ಮಿಕ ಪುನರುತ್ಥಾನ ಮತ್ತು ಮಾನವೀಯ ಮೌಲ್ಯಗಳ ಪುನರ್ ಸ್ಥಾಪನೆಯೊಂದಿಗೂ ಆಳವಾಗಿ ಜೋಡಿಕೊಂಡಿದೆ. ತಮ್ಮ 73 ವರ್ಷಗಳ ಜೀವನದಲ್ಲಿ 54 ವರ್ಷಗಳನ್ನು ಅವರು ಧರ್ಮಸೇವೆಗೆ ಸಮರ್ಪಿಸಿದರು. ಕೇವಲ 19ನೇ ವಯಸ್ಸಿನಲ್ಲಿ ಜಂಗಮ ದೀಕ್ಷೆ ಸ್ವೀಕರಿಸಿದ ಅವರು, ನಂತರದ ಜೀವನವನ್ನೆಲ್ಲ ಗುರು ಬಸವಣ್ಣನವರ ತತ್ವದ ಪ್ರಸಾರ ಮತ್ತು ಲಿಂಗಾಯತ ಧರ್ಮದ ಸ್ವತಂತ್ರ ಗುರುತಿನ ಹೋರಾಟಕ್ಕೆ ಮೀಸಲಿಟ್ಟರು.
ಲಿಂಗಾಯತ ಧರ್ಮದಲ್ಲಿ ಸಾವು ಭಯದ ವಿಷಯವಲ್ಲ; ಅದು ಜೀವನದ ಅಂತಿಮ ಸಂಭ್ರಮ. ಆದರೆ ಮಾತಾಜಿಯವರ ಜೀವನದಲ್ಲಿ ಒಂದು ವಿಶಿಷ್ಟ ವಿರೋಧಾಭಾಸ ಕಾಣುತ್ತದೆ. ಒಂದು ಕಡೆ ಅವರು ಸಾವನ್ನು ಸ್ವಾಗತಿಸಲು ಸಮಾಧಿಯನ್ನೇ ಮುಂಚಿತವಾಗಿ ಸಿದ್ಧಮಾಡಿಕೊಂಡಿದ್ದರು; ಇನ್ನೊಂದು ಕಡೆ ಧರ್ಮಕಾರ್ಯ ಅಪೂರ್ಣವಾಗಿರುವುದರಿಂದ ಇನ್ನೂ ಬದುಕಬೇಕು ಎಂಬ ಸಂಕಲ್ಪದಿಂದ ಅವರು ಸಾವಿನೊಡನೆ ಯುದ್ಧ ಮಾಡಿದರು. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ದೊರಕಿಸಬೇಕೆಂಬ ಮಹತ್ತರ ಗುರಿ ಅವರ ಮುಂದಿತ್ತು. ಅದಕ್ಕಾಗಿಯೇ ತಮ್ಮ ಜೀವನದ ಕೊನೆಯ ವರ್ಷಗಳಲ್ಲಿ ಅವರು ದೇಹದ ಅಶಕ್ತಿಯ ನಡುವೆಯೂ ಅಸಾಧಾರಣ ಮನೋಬಲದಿಂದ ಬದುಕಿದರು.
ಮಾತಾಜಿಯವರ ತಪಸ್ಸಿನ ಆಳವನ್ನು ಅವರ ಜೀವನದ ಕೆಲವು ಘಟನೆಗಳು ಸ್ಪಷ್ಟಪಡಿಸುತ್ತವೆ. 1972ರಲ್ಲಿ ಬೆಂಗಳೂರಿನಲ್ಲಿ ಬಸವ ಮಂಟಪ ನಿರ್ಮಾಣವಾಗುವ ಸಂದರ್ಭದಲ್ಲಿ ಅವರು ಸ್ವತಃ ಕಟ್ಟಡ ಕಾಮಗಾರಿಯಲ್ಲಿ ಪಾಲ್ಗೊಂಡಿದ್ದರು. ತಲೆಯ ಮೇಲೆ ಸಿಮೆಂಟಿನ ಬುಟ್ಟಿಯನ್ನು ಹೊತ್ತು ದುಡಿಯುತ್ತಿದ್ದ ಅವರ ಚಿತ್ರಗಳು ಇಂದು ಕೇವಲ ನೆನಪುಗಳಲ್ಲ; ಅವು ಒಂದು ತತ್ವದ ಜೀವಂತ ರೂಪಕ.
ಈ ಸಂದರ್ಭದಲ್ಲಿ ಸರ್ವಜ್ಞನ ವಚನ ಅನಾಯಾಸವಾಗಿ ನೆನಪಾಗುತ್ತದೆ:
ಇಂದು ಬೆಂಗಳೂರಿನ ಬಸವ ಮಂಟಪ ಕಟ್ಟಡವು ಕೇವಲ ಒಂದು ಧಾರ್ಮಿಕ ಕೇಂದ್ರವಲ್ಲ; ಅದು ತ್ಯಾಗ, ಪರಿಶ್ರಮ ಮತ್ತು ಆಧ್ಯಾತ್ಮಿಕ ದೃಢಸಂಕಲ್ಪಗಳ ಸಂಕೇತವಾಗಿದೆ.
ಮಾತಾಜಿಯವರು ಆಗರ್ಭ ಶ್ರೀಮಂತ ಮನೆತನದಲ್ಲಿ ಜನಿಸಿದರು. ಅವರ ತಂದೆ ಶರಣ ಡಾ. ಬಸಪ್ಪನವರು ಆ ನಿವೇಶನದಲ್ಲಿ ನರ್ಸಿಂಗ್ ಹೋಮ್ ನಿರ್ಮಿಸಿ ತಮ್ಮ ಮಗಳನ್ನು ವೈದ್ಯೆಯನ್ನಾಗಿ ಮಾಡುವ ಕನಸು ಕಂಡಿದ್ದರು. ಆದರೆ ಇತಿಹಾಸವು ಬೇರೆ ದಿಕ್ಕಿನಲ್ಲಿ ಸಾಗಿತು. ಆ ಸ್ಥಳದಲ್ಲಿ ಆಸ್ಪತ್ರೆಯ ಬದಲು ಬಸವ ಮಂಟಪ ನಿರ್ಮಾಣವಾಯಿತು. ಅವರು ವೈದ್ಯೆಯಾಗಲಿಲ್ಲ; ಆದರೆ ಭವರೋಗ ವೈದ್ಯೆಯಾದರು. ನಿರಾಶೆ, ನಿಸ್ಸಹಾಯಕತೆ ಮತ್ತು ಜೀವನದ ಸಂಕಟಗಳಲ್ಲಿ ಸಿಲುಕಿದ್ದ ಅನೇಕ ಜನರಿಗೆ ಅವರ ಪ್ರವಚನಗಳು ಹೊಸ ಆಶಾಕಿರಣವಾಗಿ ಪರಿಣಮಿಸಿದವು.
ಒಂದು ಪ್ರವಚನ ಕೇಳಿ ಆತ್ಮಹತ್ಯೆಯ ನಿರ್ಧಾರದಿಂದ ಹಿಂದಿರುಗಿದ ಜನರ ಕಥೆಗಳು ಅನೇಕ. ಅವರ ಮಾತುಗಳು ಕೇವಲ ಧಾರ್ಮಿಕ ಉಪದೇಶಗಳಲ್ಲ; ಅವು ಬದುಕನ್ನು ಮರು ರೂಪಿಸುವ ಆಧ್ಯಾತ್ಮಿಕ ಶಕ್ತಿ ಹೊಂದಿದ್ದವು.
ಮಾತಾಜಿಯವರು ಕೇವಲ ಧರ್ಮಗುರುಗಳಲ್ಲ. ಅವರು ವಿದ್ವಾಂಸಳು, ಕ್ರಾಂತಿಕಾರಿ ಲೇಖಕಿ, ಅಪೂರ್ವ ವಾಗ್ಮಿ ಮತ್ತು ಆಳವಾದ ಅಧ್ಯಯನಶೀಲ ಚಿಂತಕಿ. ಅವರ ಗ್ರಂಥಗಳು ಮತ್ತು ಪ್ರವಚನಗಳು ಲಿಂಗಾಯತ ಧರ್ಮದ ತಾತ್ವಿಕ ಪರಂಪರೆಗೆ ಹೊಸ ಜೀವ ತುಂಬಿವೆ.
ಮಹಾತ್ಮ ಬುದ್ಧನು ಜೀವನದ ನಶ್ವರತೆಯನ್ನು ಅರಿತು ಸತ್ಯದ ಹುಡುಕಾಟಕ್ಕೆ ಹೊರಟಂತೆ, ಮಾತಾಜಿಯವರು ಕೂಡ ಒಂದು ಪ್ರವಚನದಿಂದಲೇ ಜೀವನದ ದಿಕ್ಕು ಬದಲಿಸಿಕೊಂಡರು. ಶ್ರೀಮಂತ ಜೀವನವನ್ನು ತೊರೆದು ಸರಳತೆಯನ್ನು ಆರಿಸಿಕೊಂಡು ಬಸವ ತತ್ವಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿದರು.
ಅವರು ನೊಂದವರ ನಂದಾದೀಪ, ಶೋಷಿತರ ಸಂಜೀವಿನಿ, ಸ್ತ್ರೀಕುಲದ ಪ್ರೇರಣಾಸ್ವರೂಪಿ, ಧರ್ಮಕ್ರಾಂತಿಯ ದಿವ್ಯಜ್ಯೋತಿ. ಲಿಂಗಾಯತ ಧರ್ಮದ ಪುನರುತ್ಥಾನದಲ್ಲಿ ಅವರ ಪಾತ್ರ ಅಪೂರ್ವ.
ಇಂದು ಅವರ ಜಯಂತಿಯನ್ನು ಸ್ಮರಿಸುವ ಸಂದರ್ಭದಲ್ಲಿ ಒಂದು ಪ್ರಶ್ನೆ ನಮ್ಮ ಮುಂದಿರುತ್ತದೆ: ಧರ್ಮಕ್ಕಾಗಿ, ಸಮಾಜಕ್ಕಾಗಿ ಮತ್ತು ಮಾನವೀಯ ಮೌಲ್ಯಗಳಿಗಾಗಿ ನಾವು ಎಷ್ಟು ತ್ಯಾಗ ಮಾಡಲು ಸಿದ್ಧರಾಗಿದ್ದೇವೆ?
ಮಾತಾಜಿಯವರ ಜೀವನವು ನಮಗೆ ನೀಡುವ ಸಂದೇಶ ಸ್ಪಷ್ಟ — ಧರ್ಮಕ್ಕಾಗಿ ಬದುಕಿದ ಜೀವನವೇ ನಿಜವಾದ ಅಮರತ್ವ.
ನಿಮಿತ್ತ ಆಹಾರ ಸೇವನೆ ಉತ್ತಮ. ದಿನಕ್ಕೆ ೩ ಹೊತ್ತು ಊಟ ಬೇಡ ೨ ಹೊತ್ತು ಮಾಡಿ. ಕೆಲವರು ಮಧ್ಯಾಹ್ನ ಊಟ ಬಿಡುತ್ತಾರೆ, ಕೆಲವರು ರಾತ್ರಿ , ನನ್ನ ಸ್ನೇಹಿತರು ಒಬ್ಬರು ರಾತ್ರಿವೇಳೆ ಊಟ ಮಾಡುವುದಿಲ್ಲ. ನಾನು ಮಧ್ಯಾಹ್ನ ಮಾಡುವುದಿಲ್ಲ.
೧೫-೧೬ ವರ್ಷದಿಂದ ನನಗಿದು ಅಭ್ಯಾಸವಿಲ್ಲ. ಹೊಟ್ಟೆ ತುಂಬಾ ಊಟ ದಯವಿಟ್ಟು ಬೇಡ. ಕೇವಲ ಹಸಿವಿಗಾಗಿ ಮಾಡಿ. ಬುದ್ದಿ ತೀಕ್ಷ್ಣವಾಗಿರುತ್ತದೆ.
ಮನಸ್ಸು ಹಗುರಾಗಿರುತ್ತೆ, ದೇಹ ಸಂತಸದಿಂದಿರುತ್ತೆ . ಮೂರು ಹೊತ್ತು ಕತ್ತೆ ತರ ತಿಂದು ಜಿಮ್ ಗೆ ಹೋಗಿ, ಹಣ ಕೊಟ್ಟು ಕೊಬ್ಬು ಕರಗಿಸಿಕೊಳ್ಳಲು ನಿಮಗೆ ಇದೊಂದೆ ಕೆಲಸವೇನು !? ನೀವು ಮಾಡಬೇಕಿರುವ ಕೆಲಸ ಸಾಕಷ್ಟಿದೆ. ನಾನು ನಿಂದಿಸುತ್ತಿಲ್ಲ ಅಪಾರ್ಥ ಮಾಡಿಕೊಳ್ಳಬೇಡಿ, ದೇಹಕ್ಕೆ ಎಷ್ಟ ಕಡಿಮೇ ಆಹಾರದ ಅಗತ್ಯ ವಿರುತ್ತದೋ ಅಷ್ಟು ನಿಶ್ಚಿಂತೆ ನಿಮ್ಮದು.
ಮೈಸೂರಿನ ಮುಸ್ಲಿಂ ವ್ಯಕ್ತಿಯ ಕುಟುಂಬ ಒಂದು ನನ್ನ ಗುರುಗಳಿಗೆ ಪರಿಚಯವಿತ್ತು, ಅವರ ಇಡೀ ಕುಟುಂಬದ ಒಬ್ಬ ವ್ಯಕ್ತಿಯೂ ಊಟಮಾಡುತ್ತಿರಲಿಲ್ಲ, ದಿನದ ಮೂರು ಹೊತ್ತು ಕೇವಲ ಹಣ್ಣು ತರಕಾರಿ ಹಸಿ ಕಾಳುಗಳನ್ನು ತಿಂದು ಜೀವಿಸುತ್ತಿದ್ದರು.
ಇದು ನಿಜಕ್ಕೂ ನನಗೆ ಆಶ್ಚರ್ಯಕರ ಎನಿಸಿತು. ನಾನು ಇನ್ನಾದರೂ ಹೀಗೆ ಯಾಕಿಲ್ಲ .!? ಕಾರಣ ಕುಟುಂಬದ ಸದಸ್ಯರು ಎಲ್ಲರೂ ನಮ್ಮ ಅಭಿಪ್ರಾಯ ಹಾಗೂ ಹೇಳಿಕೆಯನ್ನು ತಿಳಿದು ಅನುಸರಿಸುವಂತಿರಬೇಕು. ಆಗ ಎಲ್ಲವೂ ಸಾದ್ಯ.
Dingri Nagaraj elected unopposed as the President of Karnataka Film Parents Artists Association for the third time
ಕರ್ನಾಟಕ ಚಲನಚಿತ್ರ ಪೋಷಕರ ಕಲಾವಿದರ ಸಂಘದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಡಿಂಗ್ರಿ ನಾಗರಾಜ್ ಅವಿರೋಧ ಆಯ್ಕೆ
ಬೆಂಗಳೂರು,ಮಾ.13: ಕರ್ನಾಟಕ ಚಲನಚಿತ್ರ ಪೋಷಕರ ಕಲಾವಿದರ ಸಂಘದ ಅಧ್ಯಕ್ಷರಾಗಿ ಹಿರಿಯ ನಟ, ರಂಗಭೂಮಿ ಕಲಾವಿದ ಡಿಂಗ್ರಿ ನಾಗರಾಜ್ ಮೂರನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಡುಗೋಡಿ ಶ್ರೀನಿವಾಸ್ ಎರಡನೇ ಬಾರಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷರಾದ ಗಂಡಸಿ ಸದಾನಂದ ಸ್ವಾಮಿ ಅವರು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, 79 ವರ್ಷ ವಯಸ್ಸಿನ ಡಿಂಗ್ರಿ ನಾಗರಾಜ್ ಅವರು 800 ಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿದ್ದು, ಹತ್ತು ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಐದು ದಶಕಗಳಿಗೂ ಅಧಿಕ ಸಮಯದಿಂದ ಕಲಾವಿದರಾಗಿರುವ ಡಿಂಗ್ರಿ ನಾಗರಾಜ್, ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಕಲಾವಿದರಿಗೆ ನೆರವು ನೀಡಿದ್ದರು ಎಂದು ಮೆಚ್ಚುಗೆ ವ್ವಕ್ತಿಪಡಿಸಿದರು
ಜೊತೆಗೆ ಚಲನಚಿತ್ರ ನಟ ಹಾಗೂ ನಿರ್ಮಾಪಕರಾದ ಗಣೇಶ್ ರಾವ್ ಕೆಸರ್ಕಾರ್ ಮತ್ತು ಹಿರಿಯ ನಟಿ ನವನೀತಂ ಅಭಿನಂದನೆ ಸಲ್ಲಿಸಿ, ಸಂಘದ ಅಭಿವೃದ್ಧಿಗೆ ನೂತನ ಪದಾಧಿಕಾರಿಗಳು ಮತ್ತಷ್ಟು ಸೇವೆ ಸಲ್ಲಿಸಲಿ ಎಂದು ಹಾರೈಸಿದ್ದಾರೆ.
Magalamani urges Education Minister to campaign for admission to government schools
ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಲು ಶಿಕ್ಷಣ ಇಲಾಖೆ ಪ್ರಚಾರ ಮಾಡುವಂತೆ ಶಿಕ್ಷಣ ಸಚಿವರಿಗೆ ಮ್ಯಾಗಳಮನಿಒತ್ತಾಯ
ಗಂಗಾವತಿ :13 ಬಸ್ ಹಾಗೂ ಬಸ್ ನಿಲ್ದಾಣದಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳ ನ್ನು ಸೇರಿಸುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇವರನ್ನು ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಒತ್ತಾಯಿಸಿದ್ದಾರೆ.
ನಗರದ ಆನೆಗುಂದಿ ರಸ್ತೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕ್ಷೆತ್ರಶಿಕ್ಷಣಾಧಿಕಾರಿ ಕಾರ್ಯಲಯದ ವ್ಯವಸ್ಥಾಪಕ ಶಿವಪ್ರಸಾದ ಇವರಿಗೆ ಮನವಿ ಸಲ್ಲಿಸಿ ಮಾತನಾಡಿ ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ನಮ್ಮ ಮಾತೃ ಭಾಷೆ ಅವನತಿ ಹೊಂದುವ ಪರಿಸ್ಥಿತಿ ಬರುತ್ತದೆ.
ಆದ್ದರಿಂದ ಕನ್ನಡ ಉಳಿಯಬೇಕಾದರೆ ಸರ್ಕಾರಿ ಶಾಲೆಗಳು ಉಳಿಯಲೇ ಬೇಕು. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಿ ಕನ್ನಡ ಭಾಷೆ ಉಳಿಸಿ ಎಂಬ ಘೋಷ ವಾಕ್ಯ ಉಳ್ಳ ಬ್ಯಾನರ್ ಬಸ್ ನಿಲ್ದಾಣದಲ್ಲಿ ಹಾಕಿಸುವದು ಮತ್ತು ಬಸ್ ಗಳ ಮೇಲೆ ಘೋಷಣೆ ಯ ಸ್ಟಿಕರ್ ಅಂಟಿಸುವದು ಹಾಗೂ ಬಸ್ ನಿಲ್ದಾಣದಲ್ಲಿರುವ ದ್ವನಿವರ್ಧಕಗಳ ಮೂಲಕಪ್ರಚಾರ ಮಾಡಬೇಕು ಶಾಲಾ ಅವಧಿಯಲ್ಲಿ ಮಕ್ಕಳು ಮತ್ತು ಬಾಲ ಕಾರ್ಮಿಕ ಕೆಲಸದಲ್ಲಿ ಕಂಡು ಬಂದಲ್ಲಿ ಕೂಡಲೇ 1098 ಅಥವಾ 112 ನಂಬರ್ ಗೆ ಕರೆಮಾಡಲು ಸಾರ್ವಜನಿಕಮಾಹಿತಿಗಾಗಿ ರ ಪ್ರಚಾರಪಡಿಸಬೇಕೆಂದು ಒತ್ತಾಯಿಸಿದರು.
ಕಡಿಮೆ ಸಂಖ್ಯೆ ದಾಖಲಾತಿ ಇರುವ ಶಾಲೆಗಳನ್ನು ಕಡಿಮೆ ದಾಖಲಾತಿ ನೆಪದಲ್ಲಿ ಮುಚ್ಚುವ ಬದಲು ಪೂರ್ವ ಪ್ರಾಥಮಿಕ ತರಗತಿ ಪ್ರಾರಂಬಿಸುವದರ ಮೂಲಕ ಪುನಶ್ಚತನ ನೀಡಿ ಶಾಲೆಗಳನ್ನು ಮುಚ್ಚದಂತೆ ಕ್ರಮ ಕೈಗೊಳ್ಳಬೇಕು. ಈಗ ಜಾರಿಗೆ ತಂದಿರುವ ಕೆಪಿಸಿ ಮ್ಯಾಗ್ನೆಟ್ ಶಾಲೆಗಳನ್ನು ಆರಂಬಿಸುವದರಿಂದ ಸಾವಿರಾರು ಶಾಲೆಗಳು ಮುಚ್ಚಲಿವೆ ಇದರಿಂದ ಬಡ ಮಕ್ಕಳಿಗೆ ಸಾಕಷ್ಟು ತೊಂದರೆ ಉಂಟಾಗುತ್ತದೆ.
ಈ ಪದ್ಧತಿ ಅವೈದ್ನಾನಿಕವಾದದ್ದು ಕಿರಿಯ ಪ್ರಾಥಮಿಕ ಶಾಲೆಗಳು ಅದೇ ಗ್ರಾಮಗಳಲ್ಲಿ ಇರಲೆಬೇಕು.
ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಅಂದರೆ 6 ನೇ ತರಗತಿಯಿಂದ 10 ನೇ ತರಗತಿಯವರೆಗೆ ಗ್ರಾಮ ಪಂಚಾಯತ್ ಗೊಂದು ವಸತಿಯುತ ಶಾಲೆಗಳನ್ನು ಪ್ರಾರಂಬಿಸುವದರಿಂದ ಮಕ್ಕಳು ಶಾಲೆಯಿಂದ ಹೊರ ಉಳಿಯದೇ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಗ್ರಾಮ ಪಂಚಾಯತ್ ಗೊಂದು ವಸತಿ ಶಾಲೆ ಪ್ರಾರಂಭಿಸಬೇಕು.
ಸರ್ಕಾರಿ ಶಾಲಾ ಶಿಕ್ಷಕರು ಯಾವ ಉದ್ದೇಶಕ್ಕೆ ನೇಮಕಾತಿ ಹೊಂದಿರುವರೋ ಅದನ್ನು ಬಿಟ್ಟು ಅನ್ಯ ಕೆಲಸಗಳಿಗೆ ಸರ್ಕಾರ ಬಳಸಿಕೊಳ್ಳುತ್ತದೆ. ಬಿಸಿಯೂಟ, ಜನಗಣತಿ, ಜಾತಿ ಗಣತಿ, ಬಿ ಎಲ್, ಓ, ಸೇರಿದಂತೆ ಬೇರೆ ಕಾರ್ಯಗಳಿಗೆ ನಿಯೋಜನೆ ಮಾಡುವದರಿಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗುವದರಿಂದ ಪಾಲಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಖಾಸಗಿ ಶಾಲೆಗಳ ಮೊರೆ ಹೋಗುವ ಪರಿಸ್ಥಿತಿ ಅನಿವಾರ್ಯವಾಗುತ್ತದೆ ಇದರಿಂದ ಸರ್ಕಾರಿ ಶಾಲೆಗಳು ಸುಲಭವಾಗಿ ಮುಚ್ಚುತ್ತವೆ.
ಅನ್ಯ ಕೆಲಸಗಳಿಗೆ ನಿರುದ್ಯೋಗ ಪದವೀಧರರನ್ನು ಬಳಸಿಕೊಂಡರೆ ಅವರಿಗೂ ಉದ್ಯೋಗ ಲಭಿಸಿದಂತಾಗುತ್ತದೆ.ಗುಣ ಮಟ್ಟದ ಕಲಿಕೆಯೂ ಸಿಗುತ್ತದೆ.
ಕಾರಣ ಶಿಕ್ಷಕರನ್ನು ಅನ್ಯ ಕಾರ್ಯ ಗಳಿಗೆ ನಿಯೋಜನೆ ಮಾಡಬಾರದು ಮತ್ತು ಈಗ ಹೋರಾಡಿಸಿರುವ ಶಾಲೆಗೊಬ್ಬ ಶಿಕ್ಷಕರನ್ನು ಶ್ವಾನ ನೋಡಲ್ ಅಧಿಕಾರಿ ಎಂದು ನೇಮಿಸುವ ಆದೇಶ ಕೂಡಲೇ ಹಿಂಪಡೆಯಬೇಕು.
ಮಳೆಗಾಲದಲ್ಲಿಯೇ ಜೂನ್ ತಿಂಗಳು ಶಾಲೆಗಳು ಪುನಃ ಪ್ರಾರಂಭವಾಗುತ್ತವೆ.
ಸೋರುತ್ತಿರುವ ಮತ್ತು ಅಪಾಯವಾಗುವ ಕೊಠಡಿಗಳನ್ನು ಶಾಲೆಗಳುಆರಂಬುವಾಗುವದರೊಳಗೆ ರಿಪೇರಿ ಮಾಡಿಸಿ ಮಕ್ಕಳಿಗೆ ಆಗುವ ತೊಂದರೆ ತಪ್ಪಿಸಲು ಕ್ರಮ ಕೈಗೊಳ್ಳಬೇಕೆಂದು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ರಾಘವೇಂದ್ರ ಕಡೆಬಾಗಿಲು, ಬಸವರಾಜ್ ನಾಯಕ, ಮೇಘರಾಜ್, ಗಣೇಶ್, ಜಂಬಣ್ಣ ಮತ್ತಿತರರು ಇದ್ದರು